
‘ಓರ್ವ ಹಿತಚಿಂತಕರು ಹೇಳಿದಂತೆ, ಕಳೆದ ೨ ತಿಂಗಳಿಂದ ನಾನು ನನ್ನ ಆರೋಗ್ಯಕ್ಕಾಗಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ‘ಶ್ರೀ ರಾಮರಕ್ಷಾ ಸ್ತೋತ್ರ’ವನ್ನು ಪಠಿಸಿ, ಶ್ರೀರಾಮನ ನಾಮಜಪವನ್ನು ಒಂದು ಮಾಲೆ ಮಾಡುತ್ತಿದ್ದೇನೆ. ಸುಮಾರು ೧೫ ದಿನಗಳ ಹಿಂದೆ, ‘ಶ್ರೀರಾಮನ ಉಪಾಸನೆಗೆ ಹೆಚ್ಚಿನ ಬಲ ಸಿಗಲು ಹನುಮಂತನ ಉಪಾಸನೆಯನ್ನೂ ಮಾಡಬೇಕು’ ಎಂದು ನನಗೆ ಅನ್ನಿಸಿತು. ಹಾಗಾಗಿ ಅದರ ಜೊತೆಗೆ ನಾನು ‘ಹನುಮಾನಸ್ತೋತ್ರ’ ಮತ್ತು ಹನುಮಂತನ ನಾಮಜಪವನ್ನು ಒಂದು ಮಾಲೆ ಮಾಡಲು ಪ್ರಾರಂಭಿಸಿದೆ.
ಇಂದು ರಾಮರಕ್ಷಾಸ್ತೋತ್ರದ ಅರ್ಥವಿರುವ ಗ್ರಂಥವನ್ನು ಓದುತ್ತಿರುವಾಗ, ಅದರಲ್ಲಿ ‘ರಾಮಭಕ್ತರ ಪ್ರಾರ್ಥನೆಯನ್ನು ಶ್ರೀರಾಮನಿಗೆ ತಲುಪಿಸುವ ಕಾರ್ಯವನ್ನು ಹನುಮಂತನು ಇಂದಿಗೂ ಮಾಡುತ್ತಿದ್ದಾನೆ. ಅನೇಕ ಮಹಾನ್ ಸಂತರು ಶ್ರೀರಾಮನ ದರ್ಶನಕ್ಕಾಗಿ ಹನುಮಂತನ ಆಶ್ರಯ ಪಡೆದಿದ್ದಾರೆ’ ಎಂಬ ವಾಕ್ಯವು ನನ್ನ ಕಣ್ಣಿಗೆ ಬಿತ್ತು. ಇದನ್ನು ಓದಿದಾಗ, ಭಗವಂತನು ನನ್ನಿಂದ ಮೊದಲೇ ಈ ಕೃತಿಯನ್ನು ಮಾಡಿಸಿಕೊಂಡಿದ್ದಾನೆ ಎಂಬ ಅರಿವು ನನಗಾಯಿತು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೧.೧೨.೨೦೨೪)
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !