ಶತ್ರುಗಳಿಂದ ಸ್ವಲ್ಪ ತಪ್ಪಾದರೂ ಪ್ರತ್ಯುತ್ತರ ನೀಡಲಾಗುವುದು ! - ಇರಾನ್
ಅನೇಕ ದೇಶಗಳಿಂದ ಸ್ವಾಗತ !
ತೈಲದ ಬೆಲೆಯಲ್ಲಿ ಇಳಿಕೆ

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಯುದ್ಧವನ್ನು ಮುಂದಿನ ಎರಡು ವಾರಗಳ ಕಾಲ ಮುಂದೂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯು, ‘ಇದರರ್ಥ ಯುದ್ಧ ಅಂತ್ಯವಾಯಿತು ಎಂದಾಗುವುದಿಲ್ಲ. ನಮ್ಮ ಕೈಗಳು ಬಂದೂಕಿನ ಟ್ರಿಗರ್ ಮೇಲೆ ಸ್ಥಿರವಾಗಿವೆ. ಶತ್ರುಗಳಿಂದ ಸ್ವಲ್ಪ ತಪ್ಪಾದರೂ, ಅದಕ್ಕೆ ಪೂರ್ಣ ಶಕ್ತಿಯೊಂದಿಗೆ ಪ್ರತ್ಯುತ್ತರ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದೆ.
🔥 USA–Iran Ceasefire… Not the End! ⚠️
🪖 Donald Trump announces a 2-week ceasefire with Iran
⚡ Iran warns: “Our fingers remain on the trigger!”
🗣️ Mojtaba Khamenei: “This is NOT the end of the war!”
⚠️ Any misstep = full retaliation#Ceasefire #IranWar #WestAsiaConflict pic.twitter.com/yS9bG2lCoJ— Sanatan Prabhat (@SanatanPrabhat) April 8, 2026
ಇದು ಯುದ್ಧದ ಅಂತ್ಯವಲ್ಲ ! – ಮೊಜತಬಾ ಖಾಮೇನಿ

ಇರಾನ್ ನ ಸರಕಾರಿ ಸುದ್ದಿವಾಹಿನಿ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್’ನಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ಇರಾನ್ ನ ಸರ್ವೋಚ್ಚ ಧಾರ್ಮಿಕ ನಾಯಕ ಮೊಜತಬಾ ಖಾಮೇನಿ ಅವರು, ಇದು ಯುದ್ಧದ ಅಂತ್ಯವಲ್ಲ; ಆದರೆ ಎಲ್ಲಾ ಸೈನ್ಯದ ವಿಭಾಗಗಳು ಸರ್ವೋಚ್ಚ ನಾಯಕರ ಆದೇಶವನ್ನು ಪಾಲಿಸಬೇಕು ಮತ್ತು ಗುಂಡಿನ ದಾಳಿಯನ್ನು ನಿಲ್ಲಿಸಬೇಕೆಂದು ಹೇಳಿದ್ದಾರೆ.
📜 Iran’s Tough Conditions to USA 🇮🇷
✔️ End ALL sanctions
✔️ Allow uranium enrichment
✔️ US troop withdrawal from West Asia
✔️ Control over Strait of Hormuz
✔️ Compensation to Iran
✔️ Halt UN/nuclear watchdog actions
✔️ Regional ceasefire incl. Hezbollah conflict⚖️ Ceasefire… pic.twitter.com/E1Mc914XHv
— Sanatan Prabhat (@SanatanPrabhat) April 8, 2026
ಅಮೆರಿಕದ ಮುಂದೆ ಇರಾನ್ ಇಟ್ಟಿರುವ ಶರತ್ತುಗಳೇನು ?
1. ಅಹಿಂಸೆಗೆ ಬದ್ಧರಾಗಿರುವುದು
2. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಮುಂದುವರಿಯಲಿದೆ
3. ಯುರೇನಿಯಂ ಪುಷ್ಟೀಕರಣಕ್ಕೆ ಅನುಮತಿ
4. ಎಲ್ಲಾ ಪ್ರಾಥಮಿಕ ನಿರ್ಬಂಧಗಳ ಅಂತ್ಯ
5. ಎಲ್ಲಾ ಪರೋಕ್ಷ ನಿರ್ಬಂಧಗಳ ಅಂತ್ಯ
6. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲಾ ನಿರ್ಣಯಗಳ ಅಳವಡಿಕೆಯನ್ನು ನಿಲ್ಲಿಸುವುದು
7. ‘ಗವರ್ನರ್ಸ್ ಬೋರ್ಡ್’ನ ಎಲ್ಲಾ ನಿರ್ಣಯಗಳ ಅಳವಡಿಕೆಯನ್ನು ನಿಲ್ಲಿಸುವುದು
8. ಇರಾನ್ ಗೆ ಹಾನಿ ಪರಿಹಾರ ನೀಡುವುದು
9. ಪಶ್ಚಿಮ ಏಷ್ಯಾದಿಂದ ಅಮೆರಿಕದ ಸೈನ್ಯದ ಹಿಂತೆಗೆತ
10. ಲೆಬನಾನ್ ನಲ್ಲಿನ ಹಿಜ್ಬುಲ್ಲಾ ವಿರುದ್ಧ ಯುದ್ಧದ ಜೊತೆಗೆ ಎಲ್ಲಾ ಸಂಘರ್ಷಗಳಿಗೆ ಯುದ್ಧವಿರಾಮ
ಈ 10 ಷರತ್ತುಗಳ ಪ್ರಸ್ತಾವನೆಯ ನಂತರ ಇರಾನ್ ಮತ್ತು ಅಮೆರಿಕದ ನಡುವೆ ಯುದ್ಧವಿರಾಮದ ಒಪ್ಪಂದವಾಗಿದೆ.
ಏಪ್ರಿಲ್ 10 ರಂದು ಇಸ್ಲಾಮಾಬಾದ್ ನಲ್ಲಿ ಮಾತುಕತೆ
ಅಮೆರಿಕವು ಇರಾನ್ ಗೆ ಯುದ್ಧ ನಿಲ್ಲಿಸಲು 15 ಷರತ್ತುಗಳ ಪ್ರಸ್ತಾವನೆಯನ್ನು ಕಳುಹಿಸಿತ್ತು, ಇದಕ್ಕೆ ಇರಾನ್ ಮಾತುಕತೆಯ ಆಧಾರವಾಗಿ 10 ಷರತ್ತುಗಳ ಸುಧಾರಿತ ಪ್ರಸ್ತಾವನೆಯನ್ನು ಮರಳಿ ಕಳುಹಿಸಿತು. ಮಾತುಕತೆಯ ವಿವರಗಳು ನಿಗದಿಯಾದ ನಂತರ ಯುದ್ಧ ಕೊನೆಗೊಂಡಿರುವುದನ್ನು ಒಪ್ಪಿಕೊಳ್ಳುವುದಾಗಿ ಇರಾನ್ ಸ್ಪಷ್ಟಪಡಿಸಿದೆ. ಏಪ್ರಿಲ್ 10 ರಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಎರಡು ವಾರಗಳ ಕಾಲ ಮಾತುಕತೆಗಳು ನಡೆಯಲಿವೆ. ಎರಡೂ ಪಕ್ಷಗಳ ಒಪ್ಪಿಗೆಯಂತೆ ಈ ಅವಧಿಯನ್ನು ವಿಸ್ತರಿಸಬಹುದಾಗಿದೆ.
ಲೆಬನಾನ್ ನಲ್ಲಿನ ಹಿಜ್ಬುಲ್ಲಾ ವಿರುದ್ಧದ ಹೋರಾಟ ಮುಂದುವರಿಯಲಿದೆ ! – ಇಸ್ರೇಲ್
ಯುದ್ಧವಿರಾಮದ ಪ್ರಸ್ತಾವನೆಗೆ ಇಸ್ರೇಲ್ ಕೂಡ ಮಾನ್ಯತೆ ನೀಡಿದ್ದರೂ ಸಹ, ಈ ಪ್ರಸ್ತಾವನೆಯಲ್ಲಿ ಲೆಬನಾನ್ ನಲ್ಲಿನ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯನ್ನು ಸೇರಿಸಲಾಗಿಲ್ಲ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳಿದ್ದಾರೆ.
ಟ್ರಂಪ್ ಹೇಳಿದ್ದೇನು?
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ ಯುದ್ಧವಿರಾಮದ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಸಂಪೂರ್ಣವಾಗಿ ಮತ್ತು ಸುರಕ್ಷಿತವಾಗಿ ವ್ಯಾಪಾರಕ್ಕಾಗಿ ಮುಕ್ತಗೊಳಿಸಲು ಒಪ್ಪಿಕೊಂಡರೆ, ಅಮೆರಿಕವು ಮುಂದಿನ ಎರಡು ವಾರಗಳವರೆಗೆ ಇರಾನ್ ಮೇಲಿನ ಸಂಭವನೀಯ ಸೈನಿಕ ಕಾರ್ಯಾಚರಣೆಯನ್ನು ತಡೆಯಲು ಸಿದ್ಧವಿದೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಮುಂದುವರಿದು, ಅಮೆರಿಕವು ತನ್ನ ಎಲ್ಲಾ ಸೈನಿಕ ಗುರಿಗಳನ್ನು ಕೇವಲ ಪೂರ್ಣಗೊಳಿಸಿರುವುದಷ್ಟೇ ಅಲ್ಲ, ಅವುಗಳನ್ನು ಮೀರಿದೆ. ಇರಾನ್ ಜೊತೆಗೆ ದೀರ್ಘಕಾಲದ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕ ಈಗ ಒಂದು ನಿರ್ಣಾಯಕ ಒಪ್ಪಂದದ ಹೊಸ್ತಿಲಲ್ಲಿದೆ. ಇರಾನ್ ನಿಂದ ಅಮೆರಿಕಕ್ಕೆ 10 ಕಲಂಗಳ ಶಾಂತಿ ಪ್ರಸ್ತಾವನೆ ದೊರೆತಿದ್ದು, ಚರ್ಚೆಗೆ ಇದು ಒಂದು ವ್ಯವಹಾರಿಕ ಆಧಾರವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ವಿವಾದದ ಬಹುತೇಕ ಹಳೆಯ ವಿಷಯಗಳು ಈಗ ಬಗೆಹರಿದಿವೆ. ಮುಂದಿನ ಎರಡು ವಾರಗಳ ಅವಧಿಯನ್ನು ಬಾಕಿ ಇರುವ ಚರ್ಚೆಗಳಿಗೆ ಅಂತಿಮ ರೂಪ ನೀಡಲು ಮತ್ತು ಅದರ ಅಧಿಕೃತ ಅನುಷ್ಠಾನಕ್ಕಾಗಿ ಬಳಸಲಾಗುವುದು. ಅಮೆರಿಕದ ರಾಷ್ಟ್ರಾಧ್ಯಕ್ಷನಾಗಿ ಮತ್ತು ಕೊಲ್ಲಿ ರಾಷ್ಟ್ರಗಳ ಪ್ರತಿನಿಧಿಯಾಗಿ ದಶಕಗಳಿಂದ ಬಾಕಿ ಇರುವ ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ನನಗೆ ಗೌರವದ ವಿಷಯವಾಗಿದೆ ಎಂದರು.
ಉಭಯ ದೇಶಗಳ ನಡುವಿನ ಯುದ್ಧವಿರಾಮದ ನಿರ್ಧಾರದಲ್ಲಿ ಪಾಕಿಸ್ತಾನವು ಯಶಸ್ವಿಯಾಗಿ ಮಧ್ಯಸ್ಥಿಕೆ ವಹಿಸಿರುವುದು ಕಂಡುಬಂದಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರು ಇದಕ್ಕಾಗಿ ಎರಡೂ ದೇಶಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇರಾನ್ ಅನ್ನು ಶಿಲಾಯುಗಕ್ಕೆ ಕಳುಹಿಸುವ ಟ್ರಂಪ್ ಈಗ, ‘ಇರಾನ್ ನಲ್ಲಿ ಇನ್ನು ಸುವರ್ಣಕಾಲ ಬರಲಿದೆ !’ ಎಂದು ಹೇಳುತ್ತಾರೆ.
ಯುದ್ಧವಿರಾಮದ ನಂತರ ಟ್ರಂಪ್ ಅವರು ಪೋಸ್ಟ್ ಮಾಡಿ, ಜಾಗತಿಕ ಶಾಂತಿಗಾಗಿ ಇದು ದೊಡ್ಡ ದಿನವಾಗಿದೆ. ಇರಾನ್ ಗೆ ಈಗ ಶಾಂತಿ ಬೇಕಾಗಿದೆ. ಅವರು ಸಂಘರ್ಷದಿಂದ ಬೇಸತ್ತಿದ್ದಾರೆ ಮತ್ತು ಜಗತ್ತಿನ ಭಾವನೆಯೂ ಅದೇ ಆಗಿದೆ. ವಿಶೇಷವಾಗಿ ವ್ಯಾಪಾರ ಮತ್ತು ತುರ್ತು ಪರಿಸ್ಥಿತಿಯ ದೃಷ್ಟಿಯಿಂದ ಮಹತ್ವದ ಹಾರ್ಮುಜ್ ಜಲಸಂಧಿಯ ಸಂಚಾರ ದಟ್ಟಣೆಯನ್ನು ನಿವಾರಿಸಲು ಅಮೆರಿಕ ಸಹಾಯ ಮಾಡಲಿದೆ. ಇರಾನ್ ಈಗ ದೇಶದ ಪುನರ್ನಿರ್ಮಾಣ ಪ್ರಕ್ರಿಯೆಯನ್ನು ಆರಂಭಿಸಬಹುದು. ಈ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗಳು ನಡೆಯಲಿವೆ ಮತ್ತು ಎಲ್ಲರಿಗೂ ಇದರಿಂದ ಲಾಭವಾಗಲಿದೆ. ಅಮೆರಿಕವು ಇರಾನ್ ಗೆ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಪೂರೈಸಲು ಸಿದ್ಧವಿದ್ದು, ಎಲ್ಲವೂ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಲು ಅಮೆರಿಕ ತತ್ಪರವಾಗಿರುತ್ತದೆ. ಅಮೆರಿಕದಲ್ಲಿ ಪ್ರಗತಿಯ ಗಾಳಿ ಬೀಸುತ್ತಿರುವಂತೆ, ಈಗ ಕೊಲ್ಲಿ ರಾಷ್ಟ್ರಗಳಲ್ಲೂ ಸುವರ್ಣಕಾಲ ಬರಲಿದೆ’ ಎಂದಿದ್ದಾರೆ.
ಯುದ್ಧವಿರಾಮದಲ್ಲಿ ‘ದಲ್ಲಾಳಿ’ ಪಾಕಿಸ್ತಾನದ ಸಹಭಾಗಿತ್ವದ ಬಗ್ಗೆ ಪಾಕ್ ಪ್ರಧಾನಿಯ ‘ಎಕ್ಸ್’ ಪೋಸ್ಟ್ ಬಗ್ಗೆ ಚರ್ಚೆ !

ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಅವರ ಪೋಸ್ಟ್ ಒಂದು ದೊಡ್ಡ ಮಟ್ಟದಲ್ಲಿ ಪ್ರಸಾರವಾಗುತ್ತಿದ್ದು, ಇದಕ್ಕೆ ಪಾಕಿಸ್ತಾನದಿಂದ ಮಾತ್ರವಲ್ಲದೆ ವಿಶ್ವದಾದ್ಯಂತ ಟೀಕೆ ವ್ಯಕ್ತವಾಗುತ್ತಿದೆ. ಶಹಬಾಜ್ ಶರೀಫ್ ಅವರು ತಮ್ಮ ಪೋಸ್ಟ್ ನಲ್ಲಿ ‘ರಾಜತಾಂತ್ರಿಕತೆಗೆ ಅವಕಾಶ ನೀಡಲು ನಾನು ರಾಷ್ಟ್ರಾಧ್ಯಕ್ಷ ಟ್ರಂಪ್ ಅವರಲ್ಲಿ ಅತ್ಯಂತ ಕಳಕಳಿಯ ವಿನಂತಿ ಮಾಡುವುದೇನೆಂದರೆ, ಅವರು ಯುದ್ಧವಿರಾಮದ ಸಮಯಮಿತಿಯನ್ನು ಎರಡು ವಾರಗಳವರೆಗೆ ವಿಸ್ತರಿಸಬೇಕು’ ಎಂದು ಬರೆದಿದ್ದರು. ಇದರ ನಂತರ ಟ್ರಂಪ್ ಯುದ್ಧವಿರಾಮ ಘೋಷಿಸಿದರು. ಇರಾನ್ ವಿದೇಶಾಂಗ ಸಚಿವ ಅರಾಗ್ಚಿ ಅವರು ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಅವರು ಯುದ್ಧವಿರಾಮಕ್ಕಾಗಿ ಟ್ರಂಪ್ ಗೆ ಮಾಡಿದ ವಿನಂತಿಯನ್ನು ಉಲ್ಲೇಖಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಲ್ಲಿ ಪ್ರಧಾನಿ ಶರೀಫ್ ಅವರ ಪೋಸ್ಟ್ ನ ‘ಎಡಿಟ್ ಹಿಸ್ಟರಿ’ ಎಲ್ಲರ ಗಮನ ಸೆಳೆದಿದೆ. ಶರೀಫ್ ಅವರು ಮಾಡಿದ ಪೋಸ್ಟ್ ನ ಮೊದಲ ಆವೃತ್ತಿಯಲ್ಲಿ ‘ಡ್ರಾಫ್ಟ್ : ಪಾಕಿಸ್ತಾನ ಪ್ರಧಾನಿಯವರ ಎಕ್ಸ್ ಸಂದೇಶ’ ಎಂದು ಬರೆಯಲಾಗಿತ್ತು. ಇದರಿಂದ ‘ಶರೀಫ್ ಅವರು ಪೋಸ್ಟ್ ಮಾಡಿದ ಈ ಸಂದೇಶ ಮೊದಲೇ ಬರೆಯಲ್ಪಟ್ಟಿತ್ತು’ ಎಂಬುದು ಬಯಲಾಗಿದೆ. ಅಷ್ಟೇ ಅಲ್ಲದೆ ಈ ಸಂದೇಶ ಬೇರೆ ಕಡೆಯೇ ಅಂದರೆ ಬಹುಶಃ ಅಮೆರಿಕದಲ್ಲೇ ಸಿದ್ಧಪಡಿಸಲಾಗಿದೆಯೇ ? ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಅನೇಕರು ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ದೊಡ್ಡ ಮಟ್ಟದಲ್ಲಿ ಪ್ರಸಾರವಾಗುತ್ತಿರುವ ಪೋಸ್ಟ್ ಒಂದರಲ್ಲಿ, ‘ಶರೀಫ್ ಅವರು ವೈಟ್ ಹೌಸ್ ನಿಂದ ಬಂದ ಸೂಚನೆಗಳನ್ನು ತೆಗೆದುಹಾಕಲು ಮರೆತಿರುವುದು ಕಂಡುಬರುತ್ತಿದೆ’ ಎಂದು ಹೇಳಲಾಗಿದೆ. ಈ ಎಲ್ಲಾ ಚರ್ಚೆಗಳ ಬಗ್ಗೆ ಪಾಕಿಸ್ತಾನ ಅಥವಾ ಅಮೆರಿಕದಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation