ಮೊಹಮ್ಮದ್ ಫರಾಜ್‌ನಿಂದ ಹಿಂದೂ ಯುವತಿಯ ಮೇಲೆ ಅತ್ಯಾಚಾರ, ಮತಾಂತರಕ್ಕಾಗಿ ಒತ್ತಡ!

  • ಲಕ್ಷ್ಮಣಪುರಿ (ಉತ್ತರ ಪ್ರದೇಶ) ಘಟನೆ

  • ಸಹೋದರ ಮತ್ತು ಸ್ನೇಹಿತರಿಂದಲೂ ಅತ್ಯಾಚಾರ ಮಾಡಿಸಿದ ಆರೋಪಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿ ಜನಸೇವಾ ಕೇಂದ್ರವನ್ನು ನಡೆಸುತ್ತಿದ್ದ ಮೊಹಮ್ಮದ್ ಫರಾಜ್ ಎಂಬ ಯುವಕನು ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಲೈಂಗಿಕ ಶೋಷಣೆ ನಡೆಸಿದ್ದಾನೆ. ಮೊಹಮ್ಮದ್ ಅವಳಿಗೆ ಅಮಲು ಪದಾರ್ಥ ನೀಡಿ ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫರಾಜ್‌ನನ್ನು ಇಲ್ಲಿನ ಸಲೀಂ ತಿರಾಹ ಪ್ರದೇಶದಲ್ಲಿ ಬಂಧಿಸಿದ್ದಾರೆ.

೧. ಫರಾಜ್ ಅತ್ಯಾಚಾರ ಮಾಡುವಾಗ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ ಎಂದು ಸಂತ್ರಸ್ತ ಹಿಂದೂ ಯುವತಿ ಆರೋಪಿಸಿದ್ದಾಳೆ.

೨. ಆನಂತರ ಆ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿ, ಸಂತ್ರಸ್ತೆಯನ್ನು ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ.

೩. ಸಂತ್ರಸ್ತೆಯು ಇದನ್ನು ವಿರೋಧಿಸಿದಾಗ ಫರಾಜ್ ಅವಳಿಗೆ ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಅವಳ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದ್ದಾನೆ. “ಇಸ್ಲಾಂ ಧರ್ಮವನ್ನು ಸ್ವೀಕರಿಸದ ಹೊರತು ನಿಕಾಹ್ (ಮದುವೆ) ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದ್ದಾನೆ.

೪. ಮಾರ್ಚ್ ೨೨ ರಂದು ಆರೋಪಿಯು ಸಂತ್ರಸ್ತ ಯುವತಿಯ ತಂದೆಗೆ ಆಕ್ಷೇಪಾರ್ಹ ವಿಡಿಯೋವನ್ನು ಕಳುಹಿಸಿ ಅವರಿಗೆ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ‘ಲವ್ ಜಿಹಾದ್’ ವಿರೋಧಿ ಕಾಯಿದೆ ಇದ್ದರೂ ಸಹ, ಲವ್ ಜಿಹಾದಿಗಳು ಇಂತಹ ಕೃತ್ಯಗಳನ್ನು ಎಸಗುತ್ತಲೇ ಇದ್ದಾರೆ. ಇದರರ್ಥ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಭಯವಿಲ್ಲ ಎಂದಾಯಿತು. ಹಾಗೆಯೇ ಅವರಿಗೆ ಸಿಗುವ ಮತಾಂಧತೆಯ ಶಿಕ್ಷಣವು ಇಂತಹ ಕೃತ್ಯಗಳನ್ನು ಮಾಡಲು ಅವರನ್ನು ಪ್ರೇರೇಪಿಸುತ್ತದೆ. ಆದ್ದರಿಂದ ಈಗ ಕೇವಲ ಕಾನೂನು ಮಾಡುವುದರಿಂದಲ್ಲ, ಬದಲಾಗಿ ಇಂತಹ ಶಿಕ್ಷಣಕ್ಕೆ ಕಡಿವಾಣ ಹಾಕುವ ಪ್ರಯತ್ನಗಳಾಗಬೇಕು ಎಂಬುವುದೇ ಸತ್ಯ!