
ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ನ್ಯಾಯಾಂಗ ಇಲಾಖೆಯು ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಈ ದಾಖಲೆಗಳಲ್ಲಿ ಸಂತ್ರಸ್ತ ಮಹಿಳೆಯೊಬ್ಬರು ನೀಡಿದ ಸಂದರ್ಶನದ ಉಲ್ಲೇಖವಿದೆ. ಎಪ್ಸ್ಟೀನ್ ತನ್ನನ್ನು ಡೊನಾಲ್ಡ್ ಟ್ರಂಪ್‌ಗೆ ಪರಿಚಯಿಸಿದ್ದನೆಂದು ಮತ್ತು ಆ ಸಮಯದಲ್ಲಿ ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಟ್ರಂಪ್ ತನ್ನ ಮೇಲೆ ಲೈಂಗಿಕ ಶೋಷಣೆ ಮಾಡಿದ್ದರೆಂದು ಆಕೆ ಅದರಲ್ಲಿ ದಾವೆ ಮಾಡಿದ್ದಾಳೆ.
ಅಮೆರಿಕದ ತನಿಖಾ ಸಂಸ್ಥೆಯಾದ ‘ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್’ (FBI) ಈ ಮಹಿಳೆಯ ಹೇಳಿಕೆಗೆ ಸಂಬಂಧಿಸಿದಂತೆ 4 ಸಂದರ್ಶನಗಳನ್ನು ನಡೆಸಿತ್ತು. ಸರಕಾರವು ಈ ಹಿಂದೆ ಕೇವಲ ಒಂದು ಸಂದರ್ಶನದ ಸಾರಾಂಶವನ್ನು ಮಾತ್ರ ಬಿಡುಗಡೆ ಮಾಡಿತ್ತು, ಅದರಲ್ಲಿ ಸಂತ್ರಸ್ತೆಯು ಕೇವಲ ಎಪ್ಸ್ಟೀನ್ ವಿರುದ್ಧ ಮಾತ್ರ ಆರೋಪ ಮಾಡಿದ್ದಳು. ಉಳಿದ 3 ಸಂದರ್ಶನಗಳು ನಾಪತ್ತೆಯಾಗಿರುವ ಬಗ್ಗೆ ವಿರೋಧ ಪಕ್ಷದವರು ಪ್ರಶ್ನೆ ಎತ್ತಿದ್ದರು. ಆ 3 ಸಂದರ್ಶನಗಳನ್ನು ತಪ್ಪಾಗಿ ‘ಡುಪ್ಲಿಕೇಟ್’ (ನಕಲು) ಎಂದು ಪರಿಗಣಿಸಿ ಪರಿಶೀಲಿಸಿರಲಿಲ್ಲ ಎಂದು ತನಿಖಾಧಿಕಾರಿಗಳು ಈಗ ತಿಳಿಸಿದ್ದಾರೆ. ಈಗ ಅವುಗಳನ್ನು ಮರುಪರಿಶೀಲಿಸಿದಾಗ ಟ್ರಂಪ್ ಮೇಲಿನ ಆರೋಪಗಳು ಬೆಳಕಿಗೆ ಬಂದಿವೆ.
‘ಟ್ರಂಪ್‌ಗೆ ಹಾನಿಯಾಗಬಹುದು’ ಎಂದು ಮಾಹಿತಿ ಮುಚ್ಚಿಡಲಾಗಿತ್ತು!
ಅಮೆರಿಕದ ವಿರೋಧ ಪಕ್ಷವಾದ ಡೆಮೋಕ್ರಟಿಕ್ ಪಕ್ಷದ ನಾಯಕರು, ಎಪ್ಸ್ಟೀನ್ ಪ್ರಕರಣದ ದಾಖಲೆಗಳನ್ನು ನಿರ್ವಹಿಸಿದ ರೀತಿಯ ಬಗ್ಗೆ ಟ್ರಂಪ್ ಸರಕಾರದ ಮೇಲೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಟ್ರಂಪ್ ಅವರಿಗೆ ಹಾನಿಯಾಗಬಹುದಾದಂತಹ ತನಿಖಾ ಮಾಹಿತಿಯನ್ನು ಅಂದಿನ ಟ್ರಂಪ್ ಆಡಳಿತವು ಉದ್ದೇಶಪೂರ್ವಕವಾಗಿ ಹತ್ತಿಕ್ಕಿದೆ ಎಂದು ಅವರು ಆರೋಪಿಸಿದ್ದಾರೆ.
‘ಎಪ್ಸ್ಟೀನ್ ಫೈಲ್ಸ್’ನಲ್ಲಿ ಟ್ರಂಪ್ ಹೆಸರು 38 ಸಾವಿರ ಬಾರಿ ಉಲ್ಲೇಖ!
‘ಎಪ್ಸ್ಟೀನ್ ಫೈಲ್ಸ್’ನಲ್ಲಿ ಟ್ರಂಪ್ ಅವರ ಹೆಸರು ಬರೋಬ್ಬರಿ 38 ಸಾವಿರಕ್ಕೂ ಹೆಚ್ಚು ಬಾರಿ ದಾಖಲಾಗಿದೆ. 1990ರ ದಶಕದಲ್ಲಿ ಎಪ್ಸ್ಟೀನ್‌ನ ಖಾಸಗಿ ವಿಮಾನದಲ್ಲಿ ಟ್ರಂಪ್ 7-8 ಬಾರಿ ಪ್ರಯಾಣಿಸಿದ ಬಗ್ಗೆಯೂ ಉಲ್ಲೇಖವಿದೆ. ಅಲ್ಲದೆ, ಟ್ರಂಪ್ ಅವರ ‘ಮಾರ್-ಎ-ಲಾಗೊ ಕ್ಲಬ್’ನ ಅತಿಥಿಗಳ ಪಟ್ಟಿಯಲ್ಲೂ ಎಪ್ಸ್ಟೀನ್ ಹೆಸರಿರುವುದು ಕಂಡುಬಂದಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation