ಬಾಗಲಕೋಟೆ: ಹಿಂದೂ ಮಹಿಳೆಯನ್ನು ವಿವಾಹವಾಗಿ 4 ತೊಲ ಚಿನ್ನದೊಂದಿಗೆ ಮುಸ್ಲಿಂ ವ್ಯಕ್ತಿ ಪರಾರಿ! – Karnataka Love Jihad

ಬಾಗಲಕೋಟೆ – ಹಿಂದೂ ಮಹಿಳೆಯನ್ನು ವಿವಾಹವಾದ ನಂತರ ಮುಸ್ಲಿಂ ವ್ಯಕ್ತಿಯೊಬ್ಬ ಆಕೆಯ 4 ತೊಲ ಚಿನ್ನದೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಮಹಿಳೆ ನೀಡಿದ ದೂರಿನ ಮೇರೆಗೆ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಅವರು ಸದರಿ ಮುಸ್ಲಿಂ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ನಿವಾಸಿಯಾದ ಸಂತ್ರಸ್ತ ಹಿಂದೂ ಮಹಿಳೆ ಕೆಲಸದ ನಿಮಿತ್ತ ಮುಧೋಳಕ್ಕೆ ಬಂದಿದ್ದಾಗ ಸವಿಫ್ ಪತೇ ಎಂಬ ಮುಸ್ಲಿಂ ವ್ಯಕ್ತಿಯ ಪರಿಚಯವಾಯಿತು. ಸಂತ್ರಸ್ತ ಹಿಂದೂ ಮಹಿಳೆ ವಿವಾಹಿತರಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸವಿಫ್‌ಗೆ ಈಗಾಗಲೇ ಇಬ್ಬರು ಪತ್ನಿಯರಿದ್ದರೂ ಸಹ, ಆತ ಸಂತ್ರಸ್ತ ಹಿಂದೂ ಮಹಿಳೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಬೆದರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮಾಡಿ ಆಕೆಯೊಂದಿಗೆ ವಿವಾಹವಾಗಿದ್ದಾನೆ. ವಿವಾಹವಾದ ಕೆಲವೇ ದಿನಗಳಲ್ಲಿ ಆತ ಮಹಿಳೆಯ ಬಳಿಯಿದ್ದ 4 ಲಕ್ಷ ರೂಪಾಯಿ ನಗದು ಮತ್ತು 4 ತೊಲ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ತನ್ನ ಮೊದಲ ಪತ್ನಿಯ ಬಳಿಗೆ ಓಡಿಹೋಗಿದ್ದಾನೆ. ಈ ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿರುವುದರಿಂದ ಸಂತ್ರಸ್ತ ಹಿಂದೂಗಳಿಗೆ ನ್ಯಾಯ ಸಿಗುತ್ತದೆ ಮತ್ತು ಲವ್ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಶಿಸುವುದು ಹೇಗೆ? ಹಿಂದೂಗಳ ಮೇಲಿನ ಅನ್ಯಾಯವನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು!