‘ಟಿ.ಸಿ.ಎಸ್.’ ಸಂಸ್ಥೆಯಲ್ಲಿನ ವ್ಯಾಪಾರ ಜಿಹಾದ್

ನಾಶಿಕ್ – ಇಲ್ಲಿನ ಹೆಸರಾಂತ ‘ಟಿ.ಸಿ.ಎಸ್.’ ಸಂಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಬುರ್ಖಾ ಧರಿಸಲು ಮತ್ತು ನಮಾಜ್ ಗೆ ಒತ್ತಾಯಿಸಲಾಗುತ್ತಿತ್ತು. ಆರೋಪಿಗಳು ಹಿಂದೂ ದೇವತೆಗಳನ್ನು ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸುತ್ತಿದ್ದರು.
೧. ೨೫ ವರ್ಷದ ಸಂತ್ರಸ್ತ ಹಿಂದೂ ಯುವತಿಯೊಬ್ಬಳು ಮೇ ೨೦೨೫ ರಲ್ಲಿ ತಾನು ಸೋಮವಾರದ ಉಪವಾಸ ಮಾಡಿದ್ದಾಗಿ ತಿಳಿಸಿದ್ದಾಳೆ. ಆಗ ತೌಸೀಫ್ ಅವಳ ಟೇಬಲ್ ಮೇಲಿದ್ದ ಮಹಾದೇವನ ಮೂರ್ತಿಯನ್ನು ನೋಡಿ, ‘ನಿಜಕ್ಕೂ ದೇವರು ಇದ್ದಾನೆಯೇ? ಪಾರ್ವತಿ ಗಣೇಶನಿಗೆ ಜನ್ಮ ನೀಡಿದ್ದರೆ, ಅವರಿಗೆ ಅದರ ಬಗ್ಗೆ ಏಕೆ ತಿಳಿದಿರಲಿಲ್ಲ?’ ಎಂದು ಕೇಳಿ ಹಿಂದೂ ಧರ್ಮವನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದನು. ಆತ, “ಬ್ರಹ್ಮದೇವನು ತನ್ನ ಮಗಳೊಂದಿಗೆ ತಪ್ಪು ಕೆಲಸ ಮಾಡಿದ್ದನು. ಕೃಷ್ಣನು ೧೬ ಸಾವಿರ ಮಹಿಳೆಯರನ್ನು ವಿವಾಹವಾದನು, ಇದರಿಂದ ಕೃಷ್ಣ ಹೇಗಿದ್ದನು ಎಂಬುದು ತಿಳಿಯುತ್ತದೆ” ಎಂದು ಹೇಳಿದನು.
೨. ಮತ್ತೋರ್ವ ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಆರೋಪಿ ತೌಸೀಫ್ ನಿರಂತರವಾಗಿ ಇಸ್ಲಾಂ ಶ್ರೇಷ್ಠವೆಂದು ಹೇಳುತ್ತಾ ಹಿಂದೂ ಧರ್ಮವನ್ನು ಕೀಳಾಗಿ ಕಾಣುತ್ತಿದ್ದನು. ‘ಹಿಂದೂಗಳ ದೇವರುಗಳು ಕಾಣಿಸುತ್ತಾರೆ; ಆದ್ದರಿಂದ ಅವರು ಸುಳ್ಳು, ನಿಜವಾದ ದೇವರು ಅದೃಶ್ಯನಾಗಿದ್ದಾನೆ’ ಎಂದು ಅವನು ಹೇಳುತ್ತಿದ್ದನು. ಡಿಸೆಂಬರ್ ೨೦೨೫ ರಲ್ಲಿ ಮಧ್ಯಾಹ್ನದ ಊಟದ ನಂತರ ಸಂತ್ರಸ್ತೆ ಮಜ್ಜಿಗೆ ಕುಡಿಯುತ್ತಿದ್ದಳು. ಆಗ ಮತಾಂಧ ತೌಸೀಫ್ ಅವಳನ್ನು, “ನನ್ನ ಬಳಿಯೂ ಮಜ್ಜಿಗೆ ಇದೆ. ಕುಡಿಯಲು ಇಷ್ಟಪಡುತ್ತೀರಾ?” ಎಂದು ಕೇಳಿದನು. ಈ ಸಮಯದಲ್ಲಿ ಅವನು ತನ್ನ ದೇಹದ ಖಾಸಗಿ ಭಾಗದ ಕಡೆಗೆ ಕೈಯಿಂದ ಸನ್ನೆ ಮಾಡಿದನು.
೩. ಓರ್ವ ವಿವಾಹಿತ ಸಂತ್ರಸ್ತ ಮಹಿಳೆಯ ಪತಿ ಪುಣೆಯಲ್ಲಿ ವಾಸವಿದ್ದಾರೆ. ಆರೋಪಿ ರಝಾ ಮೆಮನ್ ಆಕೆಯನ್ನು, ‘ಪತಿಯೊಂದಿಗೆ ಏಕೆ ಇರುವುದಿಲ್ಲ? ಮಧುಚಂದ್ರಕ್ಕೆ ಎಲ್ಲಿಗೆ ಹೋಗಿದ್ದೆ? ಅಲ್ಲಿ ಏನು ಮತ್ತು ಹೇಗೆ ಮಾಡಿದೆ?’ ಎಂದು ಕೇಳುತ್ತಿದ್ದನು. ಆಸಿಫ್ ಅನ್ಸಾರಿ ಎಂಬಾತ ಊಟದ ಸಮಯದಲ್ಲಿ ಆಕೆಯ ತೊಡೆಯ ಮೇಲೆ ಕೈಯಿಟ್ಟು, ‘ದೈಹಿಕ ಸುಖದ ಅಗತ್ಯವಿದ್ದರೆ ಹೇಳು, ನಾನು ತೀರಿಸುತ್ತೇನೆ’ ಎಂದು ಅಸಹ್ಯವಾಗಿ ಹೇಳಿದ್ದನು.
೪. ಕೆಲಸದ ನೆಪದಲ್ಲಿ ಶಫಿ ಶೇಖ್ ಹತ್ತಿರ ಬಂದು ತನ್ನ ಕಾಲನ್ನು ಆಕೆಯ ಕಾಲಿಗೆ ಉಜ್ಜುತ್ತಿದ್ದನು ಎಂದು ಸಂತ್ರಸ್ತೆಯೊಬ್ಬರು ತಿಳಿಸಿದ್ದಾರೆ. ಅವನು ತನ್ನ ಮುಖವನ್ನು ಹತ್ತಿರ ತಂದು ಸ್ಪರ್ಶಿಸುತ್ತಿದ್ದನು. ಆರೋಪಿ ತೌಸೀಫ್ ಅತ್ತಾರ್ ಆಕೆಯ ಅಂಗಾಂಗಗಳ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿದ್ದನು. ಅವನು ಆಕೆಯ ಅಂಗಗಳನ್ನೇ ದಿಟ್ಟಿಸಿ ನೋಡುತ್ತಿದ್ದನು.
ಮಾಜಿ ವ್ಯವಸ್ಥಾಪಕಿ ಅಶ್ವಿನಿ ಚೆನಾನಿ ಅವರ ಆರೋಪಿಗಳೊಂದಿಗಿನ ಆಕ್ಷೇಪಾರ್ಹ ಸಂಭಾಷಣೆ !
ಮಾಜಿ ವ್ಯವಸ್ಥಾಪಕಿ ಅಶ್ವಿನಿ ಚೆನಾನಿ, ತೌಸೀಫ್ ಅತ್ತಾರ್ ಜೊತೆ ೩೮ ಬಾರಿ, ದಾನಿಶ್ ಶೇಖ್ ಜೊತೆ ಒಮ್ಮೆ ಮತ್ತು ರಝಾ ಮೆಮನ್ ಜೊತೆ ೨೨ ಬಾರಿ ಆಕ್ಷೇಪಾರ್ಹ ಸಂಭಾಷಣೆ ನಡೆಸಿದ್ದಳು. ಯುವತಿಯರು ಸಂಸ್ಥೆಯಲ್ಲಿ ದೂರು ನೀಡಿದಾಗ, ಅಶ್ವಿನಿ ಆ ದೂರುಗಳನ್ನು ಮುಚ್ಚಿಹಾಕಿದ್ದಳು.
ಮತಾಂಧ ತೌಸೀಫ್ ಅತ್ತಾರ್‌ನ ನಾಚಿಕೆಗೇಡಿನ ವರ್ತನೆ !
ತೌಸೀಫ್ ಬೇಕೆಂತಲೇ ಹಿಂದೂ ಮಹಿಳಾ ಉದ್ಯೋಗಿಗಳ ಹತ್ತಿರ ಬಂದು ಅವರ ಖಾಸಗಿ ಜೀವನದ ಬಗ್ಗೆ ಮಾತನಾಡುತ್ತಿದ್ದನು. ‘ನಿನಗೆ ಪ್ರಿಯಕರನಿದ್ದಾನೆಯೇ?’ ಎಂದು ಕೇಳುತ್ತಿದ್ದನು. ಆತ ಕಚೇರಿಯಲ್ಲಿದ್ದ ಯುವತಿಯರಿಗೆ ಕಣ್ಣು ಹೊಡೆಯುತ್ತಿದ್ದನು.
ಕಚೇರಿಯ ಸಂತ್ರಸ್ತ ಮಹಿಳೆಯೊಬ್ಬರು ಹೇಳಿದ ತನ್ನ ಭೀಕರ ಅನುಭವ !
ಸಂಬಂಧಪಟ್ಟ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾನು ಟಿ.ಸಿ.ಎಸ್. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಕಟ್ಟಡದ ಟೆರೇಸ್ ಮೇಲೆ ಒಬ್ಬಂಟಿಯಾಗಿ ಕೆಲಸ ಮಾಡಲು ಹೇಳಲಾಗುತ್ತಿತ್ತು. ನನ್ನ ಮೊಬೈಲ್ ಅನ್ನು ಯಾವಾಗಲೂ ಪರಿಶೀಲಿಸಲಾಗುತ್ತಿತ್ತು. ನಾನು ಶೌಚಾಲಯಕ್ಕೆ ಅಥವಾ ಬೇರೆಡೆ ಹೋದರೆ, ಭದ್ರತಾ ಸಿಬ್ಬಂದಿ ನನ್ನ ಬ್ಯಾಗ್, ಮೊಬೈಲ್ ಅಥವಾ ಇತರ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಮಹಿಳಾ ಉದ್ಯೋಗಿಗಳ ಬ್ರೈನ್ ವಾಶ್ ಮಾಡಿ ಶೋಷಣೆ ಮಾಡಲಾಗುತ್ತಿತ್ತು. ಅವರನ್ನು ಮತಾಂತರಕ್ಕೆ ಒತ್ತಾಯಿಸಲಾಗುತ್ತಿತ್ತು. ಸಂಸ್ಥೆಯಲ್ಲಿ ೨೦ ರಿಂದ ೨೫ ವರ್ಷ ವಯಸ್ಸಿನ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಲಾಗುತ್ತಿತ್ತು. ಈ ವಯಸ್ಸಿನ ಮಹಿಳೆಯರು ಅಥವಾ ಯುವತಿಯರನ್ನು ಮತಾಂತರದ ಜಾಲಕ್ಕೆ ಎಳೆಯುವುದು ಸುಲಭವಾಗಿತ್ತು. ವ್ಯವಸ್ಥಾಪಕರು ಸಹ ಅವರ ಜಾಲದಲ್ಲಿ ಭಾಗಿಯಾಗಿದ್ದರಿಂದ, ಈ ಘಟನೆಗಳ ಬಗ್ಗೆ ಬಾಯಿ ಬಿಡಲು ಸಾಧ್ಯವಾಗುತ್ತಿರಲಿಲ್ಲ. ನಾನು ಟೆರೇಸ್‌ನಲ್ಲಿ ಕೆಲಸ ಮಾಡಲು ಕುಳಿತುಕೊಳ್ಳುತ್ತಿದ್ದ ಕಾರಣ ಈ ಜಾಲಕ್ಕೆ ಸಿಲುಕಲಿಲ್ಲ. ಒಂದು ವೇಳೆ ನಾನು ಕಚೇರಿಯಲ್ಲಿ ಕುಳಿತಿದ್ದರೆ, ನನಗೂ ಶೋಷಣೆಯಾಗುತ್ತಿತ್ತೇನೋ. ನಾನು ಕಳೆದ ೬ ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ; ಆದರೂ ನಾನು ಬದುಕಿದ್ದೇನೆ, ಇದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.’ ಎಂದು ಹೇಳಿದರು.
‘ಕಚೇರಿಯ ಸಮಯ ಮುಗಿದ ನಂತರವೂ ಕೆಲವು ಮಹಿಳಾ ಉದ್ಯೋಗಿಗಳನ್ನು ತಡೆದು ನಿಲ್ಲಿಸಲಾಗುತ್ತಿತ್ತು. ಮೇಲ್ನೋಟಕ್ಕೆ ಕಚೇರಿ ಕೆಲಸ ನಡೆಯುತ್ತಿದೆ ಎಂದು ತೋರಿಸಿಕೊಳ್ಳುತ್ತಿದ್ದರು; ಆದರೆ ಪುರುಷ ಉದ್ಯೋಗಿಗಳು ಮತ್ತು ಅಲ್ಲಿ ಉಳಿದುಕೊಂಡಿದ್ದ ಯುವತಿಯರು-ಮಹಿಳೆಯರ ವರ್ತನೆ ಮಾತ್ರ ಅನುಮಾನಾಸ್ಪದವಾಗಿರುತ್ತಿತ್ತು. ಮಹಿಳಾ ಉದ್ಯೋಗಿಗಳನ್ನು ಮಾನಸಿಕವಾಗಿ ಕುಗ್ಗಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿತ್ತು’ ಎಂದೂ ಆಕೆ ಹೇಳಿದ್ದಾಳೆ.
‘ಹಿಂದೂ ಯುವತಿಯರನ್ನು ಪ್ರೀತಿಸಿ ಮದುವೆಯಾಗಿರಿ. ಅವರನ್ನು ಮತಾಂತರ ಮಾಡುವಂತೆ ಮಾಡಿ’ ಎಂದು ಹೇಳಲಾಗುತ್ತಿತ್ತು ಎಂದು ಸಂತ್ರಸ್ತ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.
ತನಿಖೆಗಾಗಿ ೧೨ ಸದಸ್ಯರ ‘ವಿಶೇಷ ತನಿಖಾ ತಂಡ’ ರಚನೆ !
ಈ ಪ್ರಕರಣದ ತನಿಖೆಗಾಗಿ ನಾಶಿಕ್ ಪೊಲೀಸರು ೧೨ ಸದಸ್ಯರ ‘ವಿಶೇಷ ತನಿಖಾ ತಂಡ’ವನ್ನು (SIT) ರಚಿಸಿದ್ದಾರೆ. ಇದುವರೆಗೆ ಈ ಸಂಸ್ಥೆಯ ಉದ್ಯೋಗಿಗಳಾದ ಮತಾಂಧ ತೌಸೀಫ್ ಅತ್ತಾರ್, ದಾನಿಶ್ ಶೇಖ್, ರಝಾ ಮೆಮನ್, ಶಾರುಖ್ ಖುರೇಷಿ, ಆಸಿಫ್ ಅನ್ಸಾರಿ, ಶಫಿ ಶೇಖ್ ಮತ್ತು ಅಶ್ವಿನಿ ಚೆನಾನಿ ಸೇರಿದಂತೆ ಒಟ್ಟು ೭ ಜನರನ್ನು ಬಂಧಿಸಲಾಗಿದೆ. ಮತಾಂಧರಾದ ತೌಸೀಫ್ ಅತ್ತಾರ್ ಮತ್ತು ನಿದಾ ಖಾನ್ ಈ ಪ್ರಕರಣದ ಮುಖ್ಯ ರೂವಾರಿಗಳಾಗಿದ್ದಾರೆ. ಮತಾಂಧ ತೌಸೀಫ್ ಇತರ ಕಾರ್ಮಿಕರನ್ನು ಗುರಿಯಾಗಿಸುತ್ತಿದ್ದರೆ, ನಿದಾ ಉದ್ದೇಶಪೂರ್ವಕವಾಗಿ ಅವನಿಗೆ ಸಹಾಯ ಮಾಡುತ್ತಿದ್ದಳು.
ಸಂತ್ರಸ್ತ ಮಹಿಳೆಯರ ೭೮ ದೂರುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಮುಸ್ಲಿಂ ಮಹಿಳಾ ಅಧಿಕಾರಿ !
ಸಂತ್ರಸ್ತ ಮಹಿಳೆಯರು ನೀಡಿದ ಮಾಹಿತಿಯ ಪ್ರಕಾರ, ನಿದಾ ಖಾನ್ ಮಹಿಳೆಯರ ದೂರುಗಳನ್ನು ನಿರ್ಲಕ್ಷಿಸುತ್ತಿದ್ದಳು. ಆಕೆ ಮಹಿಳಾ ಉದ್ಯೋಗಿಗಳೊಂದಿಗೆ ಸ್ನೇಹ ಬೆಳೆಸಿ, ನಮಾಜ್ ಮಾಡುವುದು ಎಷ್ಟು ಸರಿ ಎಂದು ಹೇಳುತ್ತಿದ್ದಳು. ಮುಸ್ಲಿಮರ ಪದ್ಧತಿಗಳು ಎಷ್ಟು ಒಳ್ಳೆಯವು ಎಂಬುದನ್ನು ಮನಸ್ಸಿನಲ್ಲಿ ಮೂಡಿಸುತ್ತಿದ್ದಳು. ಸಂತ್ರಸ್ತರು ನಿದಾ ಖಾನ್‌ಗೆ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ೭೮ ಇಮೇಲ್‌ಗಳನ್ನು ಕಳುಹಿಸಿದ್ದರು; ಆದರೆ ಆಕೆ ಯಾವುದನ್ನೂ ಪರಿಗಣಿಸಲಿಲ್ಲ. ದೂರು ನೀಡಿದ ಮಹಿಳೆಯೊಬ್ಬರಿಗೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲು ಅವಕಾಶ ನೀಡಲಿಲ್ಲ. (ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು! – ಸಂಪಾದಕರು)
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”