ರಾಜಸ್ಥಾನ: ಹಿಂದೂ ವಿದ್ಯಾರ್ಥಿನಿಯ ಮತಾಂತರದ ಸಂಚು ಬಯಲು!

  • ಮನಪರಿವರ್ತನೆ ಮಾಡುವ ಮೂಲಕ ಸಂಚು!

  • ಮತಾಂತರ ಮಾಡುವ ಗ್ಯಾಂಗ್ ಸೆರೆ; ಸಂತ್ರಸ್ತೆಯ ರಕ್ಷಣೆ!

ಆಗ್ರಾ (ಉತ್ತರ ಪ್ರದೇಶ) – ಆಗ್ರಾದ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬರು ಹಿಂದೂ ಸಹೋದರಿಯರನ್ನು ಅಪಹರಿಸಿ ಮತಾಂತರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜುಲೈ 2025 ರಲ್ಲಿ ಜಿಹಾದಿಗಳ ಗ್ಯಾಂಗ್ ಸಂಚು ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ಸುಮಾರು 9 ತಿಂಗಳ ನಂತರ, ಈಗ ಅದೇ ಗ್ಯಾಂಗ್‌ ನ ಆಮಿಷಕ್ಕೆ ಒಳಗಾಗಿದ್ದ ಮತ್ತೊಬ್ಬ ಸಂತ್ರಸ್ತ ಹಿಂದೂ ಯುವತಿ ಈ ಜಿಹಾದಿ ಗ್ಯಾಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ರಾಜಸ್ಥಾನದಲ್ಲಿ ‘ಸಿಎ’ (ಚಾರ್ಟರ್ಡ್ ಅಕೌಂಟೆಂಟ್) ವ್ಯಾಸಂಗ ಮಾಡುತ್ತಿರುವ ಸಂತ್ರಸ್ತ ವಿದ್ಯಾರ್ಥಿನಿಯ ಮನಪರಿವರ್ತನೆ ಮಾಡಿ ಆಕೆಯನ್ನು ಮತಾಂತರಗೊಳಿಸಲು ಜಿಹಾದಿಗಳು ಸಿದ್ಧತೆ ನಡೆಸಿದ್ದರು; ಆದರೆ ಅದಕ್ಕೂ ಮೊದಲೇ ಅವರ ಈ ಸಂಚು ಬಯಲಾದ ಕಾರಣ ಆಕೆ ಬಚಾವ್ ಆಗಿದ್ದಾಳೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಯುವತಿ ಒತ್ತಾಯಿಸಿದ್ದಾಳೆ.

1. ಆಗ್ರಾ ಸಹೋದರಿಯರ ಅಪಹರಣ ಪ್ರಕರಣದಲ್ಲಿ ಪೊಲೀಸರು ಜುಲೈ 2025 ರಲ್ಲಿ ಕ್ರಮ ಕೈಗೊಂಡಿದ್ದರು. 6 ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ 14 ಮಂದಿಯನ್ನು ಬಂಧಿಸಲಾಗಿತ್ತು. ಕೋಲಕಾತಾದ ಮುಸ್ಲಿಂ ಬಹುಸಂಖ್ಯಾತ ತಪಸಿಯಾ ಪ್ರದೇಶದಿಂದ ಇಬ್ಬರೂ ಸಹೋದರಿಯರನ್ನು ರಕ್ಷಿಸಲಾಗಿತ್ತು. ಈ ಯುವತಿಯರನ್ನು ಕಾಶ್ಮೀರಿ ಯುವತಿಯರು ತಮ್ಮ ಜಾಲಕ್ಕೆ ಬೀಳಿಸಿ, ಅವರ ಮನಪರಿವರ್ತನೆ ಮಾಡಿದ್ದರು.

2. ಈ ಪ್ರಕರಣದ ತನಿಖೆಯಲ್ಲಿ ರಾಜಸ್ಥಾನದ ಡಿಡ್ವಾನಾ-ಕುಚಾಮನ್‌ ನ ಹಿಂದೂ ಯುವತಿಯ ಹೆಸರು ಮುನ್ನೆಲೆಗೆ ಬಂದಿದೆ. ಈಕೆ ಈ ಗ್ಯಾಂಗ್‌ ನ ಜಾಲದಲ್ಲಿ ಸಿಲುಕಿದ್ದಳು. ಬಂಧಿತ ಗೋವಾದ ಆಯಿಷಾ ಎಂಬ ಮಹಿಳೆ ಸಾಮಾಜಿಕ ಜಾಲತಾಣಗಳ ಮೂಲಕ ಆಕೆಯನ್ನು ತನ್ನ ಜಾಲಕ್ಕೆ ಎಳೆದಿದ್ದಳು. ಈ ಯುವತಿ ಸದ್ಯ ‘ಸಿಎ’ ವ್ಯಾಸಂಗ ಮಾಡುತ್ತಿದ್ದಾಳೆ. ಆಯಿಷಾ ಆಕೆಯ ಮನಪರಿವರ್ತನೆ ಮಾಡಿದ್ದಳು ಮತ್ತು ಆಕೆಯ ಖಾತೆಗೆ ಹಣವನ್ನೂ ಜಮಾ ಮಾಡಲಾಗಿತ್ತು. ಯುವತಿಯನ್ನು ಜೈಪುರದಿಂದ ದೆಹಲಿಗೆ ಕಳುಹಿಸುವ ಯೋಜನೆಯಿತ್ತು. ಜೈಪುರದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಮುಗಿಸಿ ಕೋಲಕಾತಾಕ್ಕೆ ಕಳುಹಿಸಲಾಗುತ್ತಿತ್ತು; ಆದರೆ ಅದಕ್ಕೂ ಮೊದಲೇ ಈ ಗ್ಯಾಂಗ್ ಸಿಕ್ಕಿಬಿದ್ದಿದೆ.

3. ಈ ಮತಾಂತರ ಗುಂಪಿಗಾಗಿ ವಿದೇಶಿ ಹಣವನ್ನು ಸಂಗ್ರಹಿಸುತ್ತಿದ್ದ ಭೋಪಾಲ್‌ ನ ಸೈಯದ್ ದಾವೂದ್ ಎಂಬಾತ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ರೆಹಮಾನ್ ಖುರೇಷಿ, ಅಬ್ಬು ತಾಲಿಬ್, ಆಯಿಷಾ ಉರ್ಫ್ ಎಸ್.ಬಿ. ಕೃಷ್ಣ, ಅಲಿ ಹಸನ್ ಉರ್ಫ್ ಶೇಖರ್, ಒಸಾಮಾ, ಅಬುರ್ರಹಮಾನ್, ಮಹಮ್ಮದ್ ಅಲಿ, ಜುನೈದ್ ಖುರೇಷಿ, ಮುಸ್ತಫಾ ಉರ್ಫ್ ಮನೋಜ್, ಮಹಮ್ಮದ್ ಇಬ್ರಾಹಿಂ, ಅಬ್ದುಲ್ ರೆಹಮಾನ್ ಸೇರಿದಂತೆ 14 ಮಂದಿಯನ್ನು ಇಲ್ಲಿಯವರೆಗೆ ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಪ್ರತಿಯೊಬ್ಬ ಹಿಂದೂಗಳು, ವಿಶೇಷವಾಗಿ ಹಿಂದೂ ಯುವತಿಯರು ಜಿಹಾದಿಗಳಿಂದ ಜಾಗರೂಕರಾಗಿರಬೇಕು. ಅದಕ್ಕಾಗಿ ಹಿಂದೂ ಸಂಘಟನೆ ಅತ್ಯಗತ್ಯ!