ಮುಜಫರ್‌ನಗರ (ಉತ್ತರ ಪ್ರದೇಶ) ಇಲ್ಲಿನ ಘಟನೆ

ಮುಜಫರ್‌ನಗರ (ಉತ್ತರ ಪ್ರದೇಶ) – ಇಲ್ಲಿ ಓರ್ವ ಹಿಂದೂ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿ, ಅವನಿಗೆ ನಮಾಜ್ ಪಠಿಸಲು ಒತ್ತಾಯಿಸಿದ ಮತ್ತು ಗೋಮಾಂಸ ತಿನ್ನಿಸಿದ ಪ್ರಕರಣದಲ್ಲಿ ಪೊಲೀಸರು ಅಫ್ಸರ್ ಹೆಸರಿನ ಮುಸಲ್ಮಾನ ಯುವಕನನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ಒಂದು ವಿಡಿಯೋದಲ್ಲಿ, ಸಂಬಂಧಪಟ್ಟ ಯುವಕನು ನಮಾಜ್ ಪಠಿಸುತ್ತಿರುವುದು ಮತ್ತು ವಜೂ (ನಮಾಜ್‌ಗೂ ಮುನ್ನ ಕೈಕಾಲುಗಳನ್ನು ತೊಳೆಯುವುದು) ಮಾಡುತ್ತಿರುವುದು ಕಂಡುಬರುತ್ತಿದೆ. ಈ ಘಟನೆಯು ಭೈಕಾರೇಡಿ ಗ್ರಾಮದಲ್ಲಿ ನಡೆದಿದೆ. ಹರಿದ್ವಾರದ ನಿವಾಸಿಯಾದ ರಾಕೇಶ್ ಶರ್ಮಾ ಎಂಬಾತನನ್ನು ಆರೋಪಿ ಅಫ್ಸರ್ ೧೫ ವರ್ಷಗಳ ಹಿಂದೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದನು ಮತ್ತು ಅವನಿಂದ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದನು. ಅಫ್ಸರ್ ಮತ್ತು ಅವನ ಕುಟುಂಬದವರು ರಾಕೇಶ್‌ನಿಗೆ ಥಳಿಸಿ, ಆನಂತರ ಅವನನ್ನು ಮತಾಂತರ ಮಾಡಿದರು. ಅವನಿಂದ ನಮಾಜ್ ಮಾಡಿಸಿದರು. ಇದರ ವಿಡಿಯೋ ಹೊರಬಂದ ನಂತರ ಹಿಂದೂ ಸಂಘರ್ಷ ಸಮಿತಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೋಪಾ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ಮುತ್ತಿಗೆ ಹಾಕಿದರು. ಆನಂತರ ಪೊಲೀಸರು ಅಫ್ಸರ್‌ನನ್ನು ಬಂಧಿಸಿದರು.
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case