ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ೪೦
ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಪರಿಹಾರವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಸ್ಫೂರ್ತಿ ಪಡೆಯಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ ನಿಯಮಗಳು ಮತ್ತು ಕಾಯಿಲೆಗೆ ಅನುಗುಣವಾಗಿ ಯೋಗ್ಯ ವ್ಯಾಯಾಮ’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ವ್ಯಾಯಾಮದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಸ್ಫೂರ್ತಿದಾಯಕವಾಗಿರಲಿದೆ ! ಜೀರ್ಣಕ್ರಿಯೆಯನ್ನು ಸುಧಾರಿಸುವ ದೃಷ್ಟಿಯಿಂದ ವ್ಯಾಯಾಮಕ್ಕೆ ಸಂಬಂಧಿಸಿದ ಅಂಶಗಳನ್ನು ನೀಡಲಾಗಿದೆ. ( ಭಾಗ ೧)

ಯೋಗ್ಯ ಪದ್ಧತಿಯಲ್ಲಿ ವ್ಯಾಯಾಮ ಮಾಡಿದರೆ ನರಗಳ ಕಾಯಿಲೆಗಳಿಂದ, ಅಂದರೆ ಕೈ-ಕಾಲುಗಳಲ್ಲಿ ಇರುವೆ ಬರುವುದು, ಉರಿ ಆಗುವುದು ಮುಂತಾದವುಗಳಿಂದ ಮುಕ್ತಿ ಪಡೆಯಲು ಖಂಡಿತವಾಗಿ ಸಹಾಯವಾಗುವುದು. ಈ ಲೇಖನದಲ್ಲಿ ನಾವು ‘ವ್ಯಾಯಾಮ ಮಾಡಿದ ನಂತರ ನರಗಳಿಗೆ ಯಾವ ಲಾಭಗಳಾಗುತ್ತವೆ ?’ ಎಂಬುದನ್ನು ನೋಡೋಣ.
೧. ನರಗಳಿಂದ ನಮ್ಮ ಶರೀರದ ಚಲನವಲನ, ಜೀರ್ಣಕ್ರಿಯೆ, ಶ್ವಾಸೋಚ್ಛ್ವಾಸ ಮತ್ತು ಹೃದಯ ಬಡಿತದ ಕಾರ್ಯಗಳು ಸುಗಮವಾಗಿ ನಡೆಯುವುದು
ನರಗಳು (Nerves) ಎಂದರೆ ನಮ್ಮ ಶರೀರವೆಂಬ ಯಂತ್ರದ ‘ವೈರಿಂಗ್’ ಮತ್ತು ‘ಪ್ರೋಗ್ರಾಮಿಂಗ್’ (ಗಣಕಯಂತ್ರದಲ್ಲಿ ವಿವಿಧ ಕಾರ್ಯಗಳನ್ನು ಮಾಡಲು ಅಗತ್ಯವಿರುವ ತಂತ್ರಾಂಶ) ಇದ್ದಂತೆ ! ಹೊರಗಿನಿಂದ ಸುದೃಢವಾಗಿ ಕಾಣುವ ಶರೀರವು, ನರಗಳ ಕಾಯಿಲೆಯಿಂದಾಗಿ ಸ್ಥಗಿತಗೊಂಡ ಗಣಕಯಂತ್ರದಂತೆ ನಿಷ್ಕ್ರಿಯವಾಗಬಹುದು. ವಾಸ್ತವದಲ್ಲಿ ನಮ್ಮ ಶರೀರದ ಚಲನ ವಲನಗಳು, ಜೀರ್ಣಕ್ರಿಯೆ ಮತ್ತು ಶ್ವಾಸೋಚ್ಛ್ವಾಸ ಮಾತ್ರವಲ್ಲದೆ, ಹೃದಯದ ಬಡಿತವೂ ನರಗಳಿಂದಲೇ ಸುಗಮವಾಗಿ ಕಾರ್ಯ ನಿರ್ವಹಿಸುತ್ತವೆ.
೨. ಸಂವೇದನೆಗಳಿಗೆ ಪ್ರತಿಕ್ರಿಯಿಸುವ ಪ್ರಕ್ರಿಯೆಯು ನರಗಳ ಮೂಲಕವೇ ಪೂರ್ಣಗೊಳ್ಳುವುದು

ನಮಗೆ ಪಂಚಜ್ಞಾನೇಂದ್ರಿಯಗಳ ಮೂಲಕ ಬಾಹ್ಯ ಪ್ರಪಂಚದ ಸಂವೇದನೆಗಳು ಅರಿವಾಗುತ್ತವೆ. ಮೆದುಳಿನ ಮೂಲಕ ಅವುಗಳ ಅವಲೋಕನ ನಡೆಸಿ, ಪಂಚಕರ್ಮೇಂದ್ರಿಯಗಳ ಮೂಲಕ ಅಗತ್ಯವಿರುವ ಕ್ರಿಯೆಗಳನ್ನು ತಕ್ಷಣವೇ ಮಾಡಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ನರಗಳ ಮೂಲಕವೇ ಪೂರ್ಣಗೊಳ್ಳುತ್ತದೆ. ಉದಾಹರಣೆಗೆ, ನಮ್ಮ ಕೈಗೆ ಬಿಸಿ ತಗುಲಿದ ತಕ್ಷಣ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಕ್ರಿಯೆಯು ನರಗಳ ಮೂಲಕವೇ ನಡೆಯುತ್ತದೆ.
೩. ಶರೀರದ ಆಂತರಿಕ ಕ್ರಿಯೆಗಳು ನರಗಳಿಂದಲೇ ಆಗುತ್ತಿದ್ದು, ಅದರಿಂದ ಶರೀರಕ್ಕೆ ಜೀವಂತಿಕೆ ಬರುವುದು
ಕೇವಲ ಬಾಹ್ಯ ಪ್ರಪಂಚ ಮಾತ್ರವಲ್ಲ, ಶರೀರದ ಆಂತರಿಕ ಕ್ರಿಯೆಗಳಾದ ಶ್ವಾಸೋಚ್ಛ್ವಾಸ, ಹೃದಯದ ಗತಿ, ರಕ್ತದೊತ್ತಡದ ನಿಯಂತ್ರಣ ಹಾಗೂ ಜೀರ್ಣರಸಗಳ ಸ್ರವಿಸುವಿಕೆ ಮುಂತಾದ ಎಲ್ಲಾ ಕ್ರಿಯೆಗಳಿಗೆ ನರಗಳ ಕಾರ್ಯವು ಅನಿವಾರ್ಯವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಶರೀರದಲ್ಲಿ ಒಳಗಿನಿಂದ ಹೊರಗಿನ ವರೆಗೆ ನಡೆಯುವ ಪ್ರತಿಯೊಂದು ಕ್ರಿಯೆಯೂ ನರಗಳಿಂದಲೇ ನಡೆಯುತ್ತವೆ ಮತ್ತು ಇದರಿಂದಲೇ ಶರೀರಕ್ಕೆ ಜೀವಂತಿಕೆ ದೊರೆಯುತ್ತದೆ.
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ, ಫೋಂಡಾ, ಗೋವಾ. (೨೫.೧೨.೨೦೨೪)
ಆರೋಗ್ಯಕರ ಜೀವನಕ್ಕಾಗಿ ‘ವ್ಯಾಯಾಮ’ ಎಂಬ ಅಂಕಣದಲ್ಲಿ ಪ್ರಕಟವಾಗುವ ಎಲ್ಲ ಲೇಖನಗಳನ್ನು ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ –
https://sanatanprabhat.org/kannada/category/healthy-lifestyle
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !