
ನವದೆಹಲಿ – ಹಿಂದೂ-ದ್ವೇಷಿ ಮಹಿಳಾ ಪತ್ರಕರ್ತೆ ರಾಣಾ ಅಯ್ಯೂಬ್ ಅವರು ಹಿಂದೂ ದೇವತೆಗಳು ಮತ್ತು ಸ್ವಾತಂತ್ರ್ಯವೀರ ಸಾವರ್ಕರ್ ಕುರಿತು ಮಾಡಿದ್ದ ಆಕ್ಷೇಪಾರ್ಹ ಟ್ವೀಟ್‌ಗಳನ್ನು ಅಳಿಸಿಹಾಕಲು ‘ಎಕ್ಸ್’ (ಹಿಂದಿನ ಟ್ವಿಟರ್) ವಿಫಲವಾಗಿರುವುದರಿಂದ, ಭಾರತದಲ್ಲಿ ಅದರ ಕಾನೂನಾತ್ಮಕ ರಕ್ಷಣೆಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸರಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
Safe Harbour at Risk Over ‘Offensive’ Tweets
The Central Government has indicated that X Corp may lose its legal safe harbour protection for failing to remove tweets by Rana Ayyub.
The posts (2013–2017) target Shri Ram, Vinayak Damodar Savarkar and the Indian Army. The plea… https://t.co/T3guxkuDKj pic.twitter.com/s0scwvyANJ
— Sanatan Prabhat (@SanatanPrabhat) April 11, 2026
೧. ನ್ಯಾಯಾಲಯದ ಆದೇಶಗಳು ಮತ್ತು ಕಾನೂನು ನೋಟಿಸ್‌ಗಳು ತಲುಪಿದಾಗ್ಯೂ ‘ಎಕ್ಸ್’ ಆಕ್ಷೇಪಾರ್ಹ ಬರಹಗಳನ್ನು ತೆಗೆದುಹಾಕಿಲ್ಲ ಎಂದು ಕೇಂದ್ರ ಸರಕಾರ ಹಾಗೂ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಐಟಿ ಕಾಯ್ದೆಯ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮಗಳಿಗೆ ಇಂತಹ ಕಾನೂನುಬಾಹಿರ ಬರಹಗಳ ಕುರಿತು ಅಧಿಕೃತ ಮಾಹಿತಿ ದೊರೆತ ತಕ್ಷಣ ಅದನ್ನು ತೆಗೆದುಹಾಕುವುದು ಅವುಗಳ ಕರ್ತವ್ಯವಾಗಿರುತ್ತದೆ. ಹಾಗೆ ಮಾಡದಿದ್ದರೆ, ಐಟಿ ಕಾಯ್ದೆಯ ಸೆಕ್ಷನ್ 79(1) ರ ಅಡಿಯಲ್ಲಿ ದೊರೆಯುವ ರಕ್ಷಣೆಯನ್ನು ಹಿಂಪಡೆಯಬಹುದು.
೨. ಈ ಪ್ರಕರಣವು 2013 ರಿಂದ 2017ರ ಅವಧಿಯಲ್ಲಿ ರಾಣಾ ಅಯ್ಯೂಬ್ ಅವರು ಮಾಡಿದ್ದ ಕೆಲವು ಟ್ವೀಟ್‌ಗಳಿಗೆ (ಬರಹಗಳಿಗೆ) ಸಂಬಂಧಿಸಿದ್ದಾಗಿದೆ. ವಕೀಲರಾದ ಅಮಿತಾ ಸಚ್‌ದೇವ ಅವರು ಇದರ ವಿರುದ್ಧ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯು ಮೇ 19 ರಂದು ನಡೆಯಲಿದೆ.
ಶ್ರೀರಾಮ, ಸಾವರ್ಕರ್ ಮತ್ತು ಭಾರತೀಯ ಸೇನೆ ಬಗ್ಗೆ ರಾಣಾ ಅಯ್ಯುಬ್ ಆಕ್ಷೇಪಾರ್ಹ ಟ್ವೀಟ್!
ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ ಕೌರವ ಅವರು, ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪತ್ರಕರ್ತೆ ರಾಣಾ ಅಯ್ಯುಬ್ ಅವರ ಬರವಣಿಗೆಯು ಅತ್ಯಂತ ಅವಮಾನಕರ, ಪ್ರಚೋದನಕಾರಿ ಮತ್ತು ಮತಾಂಧ ಸ್ವರೂಪದ್ದಾಗಿದೆ’ ಎಂದು ಹೇಳುತ್ತಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಆದೇಶ ನೀಡಿದ್ದಾರೆ. ಅಯ್ಯುಬ್ ಅವರ ಆಕ್ಷೇಪಾರ್ಹ ಟ್ವೀಟ್‌ಗಳನ್ನು ಮುಂದೆ ನೀಡಲಾಗಿದೆ.
೧. ವರ್ಷ ೨೦೧೩ ರ ಟ್ವೀಟ್‌ನಲ್ಲಿ ಅಯ್ಯೂಬ ಅವರು ಹೀಗೆ ಬರೆದಿದ್ದರು, ‘ರಾವಣನು ಸೀತೆಯನ್ನು ಸ್ಪರ್ಶಿಸಲೂ ಇಲ್ಲ, ಅವನು ಹಾಗೆ ಮಾಡಲು ಸಾಧ್ಯವಿದ್ದರ ಹಾಗೆ ಮಾಡಲಿಲ್ಲ. ರಾಮನು ಸೀತೆಯ ಪರವಾಗಿ ನಿಲ್ಲಬೇಕಾಗಿದ್ದರೂ ಸಹ ಅವನು ಹಾಗೆ ಮಾಡಲಿಲ್ಲ.
೨. ಅಕ್ಟೋಬರ್ ೨೦೧೪ ರಲ್ಲಿ ಅಯ್ಯುಬ್ ಅವರು ಅಲಿ ಸರ್ದಾರ್ ಜಾಫ್ರಿ ಅವರ ಶೇರ್ ಒಂದನ್ನು ಉಲ್ಲೇಖಿಸಿದ್ದರು, ಅದರಲ್ಲಿ ಹೀಗೆ ಬರೆಯಲಾಗಿತ್ತು, ‘ಬಡ ಸೀತೆಯ ಮನೆಯ ಮೇಲೆ ಇನ್ನೆಷ್ಟು ಕಾಲ ರಾವಣನ ರಾಜ್ಯವಿರುತ್ತದೆ, ದ್ರೌಪದಿಯ ವಸ್ತ್ರವನ್ನು ಅವಳ ಮೈಮೇಲಿಂದ ಇನ್ನೆಷ್ಟು ಕಾಲ ಕಸಿದುಕೊಳ್ಳಲಾಗುವುದು?’
೩. ವರ್ಷ ೨೦೧೫ ರಲ್ಲಿ ಅಯ್ಯುಬ್ ಅವರು ಸ್ವಾತಂತ್ರ್ಯವೀರ ಸಾವರ್ಕರ್ ಅವರ ಕುರಿತು ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ, ‘ಹಾಗಾದರೆ ವೀರ ಸಾವರ್ಕರ್ ಅವರು ಹಿಂದುತ್ವ ರಾಷ್ಟ್ರವಾದದ ಒಂದು ಪ್ರಮುಖ ಭಾಗವಾಗಿ ಅತ್ಯಾಚಾರವನ್ನು(ಬಲಾತ್ಕಾರವನ್ನು/ ದೌರ್ಜನ್ಯವನ್ನು?) ಸಮರ್ಥಿಸಿದ್ದರು’ ಎಂದು ಹೇಳಲಾಗಿತ್ತು.
೪. ಸ್ವಾತಂತ್ರ್ಯವೀರ ಸಾವರ್ಕರ್ ಅವರ ಕುರಿತಾದ ಇನ್ನೊಂದು ಟ್ವೀಟ್‌ನಲ್ಲಿ ಅಯ್ಯುಬ್ ಅವರು, ‘ನಾನು ನಥೂರಾಂ ಗೋಡ್ಸೆ ಅವರು ಸಾವರ್ಕರರ ಬಗ್ಗೆ ಬರೆದ ವಿವರಗಳನ್ನು ಓದುತ್ತಿದ್ದೆ ಮತ್ತು ನಾವು ಈ ಭಯೋತ್ಪಾದನಾ ಸಮರ್ಥಕನನ್ನು ಗೌರವಿಸುವುದನ್ನು ಮುಂದುವರಿಸಬೇಕೇ ಎಂದು ಯೋಚಿಸುತ್ತಿದ್ದೆ’ ಎಂದು ಹೇಳಿದ್ದರು.
೫. ವರ್ಷ ೨೦೧೬ ರಲ್ಲಿ ಅಯ್ಯುಬ್ ಅವರು ಒಂದು ಟ್ವೀಟ್ ಮಾಡಿದ್ದರು, ಅದರಲ್ಲಿ ಒಬ್ಬ ಹುಡುಗನ ಛಾಯಾಚಿತ್ರವಿತ್ತು. ಅವನ ಮುಖದ ಮೇಲೆ ಗಾಯದ ಗುರುತುಗಳಿದ್ದವು. ಆ ಟ್ವೀಟ್‌ನಲ್ಲಿ, ‘ಪ್ರಿಯ ಭಾರತೀಯ ಸೇನೆಯೇ, ಈ ಸಣ್ಣ ಹುಡುಗ ಭಾರತದ ಸಾರ್ವಭೌಮತೆಗೆ ಎಷ್ಟು ಬೆದರಿಕೆಯೊಡ್ಡಿದ್ದನೆಂದರೆ, ಅವನನ್ನು ಜೀವಮಾನವಿಡೀ ಕುರುಡನನ್ನಾಗಿ ಮಾಡಲಾಗಿದೆ ಎಂದು ನಾನು ಊಹಿಸುತ್ತೇನೆ’ ಎಂದು ಬರೆಯಲಾಗಿತ್ತು.
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !
ಶಂಕಿತ ನಿದಾ ಖಾನ್ ಳಿಗೆ ಆಶ್ರಯ ನೀಡಿದ ಮನೆ ಮಾಲೀಕ ಹನೀಫ್ ಶೇಖ್ ಬಂಧನ !