|

ಕಾನ್ಪುರ (ಉತ್ತರಪ್ರದೇಶ) – ಜಿಲ್ಲೆಯ 22 ವರ್ಷದ ಬ್ರಾಹ್ಮಣ ಯುವತಿಯನ್ನು ಕ್ರೈಸ್ತ ಯುವಕನೊಬ್ಬ ಪ್ರೇಮದ ಜಾಲಕ್ಕೆ ಸಿಲುಕಿಸಿದ್ದಾನೆ. ತನ್ನ ನಿಜವಾದ ಗುರುತನ್ನು ಮರೆಮಾಚಿ, ತಾನು ‘ಠಾಕೂರ್’ ಸಮುದಾಯಕ್ಕೆ ಸೇರಿದವನೆಂದು ಬಿಂಬಿಸಿ, ‘ಅಭಿಷೇಕ ಸಿಂಗ್’ ಎಂಬ ಹೆಸರಿನಲ್ಲಿ ಅವಳೊಂದಿಗೆ ಸ್ನೇಹ ಬೆಳೆಸಿದ್ದನು. ಮುಂದೆ ಪ್ರೇಮದ ನಾಟಕವಾಡಿ ಅವಳಿಗೆ ವಿವಾಹದ ಆಮಿಷ ತೋರಿಸಿದನು ಹಾಗೂ ನಿರಂತರವಾಗಿ ದೈಹಿಕ ಶೋಷಣೆ ಮಾಡಿದನು. ಯುವತಿಯು ವಿವಾಹವಾಗುವಂತೆ ಒತ್ತಾಯಿಸಿದಾಗ, ಅವನು ತನ್ನ ಕ್ರೈಸ್ತ ಗುರುತನ್ನು ಬಹಿರಂಗಪಡಿಸಿದನು ಮತ್ತು ಮದುವೆಯಾಗಲು ಅವಳಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರಲಾರಂಭಿಸಿದನು. ಅಷ್ಟರಲ್ಲಿ ಸಂತ್ರಸ್ತೆಯು ಗರ್ಭಿಣಿಯಾಗಿದ್ದಳು.
ಅಭಿಷೇಕ್ ಮತ್ತು ಅವನ ಕುಟುಂಬದವರು ತನ್ನ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಅವಳ ಹೊಟ್ಟೆಗೆ ಬಲವಾಗಿ ಒದ್ದಿದ್ದರಿಂದ, ಹೊಟ್ಟೆಯಲ್ಲಿದ್ದ ಮಗು ಗರ್ಭದಲ್ಲೇ ಸಾವನ್ನಪ್ಪಿದೆ ಮತ್ತು ಮೃತ ಶಿಶು ಜನಿಸಿದೆ. ಕೇವಲ ಅಭಿಷೇಕ ಮಾತ್ರವಲ್ಲ, ಅವನ ತಂದೆ ಮತ್ತು ಇತರ ಸಂಬಂಧಿಕರೂ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವಳು ಆರೋಪಿಸಿದ್ದಾಳೆ.
ಆರಂಭದಲ್ಲಿ ಪೊಲೀಸರಿಂದಲೂ ಸಂತ್ರಸ್ತೆಯ ದೂರುಗಳ ಬಗ್ಗೆ ನಿರ್ಲಕ್ಷ್ಯ!ಇದು ಉತ್ತರಪ್ರದೇಶ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ. ಯೋಗಿ ಆದಿತ್ಯನಾಥ ಸರಕಾರವು ಸಂಬಂಧಪಟ್ಟ ಪೊಲೀಸ್ ನಿರೀಕ್ಷಕರ ಮೇಲೆ ಕಠಿಣಾತಿ-ಕಠಿಣ ಕ್ರಮ ಕೈಗೊಳ್ಳಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ! ಆರಂಭದ ದಿನಗಳಲ್ಲಿ ಪೊಲೀಸರು ತನ್ನ ದೂರುಗಳನ್ನು ನಿರ್ಲಕ್ಷಿಸಿದರು ಮತ್ತು ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಕೇವಲ ಸಂಧಾನ ಮಾಡಲು ಪ್ರಯತ್ನಿಸಿದರು ಎಂದು ಸಂತ್ರಸ್ತೆಯು ಆರೋಪಿಸಿದ್ದಾಳೆ. ಅವಳು ಪದೇ ಪದೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಭಿಷೇಕನ ಧೈರ್ಯ ಮತ್ತಷ್ಟು ಹೆಚ್ಚಾಯಿತು ಮತ್ತು ಅವಳ ಮೇಲಿನ ದೌರ್ಜನ್ಯ ಮುಂದುವರಿಯಿತು. ಮುಂದೆ ಈ ಪ್ರಕರಣವು ಗಂಭೀರ ತಿರುವು ಪಡೆದು ಎಲ್ಲೆಡೆ ಚರ್ಚೆಯಾಗತೊಡಗಿತು. ತದನಂತರವಷ್ಟೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಭಿಷೇಕನನ್ನು ಬಂಧಿಸಿದ್ದಾರೆ. |
ಸಂಪಾದಕೀಯ ನಿಲುವುಇಂತಹ ಘಟನೆಗಳಿಂದ ಈಗ ಕೇವಲ ಮುಸಲ್ಮಾನರಷ್ಟೇ ಅಲ್ಲ, ಕ್ರೈಸ್ತರೂ ‘ಲವ್ ಕ್ರೂಸೇಡ್’ (ಕ್ರೈಸ್ತರ ಧರ್ಮಯುದ್ಧ) ಮೂಲಕ ಹಿಂದೂ ಯುವತಿಯರನ್ನು ಜಾಲಕ್ಕೆ ಕೆಡವಿ ವಂಚಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಹಿಂದೂಗಳಿಗೆ ತಮ್ಮ ಧರ್ಮದ ಬಗ್ಗೆ ಅಭಿಮಾನ ಇದ್ದದ್ದೇ ಆಗಿದ್ದರೆ ಈ, ಅಹಿಂದೂಗಳಿಗೆ (ಹಿಂದೂಯೇತರರು?) ಹಿಂದೂಗಳ ಮೇಲೆ ಮತಾಂತರದ ಒತ್ತಡ ಹೇರುವ ಮೊದಲು ಅಥವಾ ಹಿಂದೂಗಳ ಸಹವಾಸಕ್ಕೆ ಬರುವ ಮೊದಲು ಹತ್ತು ಬಾರಿ ಯೋಚಿಸಬೇಕಾಗುತ್ತಿತ್ತು. ಹಾಗೆ ಆಗುತ್ತಿಲ್ಲ ಎಂಬುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!