
ಟೆಲ್ ಅವಿವ್ (ಇಸ್ರೇಲ್) / ಇಸ್ಲಾಮಾಬಾದ (ಪಾಕಿಸ್ತಾನ) / ಟೆಹರಾನ (ಇರಾನ್) / ವಾಷಿಂಗ್ಟನ್ ಡಿಸಿ (ಅಮೆರಿಕ) – ‘ಆಪರೇಷನ್ ಎಪಿಕ್ ಫ್ಯೂರಿ’ ಎಂಬ ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ನ ಗುರಿ ಸಂಪೂರ್ಣವಾಗಿ ಸ್ಪಷ್ಟವಾಗಿದೆ; ಆದರೆ ಯುದ್ಧ ಮುಕ್ತಾಯಕ್ಕೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ. ನಮಗೆ ರಾಜಕೀಯ ಮತ್ತು ಸೈನ್ಯ ಈ ಎರಡೂ ಮಟ್ಟಗಳಲ್ಲಿ ಅಧಿಕಾರ ಬದಲಾವಣೆಯ ಗುರಿಯಿದೆ; ಆದರೆ ಈ ಬದಲಾವಣೆಯನ್ನು ಇರಾನಿನ ಜನರೇ ತರಬೇಕಾಗುತ್ತದೆ. ನಾವು ಅಲ್ಲಿನ ಜನರಿಗೆ ಆ ಅವಕಾಶವನ್ನು ನೀಡುತ್ತಿದ್ದೇವೆ. ‘ಅಲ್ಲಿ ಯಾರು ನಾಯಕತ್ವ ವಹಿಸಬೇಕು’ ಎಂಬುದನ್ನು ನಿರ್ಧರಿಸುವುದು ನಮ್ಮ ಕೆಲಸವಲ್ಲ. ಇರಾನ್‌ನ ಜನರೇ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆಯ ಮೂಲಕ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿದೋನ್ ಸಾಅರ್ ಹೇಳಿದ್ದಾರೆ.
ಯುದ್ಧ 100 ದಿನಗಳವರೆಗೆ ನಡೆಯಬಹುದು! – ಅಮೆರಿಕ
ಅಮೆರಿಕದ ರಕ್ಷಣಾ ಇಲಾಖೆ ‘ಪೆಂಟಗನ್’ ಇರಾನ್ ವಿರುದ್ಧ ಕನಿಷ್ಠ 100 ದಿನಗಳವರೆಗೆ ನಡೆಯುವ ಮತ್ತು ಸೆಪ್ಟೆಂಬರ್ ವರೆಗೆ ಮುಂದುವರಿಯುವಂತಹ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ. ಇರಾನ್ ಸಂಬಂಧಿತ ಕಾರ್ಯಾಚರಣೆಗಳಿಗೆ ದೀರ್ಘಕಾಲದವರೆಗೆ ಬೆಂಬಲ ನೀಡಲು ಹೆಚ್ಚಿನ ಮಿಲಿಟರಿ ಗುಪ್ತಚರ ಅಧಿಕಾರಿಗಳನ್ನು ನೀಡುವಂತೆ ‘ಯುಎಸ್ ಸೆಂಟ್ರಲ್ ಕಮಾಂಡ್’ ಪೆಂಟಗನ್ ಅನ್ನು ಕೇಳಿದೆ. ಅಧ್ಯಕ್ಷ ಟ್ರಂಪ್ ಅವರು ಮೊದಲು ವ್ಯಕ್ತಪಡಿಸಿದ್ದ 4 ವಾರಗಳ ಅಂದಾಜಿಗಿಂತ ಈ ಸಂಘರ್ಷದ ಅವಧಿ ಹೆಚ್ಚಿರಬಹುದು ಎಂದು ಅಮೆರಿಕವು ಸಿದ್ಧತೆ ಆರಂಭಿಸಿರುವುದು ಇದರ ಸಂಕೇತವಾಗಿದೆ.
ಅಮೆರಿಕವು ಪಶ್ಚಾತ್ತಾಪ ಪಡಬೇಕಾಗುತ್ತದೆ! – ಯುದ್ಧನೌಕೆ ಮುಳುಗಿಸಿದ ನಂತರ ಇರಾನ್ ಬೆದರಿಕೆ

ಶ್ರೀಲಂಕಾದ ಸಮೀಪ ಹಿಂದೂ ಮಹಾಸಾಗರದಲ್ಲಿ ಅಮೆರಿಕವು ಇರಾನಿನ ಯುದ್ಧನೌಕೆಯನ್ನು ಮುಳುಗಿಸಿದ ನಂತರ, ‘ಅಮೆರಿಕವು ತನ್ನ ಈ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಇರಾನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘಚಿ ಬೆದರಿಕೆ ಹಾಕಿದ್ದಾರೆ. ಇರಾನ ಕರಾವಳಿಯಿಂದ 2 ಸಾವಿರ ಮೈಲಿ ದೂರದಲ್ಲಿದ್ದ ಯುದ್ಧನೌಕೆಯ ಮೇಲೆ ಅಮೆರಿಕ ದಾಳಿ ಮಾಡಿದೆ. ಈ ನೌಕೆಯು ಭಾರತದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿತ್ತು. ಅದರಲ್ಲಿ 130 ನಾವಿಕರಿದ್ದರು. ಯಾವುದೇ ಮುನ್ಸೂಚನೆ ನೀಡದೆ ಅಂತರಾಷ್ಟ್ರೀಯ ಸಮುದ್ರದಲ್ಲಿ ಅಮೆರಿಕ ಈ ಕ್ರೂರ ದಾಳಿ ಮಾಡಿದೆ. ಈ ದಾಳಿಯಲ್ಲಿ 87 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಇರಾನ ಮೇಲಿನ ದಾಳಿಗೆ ಅಮೆರಿಕದಿಂದ ಭಾರತೀಯ ಬಂದರುಗಳ ಬಳಕೆ ಎಂಬ ದಾವೆ ತಳ್ಳಿಹಾಕಿದ ಭಾರತ!
ಅಮೆರಿಕದ ಸೇನೆಯ ನಿವೃತ್ತ ಕರ್ನಲ್ ಡೌಗ್ಲಾಸ್ ಮ್ಯಾಕ್ ಗ್ರೆಗರ್ ಅವರು ‘ಒನ್ ಅಮೇರಿಕಾ ನ್ಯೂಸ್ ನೆಟ್‌ವರ್ಕ್’ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ‘ನಮ್ಮ ಎಲ್ಲಾ ಮಿಲಿಟರಿ ನೆಲೆಗಳು ಧ್ವಂಸವಾಗಿವೆ. ನಮ್ಮ ಬಂದರು ಸ್ಥಾಪನೆಗಳು ಧ್ವಂಸವಾಗಿವೆ. ನಮ್ಮ ಬಂದರು (ಹಾರ್ಬರ್ ಇನ್‌ಸ್ಟಾಲೇಶನ್ ಅಂದರೆ ಬಂದರಿನಲ್ಲಿರುವ ವಿವಿಧ ಯಂತ್ರಗಳು, ಕ್ರೇನ್‌ಗಳು ಅಥವಾ ಮೂಲಸೌಕರ್ಯಗಳ ವ್ಯವಸ್ಥೆ ಹಾಗೂ ಸ್ಥಾಪನೆಗಳು) ಧ್ವಂಸಗೊಂಡಿವೆ. ನಮಗೆ ವಾಸ್ತವವಾಗಿ ಭಾರತ ಮತ್ತು ಭಾರತದ ಬಂದರುಗಳ ಆಧಾರವನ್ನು ಪಡೆಯಬೇಕಾಗುತ್ತಿದೆ, ಇದು ಅಷ್ಟೇನೂ ಚೆನ್ನಾಗಿಲ್ಲ. ಇದನ್ನೇ ನೌಕಾಪಡೆಯೂ ಹೇಳುತ್ತಿದೆ’, ಎಂದು ಅವರು ದಾವೆ ಮಾಡಿದ್ದರು. ಈ ಬಗ್ಗೆ ಈಗ ಭಾರತದ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯೆ ನೀಡುತ್ತಾ, ‘ಈ ದಾವೆಯು ಸುಳ್ಳು ಮತ್ತು ತಪ್ಪು. ಇಂತಹ ಆಧಾರರಹಿತ ಮತ್ತು ಕಟ್ಟುಕಥೆಯ ಹೇಳಿಕೆಗಳಿಂದ ದೂರವಿರಿ ಎಂದು ನಾವು ನಿಮಗೆ ಎಚ್ಚರಿಸುತ್ತೇವೆ’ ಎಂದು ಹೇಳಿದೆ.
ಭಾರತಕ್ಕಾಗಿ 95 ಲಕ್ಷ ಬ್ಯಾರೆಲ್ ತೈಲ ಕಳುಹಿಸಲು ರಷ್ಯಾ ಸಿದ್ಧ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದ ಕಾರಣ ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲ ಸಾಗಣೆಯ ಮಾರ್ಗವು ಸ್ಥಗಿತಗೊಂಡಿದೆ. ಜಾಗತಿಕ ಇಂಧನ ವ್ಯಾಪಾರಕ್ಕಾಗಿ ಇದು ಅತ್ಯಂತ ಮಹತ್ವದ ಮಾರ್ಗವೆಂದು ಪರಿಗಣಿಸಲಾಗಿದೆ. ಇದೇ ಮಾರ್ಗದ ಮೂಲಕ ಭಾರತವು ತನ್ನ ಸುಮಾರು ಶೇ. 50 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ರಷ್ಯಾ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸಲು ಸಿದ್ಧವಾಗಿದೆ. ‘ರಾಯಿಟರ್ಸ್’ ವಾರ್ತಾ ಸಂಸ್ಥೆಯ ವರದಿಯ ಪ್ರಕಾರ, ಪ್ರಸ್ತುತ ಭಾರತೀಯ ಸಮುದ್ರ ತೀರದ ಸಮೀಪವಿರುವ ನೌಕೆಗಳಲ್ಲಿ ರಷ್ಯಾದ ಸುಮಾರು 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಲಭ್ಯವಿದ್ದು, ಅದನ್ನು ಮುಂದಿನ ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪಿಸಬಹುದಾಗಿದೆ.
ನೌಕೆಗಳಲ್ಲಿನ ತೈಲವನ್ನು ನಿಖರವಾಗಿ ಎಲ್ಲಿಗೆ ಕಳುಹಿಸಲಾಗುತ್ತಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ; ಆದರೆ ಅಗತ್ಯ ಬಿದ್ದರೆ ಈ ತೈಲವನ್ನು ಭಾರತದತ್ತ ತಿರುಗಿಸಬಹುದು ಎಂದು ತಿಳಿಸಲಾಗಿದೆ. ವರದಿಯ ಪ್ರಕಾರ, ಭಾರತದ ಬಳಿ ಪ್ರಸ್ತುತ ಸುಮಾರು 25 ದಿನಗಳ ಬೇಡಿಕೆಗೆ ಸಾಕಾಗುವಷ್ಟು ಕಚ್ಚಾ ತೈಲದ ಸಂಗ್ರಹವಿದೆ.
ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ, ಇಸ್ರೇಲ್ ಮತ್ತು ಭಾರತ ಒಂದಾಗಿವೆ! – ಪಾಕ್ ರಕ್ಷಣಾ ಸಚಿವರ ಆರೋಪ

ಪಾಕಿಸ್ತಾನವನ್ನು ಒಂದು ರೀತಿಯಲ್ಲಿ ಸುತ್ತುವರಿಯಲಾಗುತ್ತಿದೆ. ಒಂದು ಬದಿಯಲ್ಲಿ ಅಫ್ಘಾನಿಸ್ತಾನ, ಇನ್ನೊಂದು ಬದಿಯಲ್ಲಿ ಭಾರತ ಮತ್ತು ಮತ್ತೊಂದು ಬದಿಯಲ್ಲಿ ಇರಾನ ದೇಶಗಳಿವೆ. ಇಸ್ರೇಲ್ ಪಾಕಿಸ್ತಾನವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಲು ಬಯಸುತ್ತಿದೆ ಮತ್ತು ಈ ಯೋಜನೆಯಲ್ಲಿ ಭಾರತವೂ ಸಹಭಾಗಿಯಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಪ್ರತಿಪಾದಿಸಿದ್ದಾರೆ. ಇರಾನ ಯುದ್ಧದ ಹಿಂದೆ ಯಹೂದಿಗಳಿದ್ದಾರೆ ಮತ್ತು ಇಸ್ರೇಲ್ ನ ಗಡಿಯನ್ನು ಪಾಕಿಸ್ತಾನದವರೆಗೆ ವಿಸ್ತರಿಸುವುದು ಅವರ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಪೂರ್ಣ ಬೆಳವಣಿಗೆಗಳ ಸರಣಿಯು ಪಾಕಿಸ್ತಾನಕ್ಕೆ ಗಂಭೀರವಾದ ಅಪಾಯವಾಗಿದೆ ಎಂದು ಖವಾಜಾ ಆಸಿಫ್ ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧ ಇದು ರಾಜಕೀಯ ಮತ್ತು ಧಾರ್ಮಿಕ ಸಂಚಾಗಿದೆ. ಪಾಕಿಸ್ತಾನದ ನಾಗರಿಕರು ಇದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಯಹೂದಿಗಳು ಮಾನವಕುಲಕ್ಕೆ ಅಪಾಯಕಾರಿಯಾಗಿದ್ದಾರೆ. ಪ್ಯಾಲೆಸ್ಟೈನ್ ಭೂಮಿಯಲ್ಲಿ ಇಸ್ರೇಲ್ ಸ್ಥಾಪನೆಯಾದಾಗಿನಿಂದ ಇಸ್ಲಾಮಿಕ್ ಜಗತ್ತಿನ ಮೇಲೆ ಬಂದ ಪ್ರತಿಯೊಂದು ಬಿಕ್ಕಟ್ಟು ಯಹೂದಿ ಸಿದ್ಧಾಂತದ ಪರಿಣಾಮವಾಗಿದೆ ಎಂದು ಅವರು ಹೇಳಿದರು.
ಅಮೇರಿಕಾವು ಕರಾಚಿ ಮತ್ತು ಲಾಹೋರ್ ನ ತನ್ನ ರಾಯಭಾರ ಕಚೇರಿಗಳಿಂದ ಕೆಲವು ಸಿಬ್ಬಂದಿಗಳನ್ನು ವಾಪಸ್ಸು ಕರೆಸಿಕೊಂಡಿದೆ
ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭದ್ರತಾ ಬೆದರಿಕೆಗಳ ಹಿನ್ನೆಲೆಯಲ್ಲಿ, ಅಮೇರಿಕಾವು ಕರಾಚಿ ಮತ್ತು ಲಾಹೋರ್ ನಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ತುರ್ತು ರಹಿತ’ ಸಿಬ್ಬಂದಿ ಮತ್ತು ಅವರ ಕುಟುಂಬದವರು ಸಾಧ್ಯವಾದಷ್ಟು ಬೇಗ ಪಾಕಿಸ್ತಾನವನ್ನು ತೊರೆಯುವಂತೆ ನಿರ್ದೇಶಿಸಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದನಲ್ಲಿರುವ ಮುಖ್ಯ ಅಮೆರಿಕನ್ ರಾಯಭಾರ ಕಚೇರಿಯ ಕೆಲಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಮತ್ತು ಅಲ್ಲಿನ ಸಿಬ್ಬಂದಿ ಸದ್ಯಕ್ಕೆ ಅಲ್ಲಿಯೇ ಕಾರ್ಯನಿರ್ವಹಿಸಲಿದ್ದಾರೆ. ಕರಾಚಿಯಲ್ಲಿರುವ ರಾಯಭಾರ ಕಚೇರಿಗೆ ಕೆಲವು ದಿನಗಳ ಹಿಂದೆ ಆಕ್ರೋಶಗೊಂಡ ಜನರು ಬೆಂಕಿ ಹಚ್ಚಿದ್ದರು, ಹಾಗೆಯೇ ಲಾಹೋರ್ ನಲ್ಲಿರುವ ರಾಯಭಾರ ಕಚೇರಿಯ ಮೇಲೆಯೂ ದಾಳಿ ನಡೆಸಲಾಗಿತ್ತು.
ಇರಾನ್ ನ ಭೂಗತ ಕ್ಷಿಪಣಿ ನೆಲೆಗಳೇ ಗುರಿ!
ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಈಗ ಇರಾನ್ ನಲ್ಲಿನ ಭೂಗತ ‘ಮಿಸೈಲ್ ಸಿಟಿ’, ಅಂದರೆ ಕ್ಷಿಪಣಿಗಳ ಸಂಗ್ರಹವಿರುವ ಸುರಂಗಗಳನ್ನು ದೊಡ್ಡ ಮಟ್ಟದಲ್ಲಿ ಗುರಿಯಾಗಿಸಿಕೊಳ್ಳಲಾಗುತ್ತಿದೆ. ಕ್ಷಿಪಣಿಗಳು ಮತ್ತು ಡ್ರೋನ್ ಗಳು ಈ ಸುರಂಗಗಳಿಂದ ಹೊರಬರುತ್ತಿದ್ದಂತೆಯೇ ಅವುಗಳ ಉಡಾವಣಾ ವ್ಯವಸ್ಥೆಯನ್ನು ನಾಶಪಡಿಸಲಾಗುತ್ತಿದೆ; ಹಾಗೆಯೇ ‘ಬಂಕರ್ ಬಸ್ಟರ್’ ಬಾಂಬ್ ಗಳ ಸಹಾಯದಿಂದ ಸುರಂಗಗಳ ಪ್ರವೇಶದ್ವಾರಗಳು ಮತ್ತು ಮೇಲ್ಮೈ ರಚನೆಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಅಮೆರಿಕನ್ ಕಮಾಂಡರಗಳ ಪ್ರಕಾರ, ನೂರಾರು ಕ್ಷಿಪಣಿಗಳು, ಉಡಾವಣಾ ವ್ಯವಸ್ಥೆಗಳು ಮತ್ತು ಡ್ರೋನ್ ಗಳನ್ನು ನಾಶಪಡಿಸಲಾಗಿದ್ದು, ಕಳೆದ 4 ದಿನಗಳಲ್ಲಿ ಇರಾನ್ ನ ಕ್ಷಿಪಣಿ ದಾಳಿಗಳಲ್ಲಿ ಸುಮಾರು ಶೇ. 86 ರಷ್ಟು ಇಳಿಕೆಯಾಗಿದೆ.
ಮಧ್ಯಪ್ರಾಚ್ಯದಿಂದ ನಾಗರಿಕರನ್ನು ಹೊರತರಲು ಅಮೆರಿಕದ ಚಾರ್ಟರ್ಡ್ ವಿಮಾನಗಳ ಹಾರಾಟ ಪ್ರಾರಂಭ
ಮಧ್ಯಪ್ರಾಚ್ಯ ದೇಶಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಅಮೆರಿಕವು ತನ್ನ ದೇಶದ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಹೊರತರಲು ಚಾರ್ಟರ್ಡ್ ವಿಮಾನಗಳ ಹಾರಾಟವನ್ನು ಆರಂಭಿಸಿದೆ. ಅಮೆರಿಕದ ವಿದೇಶಾಂಗ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್ (ಯು.ಎ.ಇ.), ಕತಾರ್, ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಲ್ಲಿ ವಾಸಿಸುತ್ತಿರುವ ಅಮೆರಿಕನ್ ನಾಗರಿಕರಿಗೆ ಸಹಾಯ ಮಾಡಲಾಗುತ್ತಿದೆ ಮತ್ತು ಇದುವರೆಗೆ 17 ಸಾವಿರದ 500 ಕ್ಕೂ ಹೆಚ್ಚು ನಾಗರಿಕರು ತಾಯ್ನಾಡಿಗೆ ಮರಳಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸ್ಥಳಾಂತರ ಕಾರ್ಯಾಚರಣೆಯನ್ನು ಮತ್ತಷ್ಟು ವೇಗವಾಗಿ ಹಮ್ಮಿಕೊಳ್ಳಲಾಗುವುದು.
ಅಮೆರಿಕಕ್ಕೆ ಪ್ರತಿದಿನ 8 ಸಾವಿರದ 300 ಕೋಟಿ ರೂಪಾಯಿ (1 ಅಬ್ಜ ಡಾಲರ್) ವೆಚ್ಚವಾಗುತ್ತಿದೆ
ನಿವೃತ್ತ ಸೇನಾಧಿಕಾರಿ ಮತ್ತು ‘ಚಿಂತನ ರಿಸರ್ಚ್ ಫೌಂಡೇಶನ್’ನ ಸಲಹೆಗಾರ ಕರ್ನಲ್ ರಾಜೀವ ಅಗರವಾಲ ಅವರ ಪ್ರಕಾರ, ಪ್ರಾಥಮಿಕ ಅಂದಾಜಿನಂತೆ ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಗಾಗಿ ಅಮೆರಿಕಕ್ಕೆ ಪ್ರತಿದಿನ ಸುಮಾರು 1 ಅಬ್ಜ ಡಾಲರ್ (8 ಸಾವಿರದ 300 ಕೋಟಿ ರೂಪಾಯಿ) ವೆಚ್ಚವಾಗುತ್ತಿದೆ. ಅಮೆರಿಕದ ರಕ್ಷಣಾ ಆಯವ್ಯಯವು ಸುಮಾರು 1 ಟ್ರಿಲಿಯನ್ ಡಾಲರ್ (83 ಲಕ್ಷ ಕೋಟಿ ರೂಪಾಯಿ) ಆಗಿದ್ದರೂ, ಇಲ್ಲಿನ ಸಮಸ್ಯೆ ಒಟ್ಟು ವೆಚ್ಚದ್ದಲ್ಲ, ಬದಲಾಗಿ ಶಸ್ತ್ರಾಸ್ತ್ರಗಳ ಪ್ರತಿ ಯೂನಿಟ್ ಬೆಲೆಯದ್ದಾಗಿದೆ. ಉದಾಹರಣೆಗೆ, ಅಮೆರಿಕದ ‘ಪ್ಯಾಟ್ರಿಯಟ್’ ಮತ್ತು ‘ಟಾಮ್ ಹಾಕ್’ ಕ್ಷಿಪಣಿಗಳ ಬೆಲೆ ಸುಮಾರು 10 ರಿಂದ 30 ಲಕ್ಷ ಡಾಲರ್ (8 ರಿಂದ 24 ಕೋಟಿ ರೂಪಾಯಿ) ಇರುತ್ತದೆ. ಅದರ ತುಲನೆಯಲ್ಲಿ ಇರಾನ್ ನ ಸರಾಸರಿ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಬೆಲೆ ಕೇವಲ 8 ರಿಂದ 10 ಲಕ್ಷ ಡಾಲರ್ (ಆರೂವರೆ ಇಂದ 8 ಕೋಟಿ ರೂಪಾಯಿ) ಇದೆ. ಅದೇ ರೀತಿ, ಅಮೆರಿಕದ ‘ಎಂ.ಕ್ಯೂ-9 ರೀಪರ್’ ಡ್ರೋನ್ ನ ಬೆಲೆ ಸುಮಾರು 3 ಕೋಟಿ ಡಾಲರ್ (249 ಕೋಟಿ ರೂಪಾಯಿ) ಆಗಿದ್ದರೆ, ಇರಾನ್ ನ ‘ಶಾಹೇದ್ 136’ ಡ್ರೋನ್ ಕೇವಲ 30 ರಿಂದ 50 ಸಾವಿರ ಡಾಲರ್‌ಗಳಲ್ಲಿ (25 ರಿಂದ 40 ಲಕ್ಷ ರೂಪಾಯಿ) ಸಿದ್ಧವಾಗುತ್ತದೆ. ಈ ಬೃಹತ್ ವೆಚ್ಚದ ವ್ಯತ್ಯಾಸದಿಂದಾಗಿ ಅಮೆರಿಕ ಮತ್ತು ಇಸ್ರೇಲ್ ಗೆ ಈ ಯುದ್ಧವನ್ನು ದೀರ್ಘಕಾಲದವರೆಗೆ ಮುಂದುವರಿಸುವುದು ಆರ್ಥಿಕವಾಗಿ ಬಹಳ ದುಬಾರಿಯಾಗಬಹುದು.
19 ಲಕ್ಷ ಕೋಟಿ ರೂಪಾಯಿಗಳ ಹಾನಿಯಾಗುವ ಸಾಧ್ಯತೆ
‘ಫಾರ್ಚ್ಯೂನ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಯುದ್ಧದ ಒಟ್ಟು ಆರ್ಥಿಕ ವೆಚ್ಚವು ಅಮೆರಿಕಕ್ಕೆ 210 ಅಬ್ಜ ಡಾಲರ್, ಅಂದರೆ ಸುಮಾರು 19 ಲಕ್ಷ ಕೋಟಿ ರೂಪಾಯಿಗಳವರೆಗೆ ತಲುಪಬಹುದು. ಈ ಅಂಕಿ-ಅಂಶದಲ್ಲಿ ನೇರ ಮಿಲಿಟರಿ ವೆಚ್ಚವೂ ಸೇರಿದೆ, ಇದರ ಅಂದಾಜು ಸುಮಾರು 95 ಅಬ್ಜ ಡಾಲರ್, ಅಂದರೆ 87 ಸಾವಿರದ 498 ಕೋಟಿ ರೂಪಾಯಿಗಳೆಂದು ಹಾಕಲಾಗಿದೆ. ಇದಲ್ಲದೆ, ಜಾಗತಿಕ ಮಟ್ಟದಲ್ಲಿ ವ್ಯಾಪಾರ, ಇಂಧನ ಮಾರುಕಟ್ಟೆ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಉಂಟಾಗಿರುವ ದೊಡ್ಡ ಅಡೆತಡೆಗಳಿಂದ ಉಂಟಾಗುವ ಆರ್ಥಿಕ ನಷ್ಟವನ್ನೂ ಈ ಅಂದಾಜಿನಲ್ಲಿ ಸೇರಿಸಲಾಗಿದೆ.
ಅಮೆರಿಕವು 30 ಕೋಟಿ ರೂಪಾಯಿಯ ಕ್ಷಿಪಣಿಯಿಂದ 30 ಲಕ್ಷ ರೂಪಾಯಿಯ ಡ್ರೋನ್ ಅನ್ನು ಹೊಡೆದು ಉರುಳಿಸುತ್ತಿದೆ!
ಯುದ್ಧದಲ್ಲಿ ಇರಾನಿ ಡ್ರೋನ್‌ಗಳನ್ನು ಹೊಡೆದು ಉರುಳಿಸಲು ಅಮೆರಿಕವು ‘ಪ್ಯಾಟ್ರಿಯಟ್ ಪಿಎಸಿ-3’ ಎಂಬ ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಬಳಸುತ್ತಿದೆ. ಒಂದು ಇರಾನಿ ಡ್ರೋನ್ ಬೆಲೆ ಸುಮಾರು 30 ಲಕ್ಷ ರೂಪಾಯಿ ಆಗಿದ್ದರೆ, ಪ್ಯಾಟ್ರಿಯಟ್ ಪಿಎಸಿ-3 ಕ್ಷಿಪಣಿಯ ಬೆಲೆ ಸುಮಾರು 30 ಕೋಟಿ ರೂಪಾಯಿ ಆಗಿದೆ. ಒಂದು ವೇಳೆ ಡ್ರೋನ್ ಅನ್ನು ಹೊಡೆದು ಉರುಳಿಸದಿದ್ದರೆ, ಅದರಿಂದ ವಾಯುಪಡೆಯ ನೆಲೆಗಳು, ತೈಲ ಸಂಸ್ಕರಣಾಗಾರಗಳು, ವಿದ್ಯುತ್ ಸ್ಥಾವರಗಳು ಅಥವಾ ಇತರ ಪ್ರಮುಖ ಮೂಲಸೌಕರ್ಯಗಳಿಗೆ ದೊಡ್ಡ ಹಾನಿಯಾಗಬಹುದು. ಇದಕ್ಕಾಗಿ ದುಬಾರಿ ಕ್ಷಿಪಣಿಗಳ ಬಳಕೆ ಅನಿವಾರ್ಯವಾಗಿದೆ; ಏಕೆಂದರೆ ದೊಡ್ಡ ಪ್ರಮಾಣದ ಆಕ್ರಮಣಗಳಿಂದ ಶತಕೋಟಿ ರೂಪಾಯಿಗಳ ಹಾನಿಯಾಗುವ ಸಾಧ್ಯತೆಯಿದೆ.
ಅಮೆರಿಕ ಮತ್ತು ಇಸ್ರೇಲ್ ಬಳಿಯಿರುವ ಕ್ಷಿಪಣಿಗಳ ಸಂಖ್ಯೆಯಲ್ಲಿ ಕುಸಿತ
ಯುದ್ಧ ಪ್ರಾರಂಭವಾದ 4 ದಿನಗಳಲ್ಲೇ ಅಮೆರಿಕ ಮತ್ತು ಇಸ್ರೇಲ್ ನ ಕ್ಷಿಪಣಿ ಸಂಗ್ರಹದ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಅಂದಾಜಿನ ಪ್ರಕಾರ ಯುದ್ಧ ಕ್ಷೇತ್ರದಲ್ಲಿ ‘ಪ್ಯಾಟ್ರಿಯಟ್’ ವಿರೋಧಿ (ಇಂಟರ್‌ಸೆಪ್ಟರ್) ಕ್ಷಿಪಣಿಗಳ ಸಂಖ್ಯೆ ಸುಮಾರು 600 ರಿಂದ 800 ರಷ್ಟಿದೆ. ಒಂದು ಕ್ಷಿಪಣಿಯನ್ನು ತಡೆಯಲು 4 ರಿಂದ 6 ಇಂಟರ್ ಸೆಪ್ಟರ್ ಕ್ಷಿಪಣಿಗಳನ್ನು ಉಡಾಯಿಸಲಾಗುತ್ತದೆ. ಇಲ್ಲಿಯವರೆಗೆ ಸುಮಾರು 150 ರಿಂದ 200 ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಬಳಸಲಾಗಿದೆ. ಇದೇ ವೇಗದಲ್ಲಿ ಆಕ್ರಮಣಗಳು ಮುಂದುವರಿದರೆ, ಮುಂದಿನ 4 ರಿಂದ 7 ದಿನಗಳಲ್ಲಿ ಅವುಗಳ ಲಭ್ಯತೆಯು ಸಂಕಷ್ಟಕ್ಕೆ ಸಿಲುಕಬಹುದು. ಕೆಲವು ವರದಿಗಳ ಪ್ರಕಾರ, ಅಮೆರಿಕವು ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ ಕೆಲವು ಪ್ಯಾಟ್ರಿಯಟ್ ಕ್ಷಿಪಣಿಗಳನ್ನು ತರಿಸಿಕೊಳ್ಳಲು ಯೋಚಿಸುತ್ತಿದೆ. ಇನ್ನೊಂದೆಡೆ, ಇರಾನ್ ಬಳಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದೊಡ್ಡ ಸಂಗ್ರಹವಿದೆ ಎಂದು ಹೇಳಲಾಗುತ್ತಿದೆ. ವಿವಿಧ ಅಂದಾಜುಗಳ ಪ್ರಕಾರ ಇರಾನ್ ಬಳಿ 20 ಸಹಸ್ರದಿಂದ 50 ಸಹಸ್ರದವರೆಗೆ ವಿವಿಧ ರೀತಿಯ ಕ್ಷಿಪಣಿಗಳಿರಬಹುದು. ಇದರ ಹೊರತಾಗಿ ಸಾವಿರಾರು ಸಂಖ್ಯೆಯಲ್ಲಿ ಡ್ರೋನ್ ಗಳೂ ಲಭ್ಯವಿದ್ದು, ಅವುಗಳನ್ನು ಬೆಟ್ಟಗಳ ಒಳಗಿನ ಸುರಕ್ಷಿತ ಭೂಗತ ನೆಲೆಗಳಲ್ಲಿ ಇರಿಸಲಾಗಿದೆ.
ಅಜರಬೈಜಾನ್ ಮೇಲೆ ಇರಾನಿ ಡ್ರೋನ್ ಬಿದ್ದಿದ್ದಕ್ಕೆ ಇರಾನ್ ರಾಯಭಾರಿಗೆ ಬುಲಾವ್!
ತಮ್ಮ ಗಡಿ ಪ್ರದೇಶದಲ್ಲಿ ಡ್ರೋನ್ ಬಿದ್ದ ಘಟನೆಗೆ ಸಂಬಂಧಿಸಿದಂತೆ ಇರಾನ್ ರಾಯಭಾರಿಯನ್ನು ಕರೆಯಿಸಿಕೊಳ್ಳಲಾಗಿದೆ ಎಂದು ಅಜರಬೈಜಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಆಕ್ರಮಣವು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಇರಾನ್ ತಕ್ಷಣವೇ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಅಜರಬೈಜಾನ್ ಕಾಯ್ದಿರಿಸಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ