ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ೪೦

‘ಆಧುನಿಕ ಜೀವನಶೈಲಿಯಿಂದ ಉಂಟಾಗುವ ಅನೇಕ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಉಪಾಯವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ ತತ್ವ ಮತ್ತು ವ್ಯಾಧಿಗನುಗುಣವಾಗಿ ಯೋಗ್ಯ ವ್ಯಾಯಾಮ’, ಇವುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ವ್ಯಾಯಾಮದ ಮಾಧ್ಯಮದಿಂದ ಆರೋಗ್ಯಕರ ಜೀವನಶೈಲಿಯನ್ನು
ಅಳವಡಿಸಿಕೊಳ್ಳುವ ಈ ಪ್ರಯಾಣವು ಎಲ್ಲರಿಗೂ ಖಂಡಿತವಾಗಿಯೂ ಪ್ರೇರಣಾದಾಯಿಯಾಗಲಿದೆ !
ಯೋಗ್ಯ ಪದ್ಧತಿಯಲ್ಲಿ ವ್ಯಾಯಾಮ ಮಾಡಿದರೆ ನರಗಳ ಕಾಯಿಲೆಗಳಿಂದ, ಅಂದರೆ ಕೈ-ಕಾಲುಗಳಲ್ಲಿ ಇರುವೆ ಬರುವುದು (ಜಾಡ್ಯ ಹಿಡಿಯುವುದು), ಉರಿ ಆಗುವುದು ಮುಂತಾದವುಗಳಿಂದ ಮುಕ್ತಿ ಪಡೆಯಲು ನಿಶ್ಚಿತವಾಗಿ ಸಹಾಯವಾಗುವುದು. ಈ ಲೇಖನದಲ್ಲಿ ನಾವು ‘ವ್ಯಾಯಾಮ ಮಾಡಿದ ನಂತರ ನರಗಳಿಗೆ ಯಾವ ಲಾಭಗಳಾಗುತ್ತವೆ ?’ ಎಂಬುದನ್ನು ನೋಡೋಣ.
೨೭/೨೮ ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ನಾವು ‘ಸಂವೇದನೆಗಳಿಗೆ ಪ್ರತಿಕ್ರಿಯೆ ನೀಡುವ ಪ್ರಕ್ರಿಯೆಯು ನರಗಳ ಮಾಧ್ಯಮದಿಂದ ಪೂರ್ಣಗೊಳ್ಳುವುದು ಮತ್ತು ಶರೀರದ ಆಂತರಿಕ ಕ್ರಿಯೆಗಳು ನರಗಳಿಂದಲೇ ನಡೆಯುತ್ತಿದ್ದು, ಅದರಿಂದ ಶರೀರಕ್ಕೆ ಸಜೀವತ್ವ ಬರುವುದು’ ಎಂಬುದರ ಬಗ್ಗೆ ಮಾಹಿತಿಯನ್ನು ಓದಿದ್ದೇವೆ. ಇಂದು ಈ ಲೇಖನದ ಅಂತಿಮ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

೪. ಶರೀರದಲ್ಲಿ ಅತ್ಯಂತ ಮಹತ್ವದ ಕಾರ್ಯ ಮಾಡುವ ನರಗಳು ಅತ್ಯಂತ ನಾಜೂಕಾಗಿದ್ದು, ಅವುಗಳ ಮೇಲೆ ಸ್ವಲ್ಪ ಆಘಾತವಾದರೂ ತೀವ್ರ ವೇದನೆಯಾಗಿ ಅವು ತಕ್ಷಣ ನೋವಿಗೀಡಾಗುವುದು
ಶರೀರದಲ್ಲಿ ಅತ್ಯಂತ ಮಹತ್ವದ ಕಾರ್ಯ ಮಾಡುವ ಈ ನರಗಳು ಮಾತ್ರ ಅತ್ಯಂತ ನಾಜೂಕಾಗಿರುತ್ತವೆ. ಅವುಗಳ ಮೇಲೆ ಸ್ವಲ್ಪ ಜೋರಾದ ಆಘಾತವಾದರೆ ಮನುಷ್ಯನಿಗೆ ತೀವ್ರ ವೇದನೆಯಾಗುತ್ತದೆ. ನರಗಳ ಕಾಯಿಲೆ ಇರುವವರಿಗೆ ಈ ವೇದನೆಗಳ ಬಗ್ಗೆ ಖಂಡಿತವಾಗಿಯೂ ತಿಳಿದಿರುತ್ತದೆ; ಆದರೆ ಅದಕ್ಕಾಗಿ ಕಾಯಿಲೆ ಬೀಳುವ ಅವಶ್ಯಕತೆಯಿಲ್ಲ. ಬಾಲ್ಯದಲ್ಲಿ ತಮಾಷೆಗಾಗಿ ಅಥವಾ ಸ್ವಲ್ಪ ದೊಡ್ಡವರಾದ ಮೇಲೆ ಕೈಗೆ ಎಲ್ಲಿಯಾದರೂ ಏಟು ಬಿದ್ದಾಗ ಬಹುತೇಕ ಎಲ್ಲಾ ಸದೃಢ ವ್ಯಕ್ತಿಗಳು ತಮ್ಮ ಜೀವನದಲ್ಲಿ ಎಂದಾದರೊಮ್ಮೆ ಇದರ ಅನುಭವ ಪಡೆದಿರುತ್ತಾರೆ. ನಮ್ಮ ಕೈಯ ಮೊಣಕೈಯ ಒಳಗಿನ ಭಾಗದಲ್ಲಿ ಒಂದು ನರವಿದೆ. ಅಲ್ಲಿ ಏಟು ಬಿದ್ದಾಗ ಅಥವಾ ಯಾರಾದರೂ ತಮಾಷೆಗೆ ಅಲ್ಲಿ ಬೆರಳಿನಿಂದ ಚುಚ್ಚಿದಾಗ ಕೈಗೆ ವಿದ್ಯುತ್ ಶಾಕ್ ಹೊಡೆದಂತೆ ಸಂವೇದನೆಯಾಗುತ್ತದೆ. ಇದೇ ಸ್ಥಳದಲ್ಲಿ ಜೋರಾಗಿ ಏಟು ಬಿದ್ದರೆ ಅಥವಾ ಮೂಳೆ ಮುರಿತ ಸಂಭವಿಸಿದರೆ ಕೈ ಪಾರ್ಶ್ವವಾಯವಿಗೆ ಈಡಾಗಬಹುದು (ಜೋತು ಬೀಳಬಹುದು). ಇದರಿಂದಲೇ ನರಗಳ ನಾಜೂಕುತನ ಮತ್ತು ನರಗಳ ಕಾಯಿಲೆಗಳ ತೀವ್ರತೆಯನ್ನು ಅಂದಾಜಿಸಬಹುದು.
೫. ವ್ಯಾಯಾಮದಿಂದ ಸ್ನಾಯುಗಳು ಬಲಿಷ್ಠ ಮತ್ತು ಸುಂದರವಾದಾಗ ನಾಜೂಕು ನರಗಳಿಗೆ ಅದರಿಂದ ಹೆಚ್ಚಿನ ಆಧಾರ ದೊರೆಯುವುದು ಮತ್ತು ನರಗಳಿಗೆ ಗಾಯವಾಗುವ ಸಾಧ್ಯತೆ ಕಡಿಮೆಯಾಗುವುದು
ಎರಡು ಗುಡ್ಡಗಳ ಮಧ್ಯದಿಂದ ನದಿ ಹರಿಯುವಂತೆ, ನರಗಳು ಮತ್ತು ರಕ್ತನಾಳಗಳು ಎರಡು ಸ್ನಾಯುಗಳ ಮಧ್ಯದಿಂದ ದಾರಿ ಮಾಡಿಕೊಳ್ಳುತ್ತವೆ. ಅವುಗಳ ಕಾರ್ಯಕ್ಕಾಗಿ ಈ ಮಾರ್ಗವು ಬಹಳ ಉಪಯುಕ್ತವಾಗಿರುತ್ತದೆ. ಈ ರೀತಿಯಾಗಿ ನರಗಳು ಸ್ನಾಯುಗಳ ಆಳದಲ್ಲಿ ಇರುವುದರಿಂದ ಅವುಗಳಿಗೆ ಏಟು ಬೀಳದಂತೆ ಸ್ನಾಯುಗಳು ರಕ್ಷಿಸಬಲ್ಲವು. ಪೈಲ್ವಾನರಿಗೆ ಹೋಲಿಸಿದರೆ ತೆಳ್ಳಗಿನ ವ್ಯಕ್ತಿಗಳ ನರಗಳಿಗೆ ಏಟು ಬೀಳುವ ಸಾಧ್ಯತೆ ಅನೇಕ ಪಟ್ಟು ಹೆಚ್ಚಿರುತ್ತದೆ ಮತ್ತು ಆ ‘ಕೃಶ ವ್ಯಕ್ತಿಗಳು ಗಾಯದಿಂದ ಗುಣಮುಖರಾಗುವ ಕಾಲಾವಧಿಯು ತುಲನಾತ್ಮಕವಾಗಿ ಹೆಚ್ಚಿರುತ್ತದೆ’, ಎಂಬುದು ಗಮನಕ್ಕೆ ಬಂದಿದೆ. ವ್ಯಾಯಾಮದಿಂದ ಸ್ನಾಯುಗಳು ಬಲಿಷ್ಠ ಮತ್ತು ಸುಂದರವಾದಾಗ ನಾಜೂಕು ನರಗಳಿಗೆ ಅದರಿಂದ ಹೆಚ್ಚಿನ ಆಧಾರ ದೊರೆಯುತ್ತದೆ. ಇದರಿಂದ ನರಗಳಿಗೆ ಗಾಯವಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ಹಾಗೆಯೇ ನರಗಳಿಗೆ ಗಾಯವಾಗಿದ್ದಲ್ಲಿ ಅದು ಬೇಗನೆ ಗುಣವಾಗುತ್ತದೆ. ನರಗಳ ಘಾತಕ ಮತ್ತು ವೇದನೆದಾಯಕ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದರೆ ಯೋಗ್ಯ ಮಾರ್ಗದರ್ಶನದಲ್ಲಿ ನಿಯಮಿತವಾಗಿ ವ್ಯಾಯಾಮವೇ ಅತ್ಯಂತ ಅವಶ್ಯಕವಾಗಿದೆ. (ಮುಕ್ತಾಯ)
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ, ಫೋಂಡಾ, ಗೋವಾ. (೨೫.೧೨.೨೦೨೪)
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !