ಸಾಧಕರೇ, ಕಾಲಾನುಸಾರ ಸಾಧನೆಯೆಂದು ರಾಮರಾಜ್ಯದ ಸ್ಥಾಪನೆಗಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ನಾಮಜಪ ಮಾಡಿ !
೧. ಸಾಧಕರು ೧೯೯೯ ನೇ ವರ್ಷದಿಂದ ಪ್ರಮುಖವಾಗಿ ಪ್ರತಿದಿನ ಮುಂದಿನ ವ್ಯಷ್ಟಿ ಸಾಧನೆಯನ್ನು ಮಾಡುತ್ತಿದ್ದಾರೆ
೧ ಅ. ಕುಲದೇವತೆಯ ಜಪ : ಇದನ್ನು ಸಾಧ್ಯವಾದಷ್ಟು ಹೆಚ್ಚು ಸಮಯ ಮಾಡುವುದು. ಈ ಜಪವು ಪ್ರಾರಬ್ಧದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೧ ಆ. ದತ್ತನ ಜಪ – ‘ಶ್ರೀ ಗುರುದೇವ ದತ್ತ |’ : ತೊಂದರೆಯ ತೀವ್ರತೆಗನುಸಾರ ಈ ಜಪವನ್ನು ೩ ರಿಂದ ೯ ಮಾಲೆಗಳಷ್ಟು ಮಾಡುವುದು. ಈ ಜಪವು ಪೂರ್ವಜರಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೨. ೨೦೧೦ ನೇ ವರ್ಷದಿಂದ ವ್ಯಷ್ಟಿ ಸಾಧನೆ ಮಾಡುವವರು ಸಮಷ್ಟಿಗಾಗಿ ಮಾಡಬೇಕಾದ ಜಪ
೨೦೧೦ ನೇ ವರ್ಷದಲ್ಲಿ, ‘ಕಾಲಾನುಸಾರ ಸಮಷ್ಟಿ ಸಾಧನೆ ಮಾಡುವ ಸಾಧಕರು “ಓಂ ನಮೋ ಭಗವತೇ ವಾಸುದೇವಾಯ |” ಈ ಜಪವನ್ನು ಸಾಧ್ಯವಾದಷ್ಟು ಹೆಚ್ಚು ಸಮಯ ಮಾಡಬೇಕು’ ಎಂದು ಹೇಳಲಾಗಿತ್ತು.
೩. ೨೦೨೧ ನೇ ವರ್ಷದಲ್ಲಿ ‘ನಿರ್ವಿಚಾರ’ ನಾಮಜಪ ಮಾಡಲು ತಿಳಿಸಲಾಗಿತ್ತು.
೨೦೨೬ ನೇ ವರ್ಷದ ಮಹಾಶಿವರಾತ್ರಿಯಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡುವವರು ಮಾಡಬೇಕಾದ ನಾಮಜಪ
‘ಈಗ ಮೂರನೇ ಮಹಾಯುದ್ಧದ ಕಾಲವು ಹತ್ತಿರ ಬರುತ್ತಿರುವುದರಿಂದ, ಅದರಲ್ಲಿ ನಮ್ಮ ರಕ್ಷಣೆಯಾಗಲು ಮತ್ತು ಮುಂದೆ ‘ರಾಮರಾಜ್ಯದ ಸ್ಥಾಪನೆ’ಯಾಗಲು, ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ಜಪವನ್ನು ಕಡಿಮೆಪಕ್ಷ ೧೦ ಮಾಲೆಗಳು ಮತ್ತು ಗರಿಷ್ಠ ಸಾಧ್ಯವಾದಷ್ಟು ಮಾಡಬೇಕು.
ಇದರೊಂದಿಗೆ ದಿನಕ್ಕೆ ಒಮ್ಮೆ ರಾಮರಕ್ಷಾಸ್ತೋತ್ರ ಮತ್ತು ಹನುಮಾನಚಾಲೀಸಾ (ಹಿಂದಿ ಬರುವವರು) ಅಥವಾ ಮಾರುತಿ ಸ್ತೋತ್ರ (ಮರಾಠಿ ಬರುವವರು) ಇವುಗಳನ್ನು ಅರ್ಥ ಮಾಡಿಕೊಂಡು ಭಾವಪೂರ್ಣವಾಗಿ ಪಠಿಸಬೇಕು.
ಈ ನಾಮಜಪವನ್ನು ಈಗಿನಿಂದ ಮೂರನೇ ಮಹಾಯುದ್ಧವು ಮುಗಿದು ರಾಮರಾಜ್ಯ ಸ್ಥಾಪನೆಯಾಗುವವರೆಗೆ ಮಾಡಬೇಕಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩೧.೧.೨೦೨೬)
೪. ಮಹಾಶಿವರಾತ್ರಿಯಿಂದ ಈ ನಾಮಜಪವನ್ನು ಪ್ರಾರಂಭಿಸಲು ಕಾರಣ
‘ಸ್ವತಃ ಶಿವನು ಯಾವಾಗಲೂ ರಾಮನಾಮವನ್ನು ಜಪಿಸುತ್ತಿರುತ್ತಾನೆ. ಆದ್ದರಿಂದ ಅವನ ಆಶೀರ್ವಾದದೊಂದಿಗೆ ಕಾಲಾನುಸಾರ ಸಾಧನೆಯೆಂದು ಈ ನಾಮಜಪವನ್ನು ಪ್ರಾರಂಭಿಸಲಿದ್ದೇವೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩೧.೧.೨೦೨೬)
ಕೆಲವು ಸೂಚನೆಗಳು
೧. ವ್ಯಷ್ಟಿ ಸಾಧನೆಯ ದೃಷ್ಟಿಕೋನದಿಂದ ನಾಮಜಪ :
೧ ಅ. ಹೊಸ ಸಾಧಕರಿಗಾಗಿ ನಾಮಜಪ : ಹೊಸ ಸಾಧಕರು ಕುಲದೇವತೆಯ ನಾಮಜಪವನ್ನು ಕಡಿಮಪಕ್ಷ ೧ ಗಂಟೆ ಮತ್ತು ದತ್ತನ ನಾಮಜಪವನ್ನು ಪೂರ್ವಜರ ತೊಂದರೆಗನುಸಾರ ೩, ೬ ಅಥವಾ ೯ ಮಾಲೆಗಳನ್ನು ಮಾಡಬೇಕು. ನಂತರ ಉಳಿದ ಸಮಯದಲ್ಲಿ ಶ್ರೀರಾಮನ ನಾಮಜಪ ಮಾಡಬೇಕು.
೧ ಆ. ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳ ನಿವಾರಣೆಗಾಗಿ ‘ಪ್ರಾಣಶಕ್ತಿವಹನ ಪದ್ಧತಿ’ಯಂತೆ ಹುಡುಕಿದ ನಾಮಜಪ ಅಥವಾ ಕಾಯಿಲೆಗಳಿಗಾಗಿ ಯಾವುದಾದರೂ ವಿಶಿಷ್ಟ ನಾಮಜಪವನ್ನು ಹೇಳಿದ್ದರೆ, ಅದನ್ನು ಪೂರ್ಣಗೊಳಿಸಿದ ನಂತರ ಉಳಿದ ಸಮಯದಲ್ಲಿ ಶ್ರೀರಾಮನ ಜಪ ಮಾಡಬೇಕು.
೧ ಇ. ಯಾರಿಗೆ ಕುಳಿತುಕೊಂಡು ನಾಮಜಪ ಮಾಡಲು ಸಾಧ್ಯವಿಲ್ಲ ಅಂತಹವರು ಆಚೆ-ಈಚೆ ಹೋಗುವಾಗ ಅಥವಾ ಶಾರೀರಿಕ ಸೇವೆ ಮಾಡುವಾಗ ಈ ನಾಮಜಪ ಮಾಡಬಹುದು. ಇಂತಹ ಸಮಯದಲ್ಲಿ ಆ ನಾಮಜಪ ಭಾವಪೂರ್ಣವಾಗಿ ಆಗುತ್ತಿದೆಯಲ್ಲ ಎಂಬುದರತ್ತ ಗಮನ ಕೊಡಬೇಕು; ಆದರೆ ಸಾಧ್ಯವಿರುವಾಗ ೧೦ ಮಾಲೆ ಜಪವನ್ನು ಕುಳಿತುಕೊಂಡು ಮಾಡಲು ಪ್ರಯತ್ನಿಸಬೇಕು.
೨. ಸಮಷ್ಟಿ ಸಾಧನೆಯ ದೃಷ್ಟಿಕೋನದಿಂದ ನಾಮಜಪ
ಯಾವ ಸಾಧಕರು ಶ್ರೀಕೃಷ್ಣ ಅಥವಾ ‘ನಿರ್ವಿಚಾರ’ ನಾಮ ಜಪ ಮಾಡುತ್ತಿದ್ದರೋ, ಅವರು ಅದನ್ನು ನಿಲ್ಲಿಸಿ ಈಗ ಕೇವಲ ಶ್ರೀರಾಮನ ಜಪವನ್ನು ಮಾಡಬೇಕು.
೩. ಈ ಹಿಂದೆ ಮಹರ್ಷಿಗಳು ಹೇಳಿದಂತೆ ‘ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ | ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |’ ಈ ಜಪವನ್ನು ೧೦೮ ಬಾರಿ ಮಾಡಬೇಕು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !