ಕ್ರೈಸ್ತ ಬಹುಸಂಖ್ಯಾತ ರಾಜ್ಯದ ಮೇಲೆ ‘ಹೇರಿದ ನಿರ್ಧಾರ’ ಎಂದು ಆರೋಪ

ಕೋಹಿಮಾ (ನಾಗಾಲ್ಯಾಂಡ) – ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಧಾನಸಭೆಯಲ್ಲಿ ‘ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿದ ನಿರ್ಧಾರಕ್ಕೆ ‘ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್’ (ಎನ್.ಪಿ.ಎಫ್.) ಪಕ್ಷವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನಿರ್ಧಾರವು ಕ್ರೈಸ್ತ ಬಹುಸಂಖ್ಯಾತ ನಾಗಾಲ್ಯಾಂಡ್ ಪಾಲಿಗೆ ‘ಪರಕೀಯ’ಮತ್ತು ‘ಪ್ರತಿಕೂಲ’ವಾಗಿದೆ ಎಂದು ಪಕ್ಷವು ಹೇಳಿದೆ. ಅಲ್ಲದೆ, ‘ಇದು ಹೇರಿದ ನಿರ್ಧಾರವಾಗಿದೆ’ಎಂದು ಹೇಳುತ್ತಾ, ಇದು ರಾಜ್ಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದೆ. ಎನ್.ಪಿ.ಎಫ್. ನಾಗಾಲ್ಯಾಂಡ್ನಲ್ಲಿ ಭಾಜಪ ಮಿತ್ರಪಕ್ಷವಾಗಿದೆ.
Nagaland People’s Front Opposes Mandatory Singing of 'Vande Mataram'
Allegations of an "Imposed Decision" on a Christian-Majority State
Swami Vivekananda once said, "If a Hindu converts, it is not just a change of religion, but a change of nationality!"
This is exactly what… pic.twitter.com/kkytEHwBsn
— Sanatan Prabhat (@SanatanPrabhat) March 10, 2026
ಪಕ್ಷದ ಪ್ರಕಾರ, ಈ ರಾಷ್ಟ್ರಗೀತೆಯಲ್ಲಿ ಹಿಂದೂ ದೇವತೆಗಳ ಉಲ್ಲೇಖವಿದೆ. ನಾಗರಿಕರನ್ನು ಅವರ ಧಾರ್ಮಿಕ ನಂಬಿಕೆಗೆ ವಿರುದ್ಧವಾದ ಕೃತ್ಯಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವುದು ಭಾರತದ ಜಾತ್ಯತೀತ ಚೌಕಟ್ಟಿನ ಆಶಯಕ್ಕೆ ವಿರುದ್ಧವಾಗಿದೆ. (ಇಂತಹವರು ತಮ್ಮ ಧಾರ್ಮಿಕ ಚೌಕಟ್ಟಿಗೆ ಹೊಂದುವ ದೇಶಕ್ಕೆ ಹೊರಟುಹೋಗಿ ಎಂದು ಹೇಳುವ ಸಮಯ ಬಂದಿದೆ! – ಸಂಪಾದಕರು) ಕೇಂದ್ರ ಸರಕಾರವು ಇಂತಹ ಯಾವುದೇ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಪಕ್ಷವು ಒತ್ತಾಯಿಸಿದೆ.
ಸಂಪಾದಕೀಯ ನಿಲುವುಸ್ವಾಮಿ ವಿವೇಕಾನಂದರು ಹೇಳಿದ್ದರು, ‘ಹಿಂದೂಗಳ ಮತಾಂತರಗೊಂಡರೆ, ಅದು ರಾಷ್ಟ್ರಾಂತರವಾಗುತ್ತದೆ!’ ಎಂಬುದನ್ನು ಈ ದೇಶವು ನಿರಂತರವಾಗಿ ನೋಡುತ್ತಿದೆ. ಈಗ ಇಂತಹ ಮತಾಂತರಿಗಳನ್ನು ಸರಿಪಡಿಸಲು ಕಠೋರವಾಗುವ ಅವಶ್ಯಕತೆಯಿದೆ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ