ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಜಾರ್ಖಂಡ್ ಸರಕಾರಕ್ಕೆ ನೋಟಿಸ್

ಧನಬಾದ (ಜಾರ್ಖಂಡ್) – ಇಲ್ಲಿ ಶ್ರೀರಾಮನವಮಿ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿದ್ದರು; ಆದರೆ ಕಲ್ಲು ತೂರಾಟ ನಡೆಸಿದ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವ ಬದಲಿಗೆ, ಪೊಲೀಸರು ಮೆರವಣಿಗೆಯ ಆಯೋಜಕರಾದ ಹಿಂದೂಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪೊಲೀಸರು ಮೆರವಣಿಗೆಯ ಆಯೋಜಕರನ್ನು ವಶಕ್ಕೆ ಪಡೆದು, ಅವರನ್ನು ಹಗ್ಗದಿಂದ ಕಟ್ಟಿ ಮಾರುಕಟ್ಟೆಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಜಾರ್ಖಂಡ್ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ ಮಹಾನಿರ್ದೇಶಕರಿಗೆ ನೋಟಿಸ್ ಕಳುಹಿಸಿದ್ದಾರೆ.
ಹಿಂದೂಗಳನ್ನು ಹಗ್ಗದಿಂದ ಕಟ್ಟಿ ಮಾರುಕಟ್ಟೆಯಲ್ಲಿ ಮೆರವಣಿಗೆ ಮಾಡಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಯೋಗವು ಹೇಳಿದೆ. ಈ ಪ್ರಕರಣದ ಕುರಿತು ೭ ದಿನಗಳಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಆಯೋಗವು ಆದೇಶಿಸಿದೆ.
೧. ಧನಬಾದನ ಬಲಿಯಾಪುರ ವ್ಯಾಪ್ತಿಯ ಭೀಖರಾಜಪುರ ಗ್ರಾಮದಲ್ಲಿ ಶ್ರೀರಾಮನವಮಿ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿದ್ದರು. ಈ ಕಲ್ಲು ತೂರಾಟದಲ್ಲಿ ಅನೇಕ ಹಿಂದೂ ಭಕ್ತರು ಗಾಯಗೊಂಡಿದ್ದಾರೆ.
೨. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಎರಡೂ ಗುಂಪುಗಳ ಕೆಲವು ಜನರನ್ನು ವಶಕ್ಕೆ ಪಡೆದರು; ಆದರೆ ಕೇವಲ ಹಿಂದೂಗಳಿಗೆ ಅಯೋಗ್ಯ ವರ್ತನೆ ತೋರಿರುವುದರಿಂದ ಈ ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.
೩. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋದ ಪ್ರಕಾರ, ಪೊಲೀಸರು ಸಾಮಾಜಿಕ ಕಾರ್ಯಕರ್ತ ಶತ್ರುಘ್ನ ಮಹತೋ ಮತ್ತು ಮೆರವಣಿಗೆಯ ಇತರ ಆಯೋಜಕರನ್ನು ಹಗ್ಗದಿಂದ ಕಟ್ಟಿ ಬಹಿರಂಗವಾಗಿ ಮಾರುಕಟ್ಟೆಯಲ್ಲಿ ಮೆರವಣಿಗೆ ಮಾಡಿದ್ದಾರೆ.
೪. ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಶಶಾಂಕ ರಾಜ್ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಿದ್ದರು. ‘ಪೊಲೀಸರ ಈ ನಿಲುವು ಸಂಪೂರ್ಣವಾಗಿ ಪಕ್ಷಪಾತದಿಂದ ಕೂಡಿದೆ. ಕಲ್ಲು ತೂರಾಟ ಮುಸಲ್ಮಾನ ಗುಂಪಿನಿಂದ ನಡೆದಿದ್ದರೂ, ಮೆರವಣಿಗೆಯ ಆಯೋಜಕರನ್ನೇ ಅಪರಾಧಿಗಳಂತೆ ರಸ್ತೆಯಲ್ಲಿ ನಡೆಸಲಾಯಿತು’ ಎಂದು ಶಶಾಂಕ ರಾಜ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
೫. ಈ ಘಟನೆಯ ನಂತರ ಪರಿಸರದಲ್ಲಿ ಆಕ್ರೋಶದ ವಾತಾವರಣವಿದ್ದು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬರುತ್ತಿದೆ.
ಸಂಪಾದಕೀಯ ನಿಲುವು
|
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !