
ವಾಷಿಂಗ್ಟನ್ (ಅಮೆರಿಕ) – ಬರುವ ಜೂನ್ ತಿಂಗಳಿನಿಂದ ಅಮೆರಿಕದ ಕರೆನ್ಸಿಯಾದ ಡಾಲರ್ ಮೇಲೆ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯನ್ನು ಮುದ್ರಿಸಲಾಗುವುದು ಎಂದು ಅಮೆರಿಕದ ಹಣಕಾಸು ಸಚಿವಾಲಯ ತಿಳಿಸಿದೆ. ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಹಾಲಿ ರಾಷ್ಟ್ರಾಧ್ಯಕ್ಷರೊಬ್ಬರ ಸಹಿಯು ಡಾಲರ್ ಮೇಲೆ ಕಾಣಿಸಿಕೊಳ್ಳಲಿದೆ. ಇಲ್ಲಿಯವರೆಗೆ ಡಾಲರ್ ಮೇಲೆ ಕೇವಲ ಹಣಕಾಸು ಸಚಿವರು ಮತ್ತು ಖಜಾಂಚಿಗಳ (Treasurer) ಸಹಿಯನ್ನು ಮಾತ್ರ ಮುದ್ರಿಸಲಾಗುತ್ತಿತ್ತು ಮತ್ತು ಈ ಸಂಪ್ರದಾಯವು ೧೮೬೧ರಿಂದ ಜಾರಿಯಲ್ಲಿತ್ತು. ಈಗ ಖಜಾಂಚಿಯ ಸಹಿಯನ್ನು ತೆಗೆದುಹಾಕಿ ಅಲ್ಲಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯನ್ನು ಮುದ್ರಿಸಲಾಗುತ್ತದೆ. ಎಲ್ಲಕ್ಕಿಂತ ಮೊದಲು ೧೦೦ ಡಾಲರ್‌ನ ನೋಟುಗಳ ಮೇಲೆ ಟ್ರಂಪ್ ಅವರ ಸಹಿಯನ್ನು ಮುದ್ರಿಸಲಾಗುತ್ತದೆ. ಆನಂತರ ಉಳಿದ ನೋಟುಗಳ ಮೇಲೂ ಅದನ್ನು ಮುದ್ರಿಸಲಾಗುತ್ತದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation