
ನವ ದೆಹಲಿ – ಶಬರಿಮಲೆ ಪ್ರಕರಣವನ್ನು ಹೊರತುಪಡಿಸಿ, ಕೇವಲ ಗೌಡ ಸಾರಸ್ವತರು ಮಾತ್ರ ಒಂದು ದೇವಸ್ಥಾನಕ್ಕೆ ಬರಬೇಕು ಅಥವಾ ಕಾಂಚಿ ಮಠದವರು ಕೇವಲ ಕಾಂಚಿಗೇ ಹೋಗಬೇಕು, ಇತರ ಮಠಗಳಿಗೆ (ಉದಾ. ಶೃಂಗೇರಿ) ಹೋಗಬಾರದು ಎಂದು ಹೇಳುವುದು ಸರಿಯಲ್ಲ. ಅದರ ಬದಲು, ಎಷ್ಟು ಹೆಚ್ಚು ಜನರು ಬೇರೆ ಬೇರೆ ದೇವಸ್ಥಾನಗಳಿಗೆ ಮತ್ತು ಮಠಗಳಿಗೆ ಹೋಗುತ್ತಾರೆಯೋ, ಅಷ್ಟೇ ಧರ್ಮವು ಸಶಕ್ತವಾಗುತ್ತದೆ ಎಂದು ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ತಾರತಮ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಕೇಂದ್ರ ಸರಕಾರವು ಮಂಡಿಸಿದ ಅಂಶಗಳು,
೧. ದಕ್ಷಿಣ ಭಾರತದ ಕೆಲವು ದೇವಸ್ಥಾನಗಳಲ್ಲಿ ಪ್ರಸಾದವಾಗಿ ಮದ್ಯವನ್ನು ನೀಡಲಾಗುತ್ತದೆ. ನಾಳೆ ನೀವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮದ್ಯ ನೀಡಬಾರದೆಂದು ಹೇಳಲು ಸಾಧ್ಯವಿಲ್ಲ. ಅನೇಕ ದೇವಸ್ಥಾನಗಳಲ್ಲಿ ಶಾಕಾಹಾರಿ ಭೋಜನ ನೀಡಲಾಗುತ್ತದೆ. ಯಾರಾದರೂ ತಮ್ಮ ಇಚ್ಛೆಯಂತೆ ಅಥವಾ ಅಂತರಾತ್ಮದ ಕರೆಗೆ ಓಗೊಟ್ಟು ಮಾಂಸಾಹಾರಿ ಭೋಜನ ಬೇಕೆಂದು ಕೇಳಿದರೆ, ಅದನ್ನು ತನ್ನ ಹಕ್ಕು ಎಂದು ಯಾವುದೇ ಸಂಪ್ರದಾಯಕ್ಕೆ ಹೇಳಲು ಸಾಧ್ಯವಿಲ್ಲ. ಭಕ್ತರ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಯಾರಿಗೂ ಇಲ್ಲ.
೨. ಒಂದು ವೇಳೆ ಯಾವುದಾದರೂ ದೇವಸ್ಥಾನವು ಕೇವಲ ತನ್ನ ಸಮುದಾಯದ ಜನರಿಗಾಗಿ ಮಾತ್ರ ಇರಬೇಕೆಂದು ಬಯಸಿದರೆ, ಅವರು ಸರಕಾರದಿಂದ ಅಥವಾ ಸಾರ್ವಜನಿಕರಿಂದ ನಿಧಿ (ಹಣ/ದೇಣಿಗೆ) ಪಡೆಯಬಾರದು. ನೀವು ಇತರರನ್ನು ಹೊರಗಿಡುವುದಾದರೆ, ಅವರಿಂದ ಸಹಾಯವನ್ನೂ ಪಡೆಯಲು ಸಾಧ್ಯವಿಲ್ಲ.
೩. ಕೇವಲ ಕಲಂ ೨೬(ಬಿ) ಆಧಾರದ ಮೇಲೆ ನೋಡಿದರೆ, ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದ ಕಾಯ್ದೆಯು ತಪ್ಪಾಗಿರಬಹುದು. ದೇವಸ್ಥಾನಕ್ಕೆ ಯಾರು ಬರಬೇಕು ಎಂಬದನ್ನು ನಿರ್ಧರಿಸುವ ಅಧಿಕಾರ ಆಯಾ ಧಾರ್ಮಿಕ ಸಂಸ್ಥೆಗಿದೆ. ಪ್ರವೇಶ ಅಥವಾ ಪೂಜೆಯು ಧಾರ್ಮಿಕ ನಿಯಮಗಳ ಪ್ರಕಾರ ನಿರ್ಧರಿಸಲ್ಪಡುತ್ತಿದ್ದರೆ, ಅದು ಧರ್ಮದ ಭಾಗವಾಗಿದೆ. ಬಲವಂತದ ಪ್ರವೇಶದ ಕಾಯ್ದೆಯು ಈ ಅಧಿಕಾರದ ಉಲ್ಲಂಘನೆಯಾಗುತ್ತದೆ.
೪. ಕೇರಳದಲ್ಲಿ ಪೋರ್ಚುಗೀಸರು ಸಿರಿಯನ್ ಆರ್ಥೊಡಾಕ್ಸ್ ಕ್ರೈಸ್ತರನ್ನು ಕ್ಯಾಥೋಲಿಕ್ ಆಗಿ ಪರಿವರ್ತಿಸಲು ಪ್ರಯತ್ನಿಸಿದರು. ಐರ್ಲೆಂಡ್ ನಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಕ್ಯಾಥೋಲಿಕರ ಮೇಲೆ ತಾರತಮ್ಯ ಮಾಡಲಾಗುತ್ತಿತ್ತು. ಇಂತಹ ಧಾರ್ಮಿಕ ವಿವಾದಗಳು ಸೂಕ್ಷ್ಮವಾಗಿದ್ದು, ನ್ಯಾಯಾಲಯಗಳು ಸಾಮಾನ್ಯವಾಗಿ ಇವುಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.
ಸರ್ವೋಚ್ಚ ನ್ಯಾಯಾಲಯವು ವ್ಯಕ್ತಪಡಿಸಿದ ಅಭಿಪ್ರಾಯಗಳು,
೧. ಅನುಚ್ಛೇದ ೧೭ (ಅಸ್ಪೃಶ್ಯತೆ ನಿರ್ಮೂಲನೆ) ಎಂಬುದು ಅತ್ಯಂತ ಶಕ್ತಿಶಾಲಿಯಾದುದ್ದಾಗಿದೆ. ಇದು ಕೇವಲ ಕಾನೂನಿನ ಪ್ರಕಾರ ಅಪರಾಧ ಮಾತ್ರವಲ್ಲ, ಸಂವಿಧಾನವೇ ಇದನ್ನು ಅಪರಾಧವೆಂದು ಘೋಷಿಸುತ್ತದೆ. ಇದು ಕೇವಲ ಕಾನೂನುಬದ್ಧವಲ್ಲದೇ ಸಾಂವಿಧಾನಿಕ ಸ್ತರದಲ್ಲೂ ಅತ್ಯಂತ ಗಂಭೀರವಾದ ವಿಷಯವಾಗಿದೆ.
೨. ಒಂದು ವೇಳೆ ಸರಕಾರವು ಸಾಮಾಜಿಕ ಸುಧಾರಣೆಗಾಗಿ ಕಾಯ್ದೆಯನ್ನು ರೂಪಿಸಿದರೆ ಮತ್ತು ಅದರ ಪರಿಣಾಮವು ಧಾರ್ಮಿಕ ಸಂಪ್ರದಾಯಗಳ ಮೇಲಾದರೆ, ಅದರ ಪ್ರಭಾವವು ಅನುಚ್ಛೇದ ೨೬ (ಧಾರ್ಮಿಕ ಸಂಸ್ಥೆಗಳ ಹಕ್ಕುಗಳು) ರ ಮೇಲೆಯೂ ಆಗಬಹುದು. ಅನುಚ್ಛೇದ ೨೬ ರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳುವುದು ಸರಿಯಲ್ಲ. ಈ ಪ್ರಶ್ನೆಗೆ ಕೇವಲ ಸಿದ್ಧಾಂತಗಳಿಂದ ಉತ್ತರ ನೀಡಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಂದು ಪ್ರಕರಣದ ಆಧಾರದ ಮೇಲೆ ನಿರ್ಧರಿಸಲಾಗುವುದು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ