ಮುಸಲ್ಮಾನ ಯುವಕನಿಂದ ಹಿಂದೂ ಯುವತಿಯ ೩ ವರ್ಷಗಳ ಕಾಲ ಲೈಂಗಿಕ ಶೋಷಣೆ : ಮತಾಂತರಕ್ಕಾಗಿ ಒತ್ತಡ – Love Jihad Raebareli

  • ರಾಯಬರೇಲಿ (ಉತ್ತರ ಪ್ರದೇಶ) ಇಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ

  • ಆರೋಪಿಯ ಬಂಧನ

ರಾಯಬರೇಲಿ (ಉತ್ತರ ಪ್ರದೇಶ) – ರಾಯಬರೇಲಿ ಜಿಲ್ಲೆಯ ಬಚರಾವಾನ್‌ ನಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕುಂಡೌಲಿ, ಬಚರಾವಾನ್ ನಿವಾಸಿಯಾದ ಮಹಮ್ಮದ್ ರೆಹಾನ್ ಎಂಬ ಮುಸಲ್ಮಾನ ಯುವಕನು ಓರ್ವ ಹಿಂದೂ ಯುವತಿಗೆ ವಿವಿಧ ಆಮಿಷಗಳನ್ನು ತೋರಿಸಿ ಸತತ ೩ ವರ್ಷಗಳ ಕಾಲ ಲೈಂಗಿಕ ಶೋಷಣೆ ಮಾಡಿದ್ದಾನೆ, ಹಾಗೂ ಸಂತ್ರಸ್ತ ಹಿಂದೂ ಯುವತಿಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ಪ್ರಖರ ಹಿಂದುತ್ವನಿಷ್ಠ ಮುಖ್ಯಮಂತ್ರಿಗಳಿರುವ ಉತ್ತರ ಪ್ರದೇಶದಲ್ಲಿಯೇ ಮತಾಂಧ ಮುಸಲ್ಮಾನರು ‘ಲವ್ ಜಿಹಾದ್’ ಮಾಡುವ ಸಾಹಸ ಮಾಡುತ್ತಾರೆ ಎಂದಾದರೆ, ಇನ್ನುಳಿದ ರಾಜ್ಯಗಳಲ್ಲಿ ‘ಲವ್ ಜಿಹಾದ್’ ಎಷ್ಟು ವ್ಯಾಪಕವಾಗಿ ಹರಡಿರಬಹುದು ಎಂಬುದರ ವಿಚಾರ ಮಾಡದಿರುವುದೇ ಒಳಿತು! – ಸಂಪಾದಕರು)

೧. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸಂತ್ರಸ್ತ ಹಿಂದೂ ಯುವತಿಯು ಕಳೆದ ೩ ವರ್ಷಗಳಿಂದ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಇದೇ ಸಮಯದಲ್ಲಿ ಆಕೆಗೆ ಮಹಮ್ಮದ್ ರೆಹಾನ್ ಪರಿಚಯವಾಯಿತು. ಅವನು ಆಕೆಗೆ ಆಸರೆಯಾಗುವ ಭರವಸೆ ನೀಡಿದ್ದನು. ಈ ಪರಿಚಯದ ದುರುಪಯೋಗ ಪಡಿಸಿಕೊಂಡ ಆರೋಪಿಯು ಸತತ ೩ ವರ್ಷಗಳ ಕಾಲ ಸಂತ್ರಸ್ತೆಯ ಲೈಂಗಿಕ ಶೋಷಣೆ ಮಾಡಿದ್ದಾನೆ.

೨. ಸಂತ್ರಸ್ತೆಯು ವಿವಾಹದ ಬಗ್ಗೆ ಕೇಳಿದಾಗ ಪ್ರಕರಣವು ಹೊಸ ತಿರುವು ಪಡೆದುಕೊಂಡಿತು. ವಿವಾಹಕ್ಕಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕೆಂದು ಆರೋಪಿಯು ಷರತ್ತು ವಿಧಿಸಿದನು. ಸಂತ್ರಸ್ತೆಯು ಇದನ್ನು ಸ್ಪಷ್ಟವಾಗಿ ನಿರಾಕರಿಸಿದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿರೋಧಿಸಿದರೆ ಕೊಲೆ ಬೆದರಿಕೆ ಹಾಕಿದ್ದಾನೆ.

೩. ಸಂತ್ರಸ್ತೆಯ ದೂರಿನ ಮೇರೆಗೆ ಬಚರಾವಾನ್ ಪೊಲೀಸರು ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

೪. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದು, ಆರೋಪಿಯು ಈ ಹಿಂದೆ ಇಂತಹ ‘ಲವ್ ಜಿಹಾದ್’ ಘಟನೆಗಳಲ್ಲಿ ಭಾಗಿಯಾಗಿದ್ದನೇ ಎಂದು ಶೋಧ ನಡೆಸುತ್ತಿದ್ದಾರೆ.