ಲೆನ್ಸ್ ಕಾರ್ಟ್’ನ ಹೊಸ ಹಿಂದೂದ್ವೇಷ ಬಯಲು

ನವದೆಹಲಿ – ಕನ್ನಡಕಗಳನ್ನು ಮಾರಾಟ ಮಾಡುವ ‘ಲೆನ್ಸ್ ಕಾರ್ಟ್’ ಸಂಸ್ಥೆಯು ತನ್ನ ಹಿಂದೂ ನೌಕರರಿಗೆ ಧಾರ್ಮಿಕ ಚಿಹ್ನೆಗಳನ್ನು ಬಳಸದಂತೆ ನಿಷೇಧ ಹೇರಿದ್ದ ಪ್ರಕರಣದಲ್ಲಿ ಕ್ಷಮೆಯಾಚಿಸಿದ್ದರೂ ಸಹ, ಈಗ ಹೊಸ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ವಿಡಿಯೋವೊಂದರಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಲೆನ್ಸ್ ಕಾರ್ಟ್ ಅಂಗಡಿಯ ನೌಕರರನ್ನು ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋದಲ್ಲಿ ಕೆಲವು ಕಡೆ ಸಣ್ಣ ಮಂದಿರಗಳಂತಹ ವ್ಯವಸ್ಥೆ ಅಥವಾ ಹಿಂದೂ ದೇವತೆಗಳ ಚಿತ್ರಗಳನ್ನು ಕೌಂಟರ್ ಅಡಿಯಲ್ಲಿ ಕಪಾಟುಗಳಲ್ಲಿ ಮರೆಮಾಡಲಾಗಿದೆ ಅಥವಾ ನೌಕರರ ಕಾಲಿನ ಹತ್ತಿರ ಇರಿಸಲಾಗಿದೆ ಎಂದು ಹೇಳಲಾಗಿದೆ. ಈ ಕಾರಣದಿಂದ ಹಿಂದೂಗಳಲ್ಲಿ ಆಕ್ರೋಶದ ಅಲೆ ಎದ್ದಿದ್ದು, ಮತ್ತೆ ಬಹಿಷ್ಕಾರದ ಬೇಡಿಕೆಗಳು ಆರಂಭವಾಗಿವೆ.
Vigrahas and pictures of Hindu deities kept near the feet of employees in shops#Lenskart‘s new anti-Hindu hatred revealed.
From this, it is clear that @Lenskart_com‘s overall mindset is anti-Hindu.
Hindus permanently boycotting such establishments would be the real… https://t.co/4niQqL6YES pic.twitter.com/PYIPdXbNtd
— Sanatan Prabhat (@SanatanPrabhat) April 21, 2026
Lenskart Apologises After Public Backlash
Following organised protests and outrage from Hindus across the country, Lenskart has issued an apology and revised guidelines now allowing employees to wear religious symbols.
It shows that biased policies change only when challenged… https://t.co/EutjVvi2Rs pic.twitter.com/W8wi4ZoK9z
— Sanatan Prabhat (@SanatanPrabhat) April 20, 2026
(ಈ ಛಾಯಾಚಿತ್ರಗಳು/ವೀಡಿಯೊಗಳನ್ನು ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶದಿಂದ ಪ್ರಕಟಿಸಲಾಗಿಲ್ಲ, ಬದಲಿಗೆ ವಿಡಂಬನೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರಕಟಿಸಲಾಗಿದೆ. – ಸಂಪಾದಕರು)
ಈ ವಿಡಿಯೋದಲ್ಲಿ ಕೆಲವು ಕಾರ್ಯಕರ್ತರು ಅಂಗಡಿಯನ್ನು ಪ್ರವೇಶಿಸಿ ಕೌಂಟರ್ ಕೆಳಗಿನ ಕಪಾಟಿನಲ್ಲಿ ಇರಿಸಲಾಗಿರುವ ದೇವತೆಗಳ ಮೂರ್ತಿ ಮತ್ತು ಚಿತ್ರಗಳನ್ನು ಹುಡುಕುತ್ತಾರೆ. ಆ ಸಮಯದಲ್ಲಿ ಭಯಭೀತನಾದ ನೌಕರನೊಬ್ಬ ಕಾಣಿಸಿಕೊಳ್ಳುತ್ತಾನೆ ಮತ್ತು ಕಾರ್ಯಕರ್ತರು ಆ ದೇವತೆಗಳನ್ನು ‘ಗೌರವಾರ್ಥವಾಗಿ ಎತ್ತರದಲ್ಲಿ ಮತ್ತು ಸ್ಪಷ್ಟವಾಗಿ ಕಾಣುವಂತಹ ಜಾಗದಲ್ಲಿ ಇರಿಸಬೇಕು’ ಎಂದು ಒತ್ತಾಯಿಸುತ್ತಾರೆ. ‘ಸಂಸ್ಥೆಯ ನೀತಿಯಲ್ಲಿ ಈ ರೀತಿ ಏನಾದರೂ ಇದೆಯೇ?’ ಎಂಬ ಪ್ರಶ್ನೆಯನ್ನೂ ಅವರು ಕೇಳುತ್ತಾರೆ. ‘ಹಿಂದೂ ದೇವತೆಗಳನ್ನು ಉದ್ದೇಶಪೂರ್ವಕವಾಗಿಯೇ ಕಾಲಿನ ಹತ್ತಿರ ಮತ್ತು ಕಣ್ಣಿಗೆ ಬೀಳದಂತೆ ಇರಿಸಲಾಗುತ್ತಿದೆಯೇ?’ ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ‘ಲೆನ್ಸ್ ಕಾರ್ಟ್’ನ ಇತರ ಶಾಖೆಗಳಲ್ಲೂ ಇಂತಹದ್ದೇ ಆರೋಪಗಳು ಕೇಳಿಬಂದಿದ್ದು, ಇಂತಹ ವಸ್ತುಗಳನ್ನು ಬಹಿರಂಗವಾಗಿ ಇರಿಸದೆ ಬಚ್ಚಿಡುವಂತೆ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿದೆ. ಅನೇಕರು ನೇರವಾಗಿ ಸಂಸ್ಥೆಯ ಮಾಲೀಕ ಪಿಯೂಷ್ ಬನ್ಸಲ್ ಅವರನ್ನು ‘ಟ್ಯಾಗ್’ ಮಾಡಿ ‘ನಿಮ್ಮ ನೇತೃತ್ವದಲ್ಲಿ ಅಸಲಿಗೆ ಏನು ನಡೆಯುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ ಹಾಗೂ ಹಿಂದೂ ಪಾಲುದಾರರು ಮತ್ತು ಗ್ರಾಹಕರು ಈ ಸಂಸ್ಥೆಯೊಂದಿಗಿನ ಸಂಬಂಧದ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಕರೆ ನೀಡಿದ್ದಾರೆ. ಈ ಹೊಸ ವಿಡಿಯೋಗಳ ಬಗ್ಗೆ ‘ಲೆನ್ಸ್ ಕಾರ್ಟ್’ನಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !