ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ

ವಾಷಿಂಗ್ಟನ್ (ಅಮೆರಿಕ) – ‘ನೇಚರ್ ಜರ್ನಲ್’ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ‘ಗ್ಲೋಬಲ್ ವಾರ್ಮಿಂಗ್’ (ಜಾಗತಿಕ ತಾಪಮಾನ ಏರಿಕೆ)ಗೆ ಸಂಬಂಧಿಸಿದ ಆರ್ಥಿಕ ಪರಿಣಾಮಗಳಲ್ಲಿ ಅಮೆರಿಕವು ಅತಿ ದೊಡ್ಡ ಪಾಲುದಾರನಾಗಿದೆ. ಅಮೆರಿಕದ ಇಂಗಾಲದ (ಕಾರ್ಬನ್) ಹೊರಸೂಸುವಿಕೆಯಿಂದಾಗಿ ೧೯೯೦ನೇ ಇಸವಿಯಿಂದ ಜಗತ್ತಿಗೆ ಅಂದಾಜು ೧೦ ಟ್ರಿಲಿಯನ್ ಡಾಲರ್, ಅಂದರೆ ೮೩೦ ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ನಷ್ಟವಾಗಿದೆ. ಈ ನಷ್ಟದ ಅತಿ ದೊಡ್ಡ ಹೊರೆ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಬಿದ್ದಿದೆ. ಭಾರತವು ಅಂದಾಜು ೫೦೦ ಬಿಲಿಯನ್ ಡಾಲರ್, ಅಂದರೆ ೪೧ ಲಕ್ಷ ೫೦ ಸಾವಿರ ಕೋಟಿ ರೂಪಾಯಿಗಳ, ಹಾಗೂ ಬ್ರೆಜಿಲ್ ಅಂದಾಜು ೩೩೦ ಬಿಲಿಯನ್ ಡಾಲರ್ (೨೭ ಲಕ್ಷ ೩೯ ಸಾವಿರ ಕೋಟಿ ರೂಪಾಯಿಗಳ) ನಷ್ಟವನ್ನು ಅನುಭವಿಸಬೇಕಾಗಿದೆ.
ಹೆಚ್ಚುತ್ತಿರುವ ತಾಪಮಾನದಿಂದಾಗಿ ಉತ್ಪಾದಕತೆ, ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರಿಂದಾಗಿ ಹಲವು ದೇಶಗಳ ಬೆಳವಣಿಗೆ ಕುಂಠಿತಗೊಂಡಿದೆ. ಆದಾಗ್ಯೂ, ಈ ನಷ್ಟದ ಸ್ವಲ್ಪ ಭಾಗವನ್ನು ಅಮೆರಿಕವು ಸ್ವತಃ ಅನುಭವಿಸಿದೆ; ಆದರೆ ಜಗತ್ತಿನ ಮೇಲಾದ ಒಟ್ಟಾರೆ ಪರಿಣಾಮಗಳಿಗೆ ಹೋಲಿಸಿದರೆ ಅದು ಅತ್ಯಲ್ಪವಾಗಿದೆ.
ಸಂಪಾದಕೀಯ ನಿಲುವು
|
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman