
ನಾಶಿಕ್ – ಇಲ್ಲಿನ ಟಿ.ಸಿ.ಎಸ್. ಎಂಬ ಖ್ಯಾತ ಸಂಸ್ಥೆಯಲ್ಲಿ ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಿ ಅವರನ್ನು ಮತಾಂತರ ಮಾಡುವ ಭೀಕರ ಪಿತೂರಿ ನಡೆದಿರುವುದು ಸಂತ್ರಸ್ತರ ವಿವಿಧ ಹೇಳಿಕೆಗಳಿಂದ ಈಗ ಬೆಳಕಿಗೆ ಬರುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಲಾಗುತ್ತಿತ್ತು ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಇದು ಕೇವಲ ವೈಯಕ್ತಿಕ ಕೃತ್ಯವಲ್ಲದೆ, ಒಂದು ದೊಡ್ಡ ಅಂತಾರಾಷ್ಟ್ರೀಯ ಪಿತೂರಿಯ ಭಾಗವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಲ್ಲಿಯವರೆಗೆ ಗಮನಕ್ಕೆ ಬಂದ ಮತಾಂತರದ ಪುರಾವೆಗಳು!
ಸಂಸ್ಥೆಯ ಒಬ್ಬ ಸಂತ್ರಸ್ತ ಯುವಕನ ತಂದೆಗೆ ಪಾರ್ಶ್ವವಾಯು (ಪ್ಯಾರಾಲಿಸಿಸ್) ಆದಾಗ, ಆತನಿಗೆ ಮತಾಂತರಗೊಳ್ಳುವಂತೆ ಸಲಹೆ ನೀಡಿ ಬಲವಂತವಾಗಿ ಮತಾಂತರ ಮಾಡಲಾಯಿತು. ‘ಹಿಂದೂ ಹುಡುಗಿಯರನ್ನು ಪ್ರೀತಿಸಿ ಅವರನ್ನು ಮತಾಂತರವಾಗುವಂತೆ ಪ್ರೇರೇಪಿಸಿ’ ಎಂದು ಹೇಳಲಾಗುತ್ತಿತ್ತು ಎಂದು ಒಬ್ಬ ಉದ್ಯೋಗಿ ತಿಳಿಸಿದ್ದಾನೆ. ‘ಕೆಲಸದ ಅಗತ್ಯವಿರುವ ಮತ್ತು 20 ರಿಂದ 25 ವರ್ಷ ವಯಸ್ಸಿನ ಹುಡುಗಿಯರನ್ನು ಮತಾಂತರದ ಬಲೆಗೆ ಬೀಳಿಸುವುದು ಸುಲಭವಾಗಿತ್ತು’ ಎಂದು ಮತ್ತೊಬ್ಬ ಉದ್ಯೋಗಿ ಹೇಳಿದ್ದಾನೆ. ಇಲ್ಲಿ ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಟಿಪ್ಪಣಿಗಳನ್ನು ಮಾಡಲಾಗುತ್ತಿತ್ತು. ಸಂತ್ರಸ್ತರ ಲೈಂಗಿಕ ಶೋಷಣೆ, ಅಶ್ಲೀಲ ಕಾಮೆಂಟ್‌ಗಳು, ಅನುಚಿತ ವರ್ತನೆ ಹಾಗೂ ಗೋಮಾಂಸ ತಿನ್ನುವಂತೆ ಬಲವಂತಪಡಿಸಲಾಗುತ್ತಿತ್ತು ಎಂಬ ವಿಷಯವೂ ಹೊರಬಂದಿದೆ. ಒಬ್ಬ ಸಂತ್ರಸ್ತೆಯು ರೋಜಾ ಉಪವಾಸ ಮಾಡುವುದು, ಲಿಪ್‌ಸ್ಟಿಕ್ ಹಚ್ಚುವುದನ್ನು ಬಿಡುವುದು ಮುಂತಾದ ಕೃತ್ಯಗಳನ್ನು ಮಾಡಿರುವ ಬಗ್ಗೆ ಈ ಹಿಂದೆ ತಿಳಿದುಬಂದಿತ್ತು. ಅಲ್ಲದೆ ಮಹಿಳೆಯರಿಗೆ ‘ಬೇರೆ ಧರ್ಮದ ಉಡುಗೆ ಚೆನ್ನಾಗಿ ಕಾಣಿಸುತ್ತದೆ’ ಎಂದು ಹೇಳಲಾಗುತ್ತಿತ್ತು. ಈ ಎಲ್ಲಾ ಅಂಶಗಳಿಂದ ಇದು ದೊಡ್ಡ ಮತಾಂತರದ ಪಿತೂರಿ ಎಂಬುದು ಬಯಲಾಗಿದೆ.
ಟಿ.ಸಿ.ಎಸ್. ಸಂಸ್ಥೆಯ ಪ್ರಕರಣದ ಯಾವುದೇ ಆರೋಪಿಯನ್ನು ಬಿಡುವುದಿಲ್ಲ! – ದೇವೇಂದ್ರ ಫಡ್ನವೀಸ್, ಮುಖ್ಯಮಂತ್ರಿ
ಸಂಬಂಧಿತ ಪ್ರಕರಣವು ಪಿತೂರಿಯ ಭಾಗ ಎಂಬ ಅಭಿಪ್ರಾಯ!

ನಾಶಿಕ್ – ಟಿ.ಸಿ.ಎಸ್. ಸಂಸ್ಥೆಯಲ್ಲಿ ನಡೆದ ಪ್ರಕರಣವು ಅತ್ಯಂತ ಗಂಭೀರವಾಗಿದೆ. ಈ ಬಗ್ಗೆ ನಾವು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಯಾವುದೇ ಆರೋಪಿಯನ್ನು ಬಿಡುವುದಿಲ್ಲ. ಈ ಪ್ರಕರಣವು ಒಂದು ವ್ಯವಸ್ಥಿತ ಪಿತೂರಿಯ ಭಾಗವಾಗಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸಬಾರದು ಎಂಬುದು ಸಂಸ್ಥೆಯ ನಿಲುವಾಗಿದೆ. ಈ ಪಿತೂರಿಯ ಮೂಲ ಎಲ್ಲಿಯವರೆಗೆ ಹರಡಿವೆ ಎಂಬುದನ್ನು ನಾವು ತನಿಖೆ ಮಾಡುತ್ತೇವೆ. ಕೇಂದ್ರ ತನಿಖಾ ಸಂಸ್ಥೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಅವರ ಸಹಾಯವನ್ನೂ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮತಾಂತರದ ಸೂತ್ರಧಾರಿ ನಿದಾ ಖಾನ್!
ಸಂಸ್ಥೆಯ ಮಾನವ ಸಂಪನ್ಮೂಲ (HR) ವಿಭಾಗದ ಮುಖ್ಯಸ್ಥೆ ಅಶ್ವಿನಿ ಚೈನಾನಿ ಅವರ ವಿಚಾರಣೆಯ ಬಳಿಕ, ನಿದಾ ಖಾನ್ ಈ ಮತಾಂತರ ಪಿತೂರಿಯ ಮುಖ್ಯ ಸೂತ್ರಧಾರಿ ಎಂಬುದು ತಿಳಿದುಬಂದಿದೆ. ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಮ್ಯಾನೇಜರ್ ಆಗಿರುವ ನಿದಾ ಖಾನ್ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಸಂಸ್ಥೆಗೆ ಬರುವ ಹಿಂದೂ ಯುವತಿಯರನ್ನು ತರಬೇತಿಯ ನೆಪದಲ್ಲಿ ಬಲೆಗೆ ಬೀಳಿಸುತ್ತಿದ್ದಳು. ಅವರ ಬೌದ್ಧಿಕ ಬದಲಾವಣೆಯನ್ನು ಮಾಡಿ, ಮತಾಂತರಕ್ಕಾಗಿ ಅವರ ಮೇಲೆ ತೀವ್ರ ಮಾನಸಿಕ ಒತ್ತಡ ಹೇರುತ್ತಿದ್ದಳು ಎಂಬುದು ಸಂತ್ರಸ್ತರ ಹೇಳಿಕೆಗಳಿಂದ ತಿಳಿದುಬಂದಿದೆ.
ನಿದಾ ಖಾನ್ ‘ಗರ್ಭಿಣಿ’ ಎಂಬ ದಾವೆ!
ಟಿ.ಸಿ.ಎಸ್. ಮತಾಂತರ ಪಿತೂರಿಯ ಮುಖ್ಯ ಸೂತ್ರಧಾರಿ ನಿದಾ ಎಜಾಜ್ ಖಾನ್ ಕಳೆದ 21 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದಾಳೆ. ಆಕೆ ಮುಂಬ್ರಾದಲ್ಲಿ (ಠಾಣೆ) ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ತಾನು ‘ಗರ್ಭಿಣಿ’ ಎಂದು ಆಕೆ ಹೇಳುತ್ತಿದ್ದಾಳೆ. ನಿಬಂಧಿತ ಜಾಮೀನಿಗಾಗಿ ಆಕೆ ನಾಶಿಕ್ ರೋಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಯು ಏಪ್ರಿಲ್ 18 ರಂದು ನಡೆಯಲಿದೆ. ಆಕೆಯ ಪತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ