ಪಾಕಿಸ್ತಾನದ ಮೌಲಾನಾ ಮುಫ್ತಿ ಸಯೀದ್ ಖಾನ್ ಅವರಿಂದ ಬಹಿರಂಗ
(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಅಭ್ಯಾಸಕ, ಮುಫ್ತಿ ಎಂದರೆ ಶರಿಯತ್ ಕಾನೂನಿನ ಪ್ರಕಾರ ನ್ಯಾಯ ತೀರ್ಪು ನೀಡುವವನು)

ಮುಜಫರಾಬಾದ್ (ಪಾಕಿಸ್ತಾನ ಆಕ್ರಮಿತ ಕಾಶ್ಮೀರೀರ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅಲ್ಲಿನ ಜಿಹಾದಿ ಭಯೋತ್ಪಾದಕರೇ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಅಲ್ಲಿನ ಪ್ರಸಿದ್ಧ ಮೌಲಾನಾ ಮುಫ್ತಿ ಸಯೀದ ಖಾನ್ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರಿಂದ ಮಹಿಳೆಯರ ವ್ಯವಸ್ಥಿತ ಶೋಷಣೆಯಾಗುತ್ತಿದೆ ಎಂದು ಅವರು ಹೇಳಿದರು.
‘ಕಾಶ್ಮೀರ್ ಅಂಡ್ ಅವರ್ ಹೈಪೋಕ್ರಸಿ’ (ಕಾಶ್ಮೀರ ಮತ್ತು ನಮ್ಮ ಬೂಟಾಟಿಕೆ) ಹೆಸರಿನ ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದರು. ಕಾಶ್ಮೀರದ ಉಗ್ರವಾದದ ಹಿಂದಿನ ಒಂದು ಕರಾಳ ಮುಖವೆಂದರೆ, ಭಯೋತ್ಪಾದಕರನ್ನು ಅನೇಕ ಬಾರಿ ‘ಮುಜಾಹಿದ್ದೀನ್’ (ಜಿಹಾದ್ ಗಾಗಿ ಹೋರಾಡುವವರು) ಅಥವಾ ಧಾರ್ಮಿಕ ಯೋಧರೆಂದು ಗೌರವಿಸಲಾಗುತ್ತದೆ; ಆದರೆ ವಾಸ್ತವದಲ್ಲಿ ಅವರೇ ಅಸಹಾಯಕ ಮಹಿಳಾ ನಿರಾಶ್ರಿತರನ್ನು ಬಲವಂತವಾಗಿ ದೈಹಿಕ ಸಂಬಂಧ ಹೊಂದಲು ಒತ್ತಾಯಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ರೊಟ್ಟಿಯನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
Shocking claim by Maulana Mufti Saeed Khan: terrorists in Pakistan-Occupied Kashmir are exploiting and assaulting poor women.
If the terrorists, who claim to be waging armed Jihad to secure the alleged "just rights" of Kashmiri Muslims are themselves committing such atrocities,… pic.twitter.com/jjMjVCHkNN
— Sanatan Prabhat (@SanatanPrabhat) April 1, 2026
ಯಾರು ಈ ಮುಫ್ತಿ ಸಯೀದ್ ಖಾನ್?
ಮುಫ್ತಿ ಸಯೀದ ಖಾನ್ ಅವರು ದೇವಬಂದಿ ವಿಚಾರಧಾರೆಗೆ ಸಂಬಂಧಿಸಿದವರಾಗಿದ್ದು, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಭಾರತೀಯ ಗುಪ್ತಚರ ಸಂಸ್ಥೆಗಳು ಏನು ಹೇಳುತ್ತವೆ?
ಭಾರತೀಯ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯ ಪ್ರಕಾರ, ಖಾನ್ ಅವರ ಈ ಹೇಳಿಕೆಯು ಪಾಕಿಸ್ತಾನದ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯಿಂದ ಬಂದ ಅಪರೂಪದ ಒಪ್ಪಿಗೆಯಾಗಿದೆ. ಇದರಿಂದ ಪಾಕಿಸ್ತಾನವು ದೀರ್ಘಕಾಲದಿಂದ ಪ್ರತಿಪಾದಿಸುತ್ತಿರುವ ‘ಶುದ್ಧ ಜಿಹಾದ್’ ಎಂಬ ಕಥನಕ್ಕೆ ಭಾರಿ ಹೊಡೆತ ಬಿದ್ದಿದೆ.
ಮೂಲಗಳ ಪ್ರಕಾರ ಈ ಹೇಳಿಕೆಯು, ಐ.ಎಸ್.ಐ. (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ ಅಂದರೆ ಅಂತರ ಸೇವಾ ಗುಪ್ತಚರ ಸಂಸ್ಥೆ) ಬೆಂಬಲಿತ ಮತ್ತು ಸಶಸ್ತ್ರ ಭಯೋತ್ಪಾದಕರು ಸ್ಥಳೀಯ ಜನರನ್ನು ಶೋಷಿಸುತ್ತಿದ್ದ ಆ ‘ಪ್ರಾಕ್ಸಿ’ (ಛದ್ಮ) ಯುದ್ಧತಂತ್ರದ ಕಡೆಗೆ ಬೆರಳು ಮಾಡುತ್ತದೆ ಎಂದು ತಿಳಿಸಿವೆ. ಈ ಹೇಳಿಕೆಯಿಂದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವರದಿಗಳಿಗೂ ಬಲ ಬಂದಂತಾಗಿದೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ