ಶನಿದೇವರ ಪೂಜೆಯ ವೇಳೆ ದೇವಸ್ಥಾನದಲ್ಲಿ ಸ್ಫೋಟ

ಢಾಕಾ – ಬಾಂಗ್ಲಾದೇಶದ ಬೋಗುರಾ ಮತ್ತು ಕಾಕ್ಸ್ ಬಜಾರ್ ನಲ್ಲಿ ಮಾರ್ಚ್ 6 ಮತ್ತು 7 ರಂದು ನಡೆದ ಘಟನೆಗಳಲ್ಲಿ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಲಾಗಿದೆ ಎಂದು ‘ಬಾಂಗ್ಲಾದೇಶ ಜಾತೀಯ ಹಿಂದೂ ಮಹಾಸಂಘ’ ಸಂಘಟನೆ ಮಾಹಿತಿ ನೀಡಿದೆ. ‘ಬಾಂಗ್ಲಾದೇಶ ಜಾತೀಯ ಹಿಂದೂ ಮಹಾಸಂಘ’ದ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಕುಮಾರ ರಾಯ್ ಅವರು ಈ ಬಗ್ಗೆ ಮಾತನಾಡಿ, ಮಾರ್ಚ್ 6 ರಂದು ಬೋಗುರಾ ಜಿಲ್ಲೆಯ ಸಾರಿಯಾಕಾಂದಿಯಲ್ಲಿ ಭೂವಿವಾದದ ಹಿನ್ನೆಲೆಯಲ್ಲಿ ಚಾಯೋನ ರಾಜಭರ್ (40 ವರ್ಷ) ಎಂಬ ಹಿಂದೂ ವ್ಯಕ್ತಿಯನ್ನು ಕೆಲವು ಮತಾಂಧ ಗೂಂಡಾಗಳು ಚಾಕುವಿನಿಂದ ಇರಿದು ಕೊಲೆ ಮಾಡಿದರು. ಮೃತ ಚಾಯೋನ್ ರಾಜಭರ್ ಅವರು ‘ದ ನ್ಯೂ ಕಾಂಟೆಸ್ಟ್’ ಎಂಬ ಸ್ಥಳೀಯ ತರಬೇತಿ ಕೇಂದ್ರದ ನಿರ್ದೇಶಕರಾಗಿದ್ದರು. ಹಾಗೆಯೇ ಮಾರ್ಚ್ 7 ರಂದು ಕಾಕ್ಸ್ ಬಜಾರ್ ನಗರದಲ್ಲಿ ಗಣೇಶ ಪಾಲ್ (29 ವರ್ಷ) ಎಂಬ ಹಿಂದೂ ಯುವಕನನ್ನು ಸುಲಿಗೆ ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಜಿಹಾದಿಗಳು ಇರಿದು ಕೊಲೆ ಮಾಡಿದರು. ಮತ್ತೊಂದು ಘಟನೆಯಲ್ಲಿ, ಇಲ್ಲಿನ ಶ್ರೀ ಶನಿದೇವರ ದೇವಸ್ಥಾನದಲ್ಲಿ ಪೂಜೆಯ ವೇಳೆ ಸ್ಫೋಟ ನಡೆಸಲಾಗಿದೆ. (ಬಾಂಗ್ಲಾದೇಶದಲ್ಲಿ ಇತ್ತೀಚೆಗಷ್ಟೇ ತಾರಿಕ್ ರೆಹಮಾನ್ ನೇತೃತ್ವದಲ್ಲಿ ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ಯ ಸರಕಾರ ಅಸ್ತಿತ್ವಕ್ಕೆ ಬಂದಿದೆ; ಆದರೂ ಹಿಂದೂಗಳ ಹತ್ಯೆಗಳು ಮುಂದುವರಿಯುತ್ತಲೇ ಇವೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಗಳು ರಾಜಕೀಯ ಸ್ವರೂಪದ್ದು ಎಂದು ಹೇಳಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಆಡಳಿತಗಾರರ ಬಣ್ಣ ಬಯಲಾಗಿದೆ! ಇವೆಲ್ಲವೂ ಹಿಂದೂಗಳ ವಂಶಹತ್ಯೆಯ ಒಂದು ಭಾಗವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! – ಸಂಪಾದಕರು)
ಈ ಹಿಂದೆ ಚಟ್ಟೋಗ್ರಾಮ್ ನಗರದ ಅಲಂಕಾರ ಪ್ರದೇಶದಲ್ಲಿ ಕಾರ್ಮಿಕರಿಂದ ಸುಲಿಗೆ ಮಾಡುವುದನ್ನು ವಿರೋಧಿಸಿದ್ದಕ್ಕಾಗಿ ಆಕಾಶ ದಾಸ್ ಎಂಬ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿತ್ತು. ಅದೇ ಜಿಲ್ಲೆಯ ಚಂದನೈಶ್ ಉಪಜಿಲ್ಲೆಯ ಬದೂರಪಾರಾ ಪ್ರದೇಶದಲ್ಲಿ ಜಾನುವಾರುಗಳ ಕಳ್ಳತನ ತಡೆಯಲು ಪ್ರಯತ್ನಿಸಿದ ಚಂದನ್ ಡೇ ಎಂಬ ಹಿಂದೂ ವ್ಯಕ್ತಿಯನ್ನು ಮತಾಂಧ ಮುಸ್ಲಿಮರು ಗುಂಡಿಕ್ಕಿ ಕೊಂದಿದ್ದರು ಎಂದು ಈ ಸಂಘಟನೆ ಮಾಹಿತಿ ನೀಡಿದೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman