ಒಂದು ಅರ್ಜಿ ೪೨ ವರ್ಷಗಳಿಂದ ಬಾಕಿ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ಪ್ರಮುಖವಾಗಿ ಸಾಂವಿಧಾನಿಕ ವ್ಯಾಖ್ಯಾನ ಮತ್ತು ತುರ್ತು ಕ್ರಿಮಿನಲ್ ಮೇಲ್ಮನವಿ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತದೆ. ಅದರಲ್ಲಿಯೂ ಜನರಿಂದ ವಿವಿಧ ಸಮಸ್ಯೆಗಳಿಗಾಗಿ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾದ ೩,೫೦೦ ಕ್ಕಿಂತ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಾಕಿ ಇವೆ. ಅವುಗಳಲ್ಲಿ ೬೯೮ ಅರ್ಜಿಗಳು ೧೦ ವರ್ಷಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಇವೆ. ಅತ್ಯಂತ ಹಳೆಯ ಅರ್ಜಿಯು ೪೨ ವರ್ಷಗಳಿಂದ ಬಾಕಿ ಉಳಿದಿದ್ದು, ಇನ್ನೂ ಇತ್ಯರ್ಥವಾಗಿಲ್ಲ. ಕಾನೂನು ಸಚಿವಾಲಯವು ನೀಡಿದ ಮಾಹಿತಿಯ ಪ್ರಕಾರ, ಈ ಅರ್ಜಿಗಳು ಪರಿಸರ, ಭೂ ಕಾನೂನುಗಳು ಮತ್ತು ಕೃಷಿ ವಿಷಯಗಳಿಗೆ ಸಂಬಂಧಿಸಿವೆ.
Over 3,500 Public Interest Litigations (PILs) are currently pending in the Supreme Court. ⚖️
One case has been waiting for justice for 42 years! ⌛
This delay is a serious concern for the common citizen. Both the Government and Judiciary must act NOW to ensure timely justice.… pic.twitter.com/OGncIvSdM3
— Sanatan Prabhat (@SanatanPrabhat) March 18, 2026
೧. ಸರ್ವೋಚ್ಚ ನ್ಯಾಯಾಲಯವು ೨೦೨೫ ರ ಸಾಲಿನಲ್ಲಿ ಗರಿಷ್ಠ ೫೭೦ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸ್ವೀಕರಿಸಿದೆ. ಇದರಿಂದಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿನ ೮೦,೦೦೦ಕ್ಕೂ ಹೆಚ್ಚು ಪ್ರಕರಣಗಳ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಕಳೆದ ೫ ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ೧,೮೭೨ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಲೇವಾರಿ ಮಾಡಿದೆ; ಆದರೆ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡಲು ಇದು ಸಾಕಾಗುವುದಿಲ್ಲ. ಕಾನೂನು ಸಚಿವ ಅರ್ಜುನ ರಾಮ್ ಮೇಘವಾಲ ಅವರು ಕಳೆದ ವಾರ ಲೋಕಸಭೆಯಲ್ಲಿ ಮಾಹಿತಿ ನೀಡುತ್ತಾ, ಮಾರ್ಚ್ ೧೦ ರವರೆಗೆ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಾಕಿ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಒಟ್ಟು ಸಂಖ್ಯೆ ೩,೫೨೫ ಎಂದು ತಿಳಿಸಿದರು. ಈ ಅರ್ಜಿಗಳನ್ನು ವಿಲೇವಾರಿ ಮಾಡಲು ತಗಲುವ ಸರಾಸರಿ ಅವಧಿಯ ಮಾಹಿತಿ ಲಭ್ಯವಿಲ್ಲ. ೨೦೧೪ರ ನಂತರ ಸಲ್ಲಿಕೆಯಾಗಿ ಬಾಕಿ ಇರುವ ಅರ್ಜಿಗಳಲ್ಲಿ ಗರಿಷ್ಠ ಸಂಖ್ಯೆಯು ೨೦೨೫ ರ ಸಾಲಿನಲ್ಲಿ ಕಂಡುಬಂದಿದೆ.
೨. ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಅತ್ಯಂತ ಹಳೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ೧೯೮೪ ರಲ್ಲಿ ಸಲ್ಲಿಕೆಯಾಗಿತ್ತು. ೧೯೮೫ ರಿಂದ ಇನ್ನೂ ೨ ಅರ್ಜಿಗಳು ಬಾಕಿ ಇವೆ. ಈ ಮೂರೂ ಅರ್ಜಿಗಳು ‘ಎಂ.ಸಿ. ಮೆಹ್ತಾ ವಿರುದ್ಧ ಭಾರತ ಸರಕಾರ’ ಪ್ರಕರಣಕ್ಕೆ ಸಂಬಂಧಿಸಿವೆ. ಇವುಗಳಲ್ಲಿ ಎರಡು ಪರಿಸರ ಕಾನೂನು ಮತ್ತು ಒಂದು ವಸತಿ ಹಾಗೂ ನಗರಪಾಲಿಕೆಗಳ ನಿರ್ಮಾಣ ಕಾನೂನಿಗೆ ಸಂಬಂಧಪಟ್ಟಿವೆ. ನ್ಯಾಯಾಲಯದ ನಿಂದನೆಗೆ ಸಂಬಂಧಿಸಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ೧೯೯೬ ರಿಂದ ಬಾಕಿ ಇವೆ. ಈ ಅರ್ಜಿಗಳನ್ನು ಸಲ್ಲಿಸಿದ ಅನೇಕ ವ್ಯಕ್ತಿಗಳು ಮರಣ ಹೊಂದಿದ್ದರೂ, ಅವರ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!