ರಾಜ್ಯಸಭೆ: ‘ಆಪ್’ ಸಂಸದ ರಾಘವ್ ಚಡ್ಡಾ ಅವರಿಂದ ಮೊಬೈಲ್ ಡೇಟಾ ಬಗ್ಗೆ ವಿಷಯ ಪ್ರಸ್ತಾಪ

ನವದೆಹಲಿ – ಪ್ರತಿದಿನ ನಿರ್ದಿಷ್ಟ ‘ಮೊಬೈಲ್ ಡೇಟಾ’ ಒದಗಿಸುವ ರೀಚಾರ್ಜ್ ಪ್ಲಾನ್‌ಗಳಲ್ಲಿ, ಬಳಸದೇ ಹಾಗೇ ಉಳಿದ ಡೇಟಾ ಮಧ್ಯರಾತ್ರಿಯೇ ಮುಕ್ತಾಯಗೊಳ್ಳುವ ಪದ್ಧತಿಯು ಗ್ರಾಹಕರಿಗೆ ಮಾಡುವ ಅನ್ಯಾಯವಾಗಿದೆ. ಗ್ರಾಹಕರು ಯಾವ ಡೇಟಾಕ್ಕಾಗಿ ಹಣ ಪಾವತಿಸುತ್ತಾರೋ, ಅದನ್ನು ಬಳಸದಿದ್ದರೂ ಅದು ಹೇಗೆ ಖಾಲಿಯಾಗುತ್ತದೆ? ಇದು ಕೇವಲ ತಾಂತ್ರಿಕ ವಿಷಯವಲ್ಲ, ಬದಲಿಗೆ ಕಂಪನಿಗಳ ಪೂರ್ವನಿರ್ಧರಿತ ನೀತಿಯಾಗಿದೆ. ಇದರಿಂದ ಗ್ರಾಹಕರು ಅನಗತ್ಯ ನಷ್ಟ ಅನುಭವಿಸಬೇಕಾಗುತ್ತಿದೆ ಎಂದು ರಾಜ್ಯಸಭೆಯ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಟೀಕಿಸಿದ್ದಾರೆ.
‘ಡಿಜಿಟಲ್ ಇಂಡಿಯಾ’ ನಿರ್ಮಾಣದ ಪ್ರಕ್ರಿಯೆಯಲ್ಲಿ ‘ಇಂಟರ್ನೆಟ್ ಡೇಟಾ’ ಒಂದು ಮೂಲಭೂತ ಅವಶ್ಯಕತೆ!
ರಾಘವ್ ಚಡ್ಡಾ ಅವರು ಮಾತು ಮುಂದುವರಿಸುತ್ತಾ, “ಪ್ರಸ್ತುತ ಹೆಚ್ಚಿನ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಪ್ರತಿದಿನ 1.5 GB, 2 GB ಅಥವಾ 3 GB ಡೇಟಾವನ್ನು ನೀಡುತ್ತವೆ. ಈ ಡೇಟಾ ಪ್ರತಿ 24 ಗಂಟೆಗಳಿಗೊಮ್ಮೆ ರಿಸೆಟ್ ಆಗುತ್ತದೆ. ಆದರೆ ಒಬ್ಬ ಬಳಕೆದಾರ ನಿಗದಿತ ಮಿತಿಗಿಂತ ಕಡಿಮೆ ಡೇಟಾ ಬಳಸಿದರೆ, ಬಾಕಿ ಉಳಿದ ಡೇಟಾ ಸಂಪೂರ್ಣವಾಗಿ ವ್ಯರ್ಥವಾಗುತ್ತದೆ. ಉದಾಹರಣೆಗೆ, ಗ್ರಾಹಕರಿಗೆ 2 GB ಡೇಟಾ ಸಿಕ್ಕಾಗ ಕೇವಲ 1.5 GB ಮಾತ್ರ ಬಳಸಿದರೆ, ಉಳಿದ 0.5 GB ಡೇಟಾವನ್ನು ಮರುದಿನ ಬಳಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಪ್ರತಿಯಾಗಿ ಹಣವನ್ನು ಮರಳಿ ನೀಡುವ ಅಥವಾ ಮರುದಿನ ಬಳಸಲು ಅವಕಾಶ ನೀಡುವ ಯಾವುದೇ ವ್ಯವಸ್ಥೆಯಿಲ್ಲ. ‘ಡಿಜಿಟಲ್ ಇಂಡಿಯಾ’ ನಿರ್ಮಾಣದ ಪ್ರಕ್ರಿಯೆಯಲ್ಲಿ ಇಂಟರ್ನೆಟ್ ಡೇಟಾ ಮೂಲಭೂತ ಅವಶ್ಯಕತೆಯಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಹಣ ನೀಡಿ ಪಡೆದ ಡೇಟಾ ‘ಮಾಯವಾಗುವುದು’ ಸರಿಯಲ್ಲ,” ಎಂಬ ರಾಘವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಘವ್ ಚಡ್ಡಾ ಅವರ ಬೇಡಿಕೆಗಳು,ಅ. ಬಳಸದೇ ಬಾಕಿ ಉಳಿದ ಡೇಟಾ ಅನ್ನು ಮರುದಿನದ ಡೇಟಾ ಮಿತಿಗೆ ಸೇರಿಸಬೇಕು (Data Rollover). ಆ. ಒಂದು ವೇಳೆ ಗ್ರಾಹಕರು ಸತತವಾಗಿ ಕಡಿಮೆ ಡೇಟಾ ಬಳಸುತ್ತಿದ್ದರೆ, ಅವರ ಮುಂದಿನ ರೀಚಾರ್ಜ್‌ನಲ್ಲಿ ಅದಕ್ಕೆ ತಕ್ಕಂತೆ ರಿಯಾಯಿತಿ ನೀಡಬೇಕು. ಗ್ರಾಹಕರು ಬಳಸದ ಸೇವೆಗಾಗಿ ಪದೇ ಪದೇ ಹಣ ಪಾವತಿಸುವುದು ಸರಿಯಲ್ಲ. ಇ. ಬಳಸದ ಡೇಟಾವನ್ನು ‘ಡಿಜಿಟಲ್ ಆಸ್ತಿ’ ಎಂದು ಪರಿಗಣಿಸಿ, ಅದನ್ನು ಕುಟುಂಬದವರು ಅಥವಾ ಸ್ನೇಹಿತರಿಗೆ ವರ್ಗಾಯಿಸಲು ಅನುಮತಿ ನೀಡಬೇಕು. ಹಣ ವರ್ಗಾಯಿಸುವಂತೆ ಡೇಟಾ ಅನ್ನು ಕೂಡ ವರ್ಗಾಯಿಸಲು ಅವಕಾಶ ಒದಗಿಸಬೇಕು. |
ಸಂಪಾದಕೀಯ ನಿಲುವುಈ ವಿಷಯವನ್ನು ಸಂಸತ್ತಿನಲ್ಲಿ ಹೇಳುವ ಅಗತ್ಯವೇ ಬರಬಾರದಿತ್ತು; ಏಕೆಂದರೆ ಪ್ರತಿಯೊಬ್ಬ ಸಚಿವರು ಮತ್ತು ಜನಪ್ರತಿನಿಧಿಗಳು ಡೇಟಾ ಬಳಸುತ್ತಿರುವುದರಿಂದ, ಅವರೇ ಸ್ವಯಂಪ್ರೇರಿತರಾಗಿ ಕಾನೂನು ರೂಪಿಸಿ ಜನರಿಗೆ ನ್ಯಾಯ ಒದಗಿಸಬೇಕಿತ್ತು! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !