
ಅಂಡಮಾನ್ – ಇಲ್ಲಿನ ಸಮುದ್ರದಲ್ಲಿ ನೌಕೆಯೊಂದು ಮುಗುಚಿದ್ದರಿಂದ ೨೫೦ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ನೌಕೆಯಲ್ಲಿ ೨೮೦ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶದ ನಾಗರಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಸಣ್ಣ ಮಕ್ಕಳೂ ಸೇರಿದ್ದರು. ಈ ನೌಕೆಯು ಏಪ್ರಿಲ್ ೪ ರಂದು ದಕ್ಷಿಣ ಬಾಂಗ್ಲಾದೇಶದ ಟೆಕ್ನಾಫ್‌ನಿಂದ ಮಲೇಷ್ಯಾದತ್ತ ಪ್ರಯಾಣ ಬೆಳೆಸಿತ್ತು. ಜೋರಾದ ಗಾಳಿ, ಅಬ್ಬರಿಸುವ ಸಮುದ್ರ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರಿದ್ದ ಕಾರಣ ಅಂಡಮಾನ್ ಸಮುದ್ರದಲ್ಲಿ ಈ ನೌಕೆ ಮುಳುಗಿದೆ ಎಂದು ವಿಶ್ವಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿದೇಶಗಳಲ್ಲಿ ಉತ್ತಮ ಸಂಬಳದ ಕೆಲಸದ ಆಮಿಷ ಮತ್ತು ಹಲವು ಬಾರಿ ಮಾನವ ಕಳ್ಳಸಾಗಣೆ ಮಾಡುವ ತಂಡಗಳು ಹರಡುವ ತಪ್ಪು ಮಾಹಿತಿಯಿಂದಾಗಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶದ ನಾಗರಿಕರು ಇಂತಹ ದೊಡ್ಡ ಅಪಾಯಗಳನ್ನು ಎದುರಿಸಲು ಮುಂದಾಗುತ್ತಾರೆ. ಈ ಘಟನೆಯು ದೀರ್ಘಕಾಲದ ಸ್ಥಳಾಂತರದ ಗಂಭೀರ ಪರಿಣಾಮಗಳನ್ನು ತೋರಿಸುತ್ತದೆ ಎಂದು ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ವಲಸೆ ಸಂಸ್ಥೆ ಹೇಳಿವೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ