
ಕಾಠಮಂಡು (ನೇಪಾಳ) – ನೇಪಾಳ ಸರಕಾರವು ಕಳೆದ ೨ ದಶಕಗಳಲ್ಲಿ ಅಧಿಕಾರದಲ್ಲಿದ್ದ ಪ್ರಮುಖ ನಾಯಕರು ಮತ್ತು ಹಿರಿಯ ಅಧಿಕಾರಿಗಳ ಆಸ್ತಿಯನ್ನು ತನಿಖೆ ಮಾಡಲು ಆಯೋಗವನ್ನು ರಚಿಸುವುದಾಗಿ ಘೋಷಿಸಿದೆ. ಹೆಚ್ಚುತ್ತಿರುವ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಅವಧಿಯಲ್ಲಿ ನೇಪಾಳಿ ಕಾಂಗ್ರೆಸ್ ಹಾಗೂ ಸಿ.ಪಿ.ಎನ್.-ಯು.ಎಂ.ಎಲ್. ಪಕ್ಷಗಳು ಆಡಳಿತ ನಡೆಸಿದ್ದವು. ಈ ಪಕ್ಷಗಳ ನಾಯಕರು ಅಧಿಕಾರ ದುರುಪಯೋಗಪಡಿಸಿಕೊಂಡು ಭಾರಿ ಪ್ರಮಾಣದ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಗಳಿವೆ. ಮಾಜಿ ಪ್ರಧಾನಿಗಳಾದ ಶೇರ್ ಬಹದ್ದೂರ್ ದೇವುಬಾ, ಕೆ.ಪಿ. ಶರ್ಮಾ ಓಲಿ ಮತ್ತು ಪುಷ್ಪ ಕಮಲ ದಹಲ ‘ಪ್ರಚಂಡ’ ವಿರುದ್ಧವೂ ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳ ತನಿಖೆ ನಡೆಯುತ್ತಿದೆ.
ಈ ನಿರ್ಧಾರವು ಪ್ರಧಾನಿ ಬಾಲೇಂದ್ರ ಶಾ ಅವರ ಹೊಸ ಸರಕಾರದ ೧೦೦ ಅಂಶಗಳ ಸುಧಾರಣಾ ಕಾರ್ಯಸೂಚಿಯ ಭಾಗವಾಗಿದೆ. ಮೊದಲ ಹಂತದಲ್ಲಿ ೨೦೦೬ ರಿಂದ ೨೦೨೬ ರವರೆಗಿನ ಪ್ರಕರಣಗಳ ತನಿಖೆ ನಡೆಯಲಿದೆ ಮತ್ತು ಎರಡನೇ ಹಂತದಲ್ಲಿ ೧೯೯೨ ರಿಂದ ೨೦೦೬ ರವರೆಗಿನ ಪ್ರಕರಣಗಳನ್ನು ಪರಿಶೀಲಿಸಲಾಗುವುದು.
ನೇಪಾಳದ ಗಡಿಯಲ್ಲಿ ವಾಸಿಸುವ ಭಾರತೀಯರಿಂದ ನೇಪಾಳವು ಖರೀದಿ ತೆರಿಗೆ ವಸೂಲಿ ಮಾಡಲಿದೆ
ನೇಪಾಳ ಸರಕಾರದ ಹೊಸ ನಿಯಮದಂತೆ ಭಾರತದಿಂದ ೧೦೦ ರೂಪಾಯಿಗಿಂತ ಹೆಚ್ಚಿನ ಬೆಲೆಯ ಯಾವುದೇ ವಸ್ತುವನ್ನು ನೇಪಾಳಕ್ಕೆ ಕೊಂಡೊಯ್ದರೆ ಅದರ ಮೇಲೆ ‘ಭನ್ಸಾರ್’ ಅಂದರೆ ಸೀಮಾ ಸುಂಕ ಪಾವತಿಸುವುದು ಕಡ್ಡಾಯಗೊಳಿಸಲಾಗಿದೆ. ಬೇಳೆಕಾಳುಗಳು, ಎಣ್ಣೆ, ಸಕ್ಕರೆ, ತರಕಾರಿ ಅಂತಹ ದಿನನಿತ್ಯ ವಸ್ತುಗಳ ಖರೀದಿಯ ಮೇಲೂ ಶೇ. ೫ ರಿಂದ ಶೇ. ೮೦ ರಷ್ಟು ಶುಲ್ಕವನ್ನು ವಿಧಿಸಬಹುದಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !
ಇರಾನ್ ಮೇಲಿನ ನಿರ್ಬಂಧಗಳಿಗೆ 60 ದಿನಗಳ ವಿನಾಯಿತಿ ನೀಡಿದ ಅಮೆರಿಕ!
ಜೈಪುರದಲ್ಲಿ (ರಾಜಸ್ಥಾನ) ‘ಜೈಶ್-ಎ-ಮೊಹಮ್ಮದ್’ ಸಂಪರ್ಕದಲ್ಲಿ ಹಿಂದೂ ಮಹಿಳೆ !
‘ಧಾರ್ಮಿಕ ಕಾರ್ಯ’ದ ಹೆಸರಿನಲ್ಲಿ ಮತಾಂತರ ಮಾಡುವವರ ವಿದೇಶಿ ದೇಣಿಗೆಗಳ ಮೇಲೆ ಕೇಂದ್ರ ಸರಕಾರದ ಪ್ರಹಾರ
‘ನೌಕಾ ಮರುಬಳಕೆ’ ವಲಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ! : Ship Recycling
ಸಂಯುಕ್ತ ಅರಬ್ ಅಮೀರತ್ (UAE) ಭಾರತದಿಂದ ‘ಬ್ರಹ್ಮೋಸ್’ ಕ್ಷಿಪಣಿ ಖರೀದಿಸಲು ಮಾತುಕತೆ ನಡೆಸುತ್ತಿದೆ! : India UAE BrahMos Deal