|

ಮಥುರಾ (ಉತ್ತರಪ್ರದೇಶ) – ಇಲ್ಲಿ ಚಂದ್ರಶೇಖರ್ ಅಲಿಯಾಸ್ ‘ಫರ್ಸಾ ವಾಲೆ ಬಾಬಾ’ ಎಂದೇ ಪ್ರಖ್ಯಾತರಾಗಿದ್ದ ಗೋರಕ್ಷಕರ ಮೇಲೆ ಟ್ರಕ್ ಹರಿಸಿದ್ದರಿಂದ ಅವರು ಮೃತಪಟ್ಟಿದ್ದಾರೆ. ಗೋರಕ್ಷಕ ಬಾಬಾ ಅವರು ಮುಂಜಾನೆ ೪ ಗಂಟೆಯ ಸುಮಾರಿಗೆ ಮಥುರಾ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಂಟೇನರ್ ಅನ್ನು ತಡೆದಿದ್ದರು. ಇದರಲ್ಲಿ ಗೋವುಗಳ ಕಳ್ಳಸಾಗಾಟ ನಡೆಯುತ್ತಿದೆ ಎಂಬ ಸಂಶಯವಿತ್ತು. ‘ಈ ಸಮಯದಲ್ಲಿ ಕಂಟೇನರ್ ನ ಹಿಂದಿನಿಂದ ಬಂದ ಟ್ರಕ್ ಬಾಬಾ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ; ಆದರೆ ಬಾಬಾ ಅವರ ಬೆಂಬಲಿಗರು ಇದನ್ನು ಗೋಕಳ್ಳಸಾಗಾಣಿಕೆದಾರರು ಮಾಡಿದ ಹತ್ಯೆ ಎಂದು ಆರೋಪಿಸಿ ಇಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದರು. ಬೆಂಬಲಿಗರು ರಸ್ತೆ ತಡೆ ನಡೆಸಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಇದರಿಂದ ಇಲ್ಲಿ ಅನೇಕ ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಹಿಂಸಾಚಾರದಲ್ಲಿ ಪೊಲೀಸರ ೫ – ೬ ವಾಹನಗಳನ್ನು ಜಖಂಗೊಳಿಸಲಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪೊಲೀಸರು ಲಠಿ ಪ್ರಹಾರ ನಡೆಸಿದರು ಮತ್ತು ಅಶ್ರುವಾಯು ಸಿಡಿಸಿದರು.
🚨 Mathura (Uttar Pradesh): Tragic Death of Go Rakshak ‘Farsa Wale Baba’ 🐄💔
Renowned cow protector Farsa Wale Baba was crushed by a truck while chasing cattle smugglers.
🔥 Following the incident, supporters staged protests – stones were pelted and police vehicles were… pic.twitter.com/E0jVxq8f8e
— Sanatan Prabhat (@SanatanPrabhat) March 21, 2026
ಏನಾಯಿತು ?
ಬರಸಾನಾದ ಅಜಾನೌಖ್ ಗ್ರಾಮದಲ್ಲಿ ಗೋಶಾಲೆ ನಡೆಸುತ್ತಿದ್ದ ಫರ್ಸಾ ವಾಲೆ ಬಾಬಾ ಅವರಿಗೆ ಕೋಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಒಂದರಲ್ಲಿ ಜಾನುವಾರುಗಳ ಅಕ್ರಮ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಬಾ ಅವರು ಇಬ್ಬರು ಯುವಕರೊಂದಿಗೆ ಗೋಶಾಲೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟರು. ಅವರು ಹೆದ್ದಾರಿಯ ಬಾಥನ್ ಗೇಟ್ ಪ್ರದೇಶಕ್ಕೆ ತಲುಪಿದಾಗ, ಹಸುಗಳನ್ನು ಸಾಗಿಸುತ್ತಿದ್ದ ಒಂದು ಟ್ರಕ್ ಕಂಡುಬಂದಿತು. ಬಾಬಾ ಅವರು ಟ್ರಕ್ ನಿಲ್ಲಿಸಲು ಪ್ರಯತ್ನಿಸಿದಾಗ, ಗೋಕಳ್ಳಸಾಗಾಣಿಕೆದಾರರು ವೇಗವನ್ನು ಹೆಚ್ಚಿಸಿದರು. ಸುಮಾರು ೭ ಕಿಲೋಮೀಟರ್ ಬೆನ್ನಟ್ಟಿದ ನಂತರ, ಬಾಬಾ ಅವರು ಕೊತ್ವಾನ್ ಚೌಕಿ ವ್ಯಾಪ್ತಿಯ ನವಪುರ ಗ್ರಾಮಕ್ಕೆ ತಲುಪಿದರು. ಅವರು ಟ್ರಕ್ ನ ಮುಂದೆ ಬಂದು ಅದನ್ನು ತಡೆದರು. ಅವರು ದ್ವಿಚಕ್ರ ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಟ್ರಕ್ ಚಾಲಕನು ಟ್ರಕ್ ಚಲಾಯಿಸಿ ಬಾಬಾ ಅವರ ಮೇಲೆ ಹರಿಸಿದ್ದಾನೆ ಎಂದು ಅವರ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಬಾಬಾ ಅವರ ಸಾವು ನಿಖರವಾಗಿ ಹೇಗೆ ಸಂಭವಿಸಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಸಂದರ್ಭದಲ್ಲಿ ಒಬ್ಬ ಗೋಕಳ್ಳಸಾಗಾಣಿಕೆದಾರನನ್ನು ಬಂಧಿಸಲಾಗಿದ್ದು, ಆತನ ಇಬ್ಬರು ಸಹಚರರು ಪರಾರಿಯಾಗಿದ್ದಾರೆ. ಫರ್ಸಾ ಬಾಬಾ ಅವರು ಗೋರಕ್ಷಕರೆಂದು ಪ್ರಸಿದ್ಧರಾಗಿದ್ದರು. ಅವರು ಯಾವಾಗಲೂ ಕೈಯಲ್ಲಿ ಕೊಡಲಿಯನ್ನು (ಫರ್ಸಾ) ಹಿಡಿದಿರುತ್ತಿದ್ದರು, ಆದ್ದರಿಂದ ಅವರಿಗೆ ‘ಫರ್ಸಾ ವಾಲೆ ಬಾಬಾ’ ಎಂಬ ಅನ್ವರ್ಥ ನಾಮ ಬಂದಿತ್ತು.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ