ಮನುಷ್ಯನಲ್ಲಿ ಸ್ವಭಾವದೋಷಗಳು ಮತ್ತು ಅಹಂಕಾರ ನಿರ್ಮಾಣವಾಗಲು ಕಾರಣಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಈಶ್ವರನು ಮನುಷ್ಯನಲ್ಲಿ ಸ್ವಭಾವದೋಷ ಮತ್ತು ಅಹಂ ಇವೆರಡನ್ನೂ ಏಕೆ ನಿರ್ಮಾಣ ಮಾಡಿದ್ದಾನೆ ?’

ಶ್ರೀ. ರಾಮ ಹೊನಪ :

೧. ಆದಿಮಾಯೆಯ ಮೂಲಕ ಸೃಷ್ಟಿಯ ನಿರ್ಮಾಣವಾಗುವುದು

ಪರಮೇಶ್ವರನು ಮೂಲತತ್ತ್ವ ಆಗಿದ್ದಾನೆ ಮತ್ತು ‘ಆದಿಮಾಯೆಯು’ ಅವನ ಒಂದು ಅಂಗವಾಗಿದೆ. ಆದಿಮಾಯೆಯಲ್ಲಿ ತ್ರಿಗುಣಗಳಿವೆ. ಈ ತ್ರಿಗುಣಗಳ ಮೂಲಕ ಪಂಚತತ್ತ್ವಗಳು ನಿರ್ಮಾಣವಾಗಿವೆ. ತ್ರಿಗುಣಗಳು ಮತ್ತು ಪಂಚತತ್ತ್ವಗಳ ಮಿಲನದಿಂದ ಪೃಥ್ವಿಯ (ಭೂಮಿಯ) ನಿರ್ಮಾಣವಾಗಿದೆ.

೨. ತ್ರಿಗುಣಗಳ ಗುಣಧರ್ಮಗಳು

ಸತ್ತ್ವಗುಣದಿಂದ ಪೃಥ್ವಿಯ ನಿರ್ಮಾಣವಾಗುತ್ತದೆ, ರಜೋಗುಣದಿಂದ ಅದು ಕಾರ್ಯನಿರತವಾಗಿರುತ್ತದೆ ಮತ್ತು ತಮೋಗುಣದಿಂದ ಅದರ ಲಯ (ನಾಶ) ಆಗುತ್ತದೆ. ಆದಿಮಾಯೆಯ ತ್ರಿಗುಣಗಳ ಗುಣಧರ್ಮಗಳಿಗನುಸಾರವಾಗಿ ಬ್ರಹ್ಮಾಂಡದಲ್ಲಿ ‘ಅಸಂಖ್ಯಾತ ಪೃಥ್ವಿಗಳ ಉತ್ಪತ್ತಿ, ಸ್ಥಿತಿ ಮತ್ತು ಲಯ’ ಎಂಬ ಕಾರ್ಯವು ಅವಿರತವಾಗಿ ನಡೆಯುತ್ತಿರುತ್ತದೆ. ‘ಸತ್ತ್ವ, ರಜ ಮತ್ತು ತಮ ಇವುಗಳ ಸ್ಥಿತಿಯು ಸದಾಕಾಲ ಒಂದೇ ಸಮನಾಗಿ ಇರುವುದಿಲ್ಲ ಮತ್ತು ಅವು ಬದಲಾಗಿರುತ್ತಿರುತ್ತವೆ’, ಇದು ತ್ರಿಗುಣಗಳ ಗುಣಧರ್ಮವಾಗಿದೆ.

ಶ್ರೀ. ರಾಮ ಹೊನಪ

೩. ಹಂತ ಹಂತವಾಗಿ ವ್ಯಕ್ತಿಯ ಸ್ಥಿತಿಯು ಬದಲಾಗುವುದು

ಸತ್ಯಯುಗದಲ್ಲಿ ಪುರುಷನು ‘ದೇವಸ್ವರೂಪ’ ಮತ್ತು ಸ್ತ್ರೀಯು ‘ದೇವಿಸ್ವರೂಪ’ ಳಾಗಿದ್ದಳು. ಸತ್ಯಯುಗದ ಮಧ್ಯದ ವರೆಗೆ ಸ್ತ್ರೀ ಮತ್ತು ಪುರುಷರಲ್ಲಿ ಸತ್ತ್ವಗುಣವು ಸ್ಥಿರವಾಗಿತ್ತು ಮತ್ತು ಅವರು ಭಗವಂತನ ಪ್ರೇಮವನ್ನು ಅನುಭವಿಸುತ್ತಿದ್ದರು. ತದನಂತರ ಕಾಲಕ್ರಮೇಣ ಅವರಲ್ಲಿ ರಜೋಗುಣವು ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇದರಿಂದಾಗಿ ಸ್ತ್ರೀ ಮತ್ತು ಪುರುಷರ ಗಮನವು ಭಗವಂತನೊಂದಿಗಿನ ಅನುಸಂಧಾನದಿಂದ ವಿಚಲಿತವಾಯಿತು. ಆಗ ಅವರಿಗೆ ಪ್ರೇಮದ ಕೊರತೆ ಕಾಡ ತೊಡಗಿತು ಮತ್ತು ಅವರ ಒಲವು ಸಂಭೋಗದ ಮೂಲಕ ಸಿಗುವ ಪ್ರೇಮಸುಖದತ್ತ ಹೊರಳಿತು. ಇದರಿಂದಾಗಿ ಅವರ ಶುದ್ಧ ಮನಸ್ಸು ದೂಷಿತಗೊಂಡು ಅದರಲ್ಲಿ ಇಚ್ಛೆ ಮತ್ತು ವಾಸನೆಗಳ ಸಂಸ್ಕಾರಗಳು ದೃಢವಾಗುತ್ತಾ ಹೋದವು. ನಂತರ ಸ್ತ್ರೀ ಮತ್ತು ಪುರುಷರಿಗೆ ದೇವ ಮತ್ತು ಧರ್ಮದ ಮರೆವು ಉಂಟಾಯಿತು. ಮುಂದೆ ಅವರ ಒಲವು ಧನಸಂಪಾದನೆ ಮತ್ತು ಅಧಿಕಾರವನ್ನು ಪಡೆಯುವುದರತ್ತ ಹೊರಳಿತು. ಆಮೇಲೆ ಮನುಷ್ಯನಿಗೆ ಆಹಾರ ಮತ್ತು ವಿಹಾರಗಳ ಮೂಲಕ ಸುಖವನ್ನು ಪಡೆಯುವ ಇಚ್ಛೆ ಉಂಟಾಯಿತು ಮತ್ತು ಅದು ಬೆಳೆಯುತ್ತಾ ಹೋಯಿತು.

೪. ವ್ಯಕ್ತಿಗೆ ದೇವರ ವಿಸ್ಮರಣೆಯಾದಂತೆ ಅಯೋಗ್ಯ ಕರ್ಮಗಳ ಪದರುಗಳು ಅವನ ಮನಸ್ಸಿನಲ್ಲಿ ಜಮೆಯಾಗತೊಡಗಿದವು. ಇದರಿಂದಲೇ ಅವನಲ್ಲಿ ಸ್ವಭಾವದೋಷ ಮತ್ತು ಅಹಂಕಾರವು ನಿರ್ಮಾಣವಾಯಿತು.

೫. ಜೀವನದಲ್ಲಿ ಸನಾತನ ಧರ್ಮದ ಜ್ಞಾನ ಮತ್ತು ಗುರುಗಳ ಅನನ್ಯ ಮಹತ್ವ

‘ದೇವರ ವಿಸ್ಮರಣೆ ಮತ್ತು ಅಯೋಗ್ಯ ಕರ್ಮ’ ಇವುಗಳಿಂದ ವ್ಯಕ್ತಿಯ ಮನಸ್ಸು ದಿನೇ ದಿನೇ ದೂಷಿತವಾಗುತ್ತಾ ಹೋಯಿತು. ಅದರ ಪರಿಣಾಮವಾಗಿ ವ್ಯಕ್ತಿಯ ಆತ್ಮದ ಸುತ್ತ ಸ್ವಭಾವದೋಷಗಳ ದೊಡ್ಡ ಆವರಣವೇ ತಯಾರಾಯಿತು. ಇದರಿಂದಾಗಿ ವ್ಯಕ್ತಿಯು ಈಶ್ವರೀಯ ಆನಂದದಿಂದ ದೂರವಾದನು. ಅವನು ಸುಖ-ದುಃಖ ಮತ್ತು ಜನ್ಮ ಮೃತ್ಯುಗಳ ದೀರ್ಘಚಕ್ರದಲ್ಲಿ ಸಿಲುಕಿಕೊಂಡನು. ಇಂತಹ ಜೀವಗಳನ್ನು ಮಾಯೆಯಿಂದ ಹೊರತರಲು ಈಶ್ವರನು ‘ಅವತಾರಗಳು, ಸನಾತನ ಧರ್ಮದ ಗ್ರಂಥಗಳು ಮತ್ತು ಗುರುಗಳ ರೂಪದಲ್ಲಿ ಪ್ರಕಟವಾಗತೊಡಗಿದನು. ‘ಸನಾತನ ಧರ್ಮದ ಜ್ಞಾನ ಮತ್ತು ಗುರುಗಳ ಮಾರ್ಗದರ್ಶನದಿಂದ ವ್ಯಕ್ತಿಗೆ ಜೀವನ ನಡೆಸಲು ಯೋಗ್ಯ ದಿಶೆ ಸಿಗುತ್ತದೆ. ಇಂತಹ ಮಾರ್ಗದರ್ಶನ ಪಡೆದ ವ್ಯಕ್ತಿಯು ಸತತವಾಗಿ ಸಾಧನೆ ಮಾಡಿದರೆ, ಅವನು ಮಾಯೆಯ ಈ ದುಷ್ಟ ಚಕ್ರದಿಂದ ಮುಕ್ತನಾಗುತ್ತಾನೆ, ಆನಂದವನ್ನು ಪಡೆಯುತ್ತಾನೆ ಅಂತಿಮವಾಗಿ ಅವನ ಜೀವನವು ಸಾರ್ಥಕವಾಗುತ್ತದೆ.