ಬಂಗಾಳದಲ್ಲಿ ದೇವಾಲಯದ ಅರ್ಚಕರು ಮತ್ತು ಮಸೀದಿಯ ಮುಅಜ್ಜಿನರ ಗೌರವಧನದಲ್ಲಿ ಹೆಚ್ಚಳ!

  • ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸರಕಾರದ ನಿರ್ಧಾರ

  • ೫೦೦ ರೂಪಾಯಿಯಿಂದ ೨,೦೦೦ ರೂಪಾಯಿಗೆ ಏರಿಕೆ !

(ಮುಅಜ್ಜಿನ ಎಂದರೆ ಮಸೀದಿಯಲ್ಲಿ ನಮಾಜಿಗಾಗಿ ಜನರನ್ನು ಧ್ವನಿವರ್ಧಕದ (ಅಜಾನ್) ಮೂಲಕ ಕೂಗಿ ಕರೆಯುವವರು)

ಕೋಲಕಾತಾ (ಬಂಗಾಳ) – ಮುಂದಿನ ತಿಂಗಳು ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಘೋಷಣೆಯಾಗಿದೆ. ಈ ಘೋಷಣೆಯ ಒಂದೂಕಾಲು ಗಂಟೆಯ ಮೊದಲಷ್ಟೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅರ್ಚಕರು ಮತ್ತು ಮುಅಜ್ಜಿನರ ಗೌರವಧನದಲ್ಲಿ ೫೦೦ ರೂಪಾಯಿಗಳ ಹೆಚ್ಚಳ ಮಾಡಿ, ಅದನ್ನು ಈಗ ಪ್ರತಿ ತಿಂಗಳು ೨,೦೦೦ ರೂಪಾಯಿಗಳಿಗೆ ಏರಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.

ಬ್ಯಾನರ್ಜಿ ಅವರು ‘ಎಕ್ಸ್’ ನಲ್ಲಿ,

“ಅರ್ಚಕರು ಮತ್ತು ಮುಅಜ್ಜಿನ ಸಮುದಾಯವು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಜೀವನವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಕಾರವು ಗೌರವಧನ ಯೋಜನೆಯಡಿ ಅವರ ಎಲ್ಲಾ ಹೊಸ ಅರ್ಜಿಗಳಿಗೂ ಅಂಗೀಕಾರ ನೀಡಿದೆ. ರಾಜ್ಯದಲ್ಲಿ ಪ್ರತಿಯೊಂದು ಸಮುದಾಯ ಮತ್ತು ಸಂಪ್ರದಾಯಗಳಿಗೆ ಮಹತ್ವ ನೀಡಲಾಗುತ್ತದೆ ಮತ್ತು ಅವುಗಳನ್ನು ಬಲಪಡಿಸಲಾಗುತ್ತದೆ ಎಂಬ ವಾತಾವರಣವನ್ನು ರಾಜ್ಯದಲ್ಲಿ ನಿರ್ಮಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ. (ಕಳೆದ ೧೫ ವರ್ಷಗಳಲ್ಲಿ ಹಿಂದೂ ಸಮುದಾಯವು ಬಲಗೊಳ್ಳುವ ಬದಲು ದುರ್ಬಲಗೊಂಡಿದೆ. ಅದರ ಬಗ್ಗೆ ಬ್ಯಾನರ್ಜಿ ಏನು ಮಾಡಲಿದ್ದಾರೆ? – ಸಂಪಾದಕರು)

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್‌ ಮತಗಳಿಗಾಗಿ ಮಾಡಿದ ದೈನ್ಯತೆ (ಹೀನಾಯ ಓಲೈಕೆ)! ಇದೇ ಮಮತಾ ಬ್ಯಾನರ್ಜಿ ಅವರು ೨೦೧೨ ರಲ್ಲಿ ಕೇವಲ ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು) ಮತ್ತು ಮುಅಜ್ಜಿನರಿಗಷ್ಟೇ ಗೌರವಧನ ಘೋಷಿಸಿದ್ದರು. ಈಗ ಹಿಂದೂಗಳು ಜಾಗೃತರಾಗುತ್ತಿರುವುದರಿಂದಲೇ ಅರ್ಚಕರಿಗೆ ಗೌರವಧನ ನೀಡಿ ಅದರಲ್ಲಿ ಹೆಚ್ಚಳ ಮಾಡಲಾಗಿದೆ, ಇದನ್ನು ಗಮನದಲ್ಲಿಡಿ!