ಚೀನಾದ ಕಳಪೆ ವಾಯು ರಕ್ಷಣಾ ವ್ಯವಸ್ಥೆಯಿಂದ ಖಮೇನಿಗೆ ಸಂಕಷ್ಟ!

ಈ ಹಿಂದೆ ಪಾಕಿಸ್ತಾನ ಮತ್ತು ವೆನೆಜುವೆಲಾ ದೇಶಗಳೂ ಸಹ ಚೀನಾದ ರಕ್ಷಣಾ ವ್ಯವಸ್ಥೆಯಿಂದಾಗಿ ಇದೇ ರೀತಿ ಹೊಡೆತ ತಿಂದಿವೆ!

ನವದೆಹಲಿ – ಚೀನಾದ ಅತ್ಯಂತ ಕಳಪೆ ದರ್ಜೆಯ ‘HQ-9B’ ವಾಯು ರಕ್ಷಣಾ ವ್ಯವಸ್ಥೆಯು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮತ್ತು ಅವರ ಕುಟುಂಬಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಿದೆ ಎಂಬ ವಿಷಯ ಬಹಿರಂಗವಾಗಿದೆ. ಅಮೆರಿಕ ಮತ್ತು ಇಸ್ರೇಲ್‌ನ ತೀವ್ರ ದಾಳಿಯ ಮುಂದೆ ಚೀನಾದ ಈ ರಕ್ಷಣಾ ವ್ಯವಸ್ಥೆಯು ಸಂಪೂರ್ಣವಾಗಿ ವಿಫಲವಾಗಿದೆ.

೧. ಈ ಹಿಂದೆಯೂ ಚೀನಾದ ಈ ರಕ್ಷಣಾ ವ್ಯವಸ್ಥೆ ವಿಫಲವಾಗಿತ್ತು. ಜನವರಿಯಲ್ಲಿ ಅಮೆರಿಕ, ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ಕಾರ್ಯಾಚರಣೆ ನಡೆಸಿದಾಗಲೂ ಈ ವ್ಯವಸ್ಥೆಯು ಯಾವುದೇ ಪರಿಣಾಮ ಬೀರಲಿಲ್ಲ.

೨. ಇದಕ್ಕೂ ಮುನ್ನ ಭಾರತವು ಪಾಕಿಸ್ತಾನದ ವಿರುದ್ಧ ನಡೆಸಿದ ‘ಆಪರೇಷನ್ ಸಿಂದೂರ್‌’ ವೇಳೆ, ಪಾಕಿಸ್ತಾನವು ಚೀನಾದಿಂದ ಖರೀದಿಸಿದ್ದ ‘HQ-9B’ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿತ್ತು. ಆದರೆ ಭಾರತೀಯ ಯುದ್ಧ ವಿಮಾನಗಳ ಮುಂದೆ ಈ ವ್ಯವಸ್ಥೆಯು ಕಿಂಚಿತ್ತೂ ರಕ್ಷಣೆ ನೀಡಲಿಲ್ಲ. ಈ ೪ ದಿನಗಳ ಸಂಘರ್ಷದಲ್ಲಿ ಭಾರತದ ‘S-400’ ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ವಾಯುಪಡೆಯ ೫-೬ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತ್ತು. ಪಾಕಿಸ್ತಾನದ ಒಂದು ಗುಪ್ತಚರ ವಿಮಾನವೂ ಈ ದಾಳಿಯಲ್ಲಿ ನಾಶವಾಗಿತ್ತು.

ಸಂಪಾದಕೀಯ ನಿಲುವು

ಚೀನಾದ ವಸ್ತುಗಳು ಕಳಪೆ ಗುಣಮಟ್ಟದವು ಮತ್ತು ಅಲ್ಪಕಾಲ ಬಾಳಿಕೆ ಬರುವವು ಎಂಬುದು ಭಾರತದಲ್ಲಿ ಸಾರ್ವತ್ರಿಕ ಅಭಿಪ್ರಾಯ. ಈಗ ಚೀನಾದ ಯುದ್ಧ ಸಾಮಗ್ರಿಗಳ ಬಗ್ಗೆಯೂ ಅನೇಕ ದೇಶಗಳಿಗೆ ಇದೇ ಅನುಭವವಾಗುತ್ತಿರುವುದರಿಂದ, ಒಂದು ವೇಳೆ ಚೀನಾ ಭಾರತದೊಂದಿಗೆ ಯುದ್ಧಕ್ಕೆ ಇಳಿದರೆ, ಭಾರತವು ಕೆಲವೇ ಗಂಟೆಗಳಲ್ಲಿ ಚೀನಾವನ್ನು ಸೋಲಿಸುವುದು ಖಚಿತ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!