‘ಖಮೇನಿ ಅವರ ನಿಧನದ ಕುರಿತು ಕೇಂದ್ರ ಸರಕಾರವೇಕೆ ಮೌನ ತಾಳಿದೆ? ದೇಶದ ವಿದೇಶಾಂಗ ನೀತಿ ಏನು?’ – ಸೋನಿಯಾ ಗಾಂಧಿಯವರ ಪ್ರಶ್ನೆ

ನವ ದೆಹಲಿ – ಇಸ್ರೇಲ್ ಮತ್ತು ಅಮೆರಿಕದ ಆಕ್ರಮಣದಲ್ಲಿ ಇರಾನ್‌ ನ ಶಿಯಾ ಮುಸಲ್ಮಾನರ ಸರ್ವೋಚ್ಚ ಧರ್ಮಗುರು ಆಯತೊಲ್ಲಾ ಖಮೇನಿ ಅವರ ನಿಧನವಾಯಿತು. ಈ ಕುರಿತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೇಂದ್ರ ಸರಕಾರಕ್ಕೆ ಪತ್ರ ಬರೆದು, ‘ಖಮೇನಿ ನಿಧನದ ಬಗ್ಗೆ ಕೇಂದ್ರ ಸರಕಾರವೇಕೆ ಮೌನವಾಗಿದೆ?’ ಎಂದು ಪ್ರಶ್ನಿಸಿದ್ದಾರೆ.

ಸೋನಿಯಾ ಗಾಂಧಿ ತಮ್ಮ ಪತ್ರದಲ್ಲಿ,

೧. ಯಾವುದಾದರೂ ದೇಶದ ಮುಖ್ಯಸ್ಥರನ್ನು ಈ ರೀತಿ ಹತ್ಯೆ ಮಾಡುವುದು ಸಮಕಾಲೀನ ಅಂತರರಾಷ್ಟ್ರೀಯ ಸಂಬಂಧಗಳ ಮೇಲೆ ಬಿದ್ದ ಆಳವಾದ ಗಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇವಲ ‘ಈ ಘಟನೆಯು ಆತಂಕಕಾರಿ ವಿಷಯವಾಗಿದೆ’ ಎಂದು ಮಿತವಾದ ಪ್ರತಿಕ್ರಿಯೆ ನೀಡಿದ್ದಾರೆ; ಆದರೆ ಘಟನೆ ನಡೆದ ರೀತಿಯ ಬಗ್ಗೆ ಅವರು ಮೌನ ತಾಳಿದ್ದಾರೆ. ಇರಾನ್ ಮತ್ತು ಭಾರತದ ನಡುವೆ ಮೈತ್ರಿಯ ಸಂಬಂಧವಿದೆ, ಅದನ್ನು ಗಮನಿಸಿದರೆ ಈ ಮೌನವು ಅತ್ಯಂತ ಅಸ್ವಸ್ಥಗೊಳಿಸುವಂತಿದೆ. (ಖಮೇನಿ ಅವರು ಇಸ್ರೇಲ್ ವಿರುದ್ಧ ಜಿಹಾದಿ ಭಯೋತ್ಪಾದಕ ಸಂಘಟನೆಗಳಾದ ಹೂತಿ, ಹಿಜ್ಬುಲ್ಲಾ ಮತ್ತು ಹಮಾಸ್‌ ಗೆ ಎಲ್ಲಾ ರೀತಿಯ ಸಹಾಯ ನೀಡಿದ್ದರು. ಆದುದರಿಂದಲೇ ಇಸ್ರೇಲ್ ಅವರನ್ನು ಹತ್ಯೆ ಮಾಡಿದೆ. ಹಾಗೆಯೇ, ಹಿಜಾಬ್ ವಿರೋಧಿ ಆಂದೋಲನ ನಡೆಸಿದ ಇರಾನಿ ಮಹಿಳೆಯರನ್ನು ಖಮೇನಿ ಆದೇಶದಂತೆ ಕೊಲ್ಲಲಾಯಿತು, ಅವರ ಮೇಲೆ ಅತ್ಯಾಚಾರವೆಸಗಲಾಯಿತು; ಈ ಬಗ್ಗೆ ಸೋನಿಯಾ ಗಾಂಧಿ ಎಂದಾದರೂ ಮಾತನಾಡಿದ್ದಾರೆಯೇ? ಅಂತಹ ಖಮೇನಿ ಹತ್ಯೆಯ ಬಗ್ಗೆ ಭಾರತವೇಕೆ ಧ್ವನಿ ಎತ್ತಬೇಕು?- ಸಂಪಾದಕರು)

೨. ಭಾರತದಂತಹ ದೇಶವು ಅಂತರರಾಷ್ಟ್ರೀಯ ಕಾಯ್ದೆಗಳ ಉಲ್ಲಂಘನೆಯ ಕುರಿತು ಯಾವುದೇ ಕಠಿಣ ನಿಲುವನ್ನು ತಳೆದಿರುವುದಿಲ್ಲ. (ಭಯೋತ್ಪಾದಕರಿಗೆ ಪೂರಕವಾಗಿರುವ ಇಂತಹ ಅಂತರರಾಷ್ಟ್ರೀಯ ಕಾಯ್ದೆಗಳನ್ನು ವಿಸರ್ಜಿಸಬೇಕೆಂದು ಈಗಿನ ಜನತೆಗೆ ಅನಿಸುತ್ತಿದೆ! – ಸಂಪಾದಕರು) ಇದರಿಂದ ಜಗತ್ತಿನಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ. ಖಮೇನಿ ಅವರನ್ನು ಗುರಿಯಾಗಿಸಿ, ಬೆನ್ನಟ್ಟಿ ಅವರನ್ನು ಕೊಲ್ಲಲಾಯಿತು. ಅದರ ಬಗ್ಗೆ ಭಾರತವು ಸೂಚಕವಾಗಿ ಮೌನ ತಾಳಿದೆ, ಇದು ಸರಿಯಲ್ಲ. ಈ ಮೌನ ನಮ್ಮ ದೇಶದ ವಿದೇಶಾಂಗ ನೀತಿ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ನಿಲುವನ್ನು ಸ್ಪಷ್ಟಪಡಿಸಬೇಕು. (ಮುಸಲ್ಮಾನರ ಓಲೈಕೆಗಾಗಿ ಕಾಂಗ್ರೆಸ್ ತನ್ನ ಆಯುಷ್ಯವನ್ನೇ ಕಳೆದಿದೆ ಮತ್ತು ಕಳೆಯುತ್ತಿದೆ. ಇದೇ ಕಾರಣಕ್ಕಾಗಿ ಜನತೆಯು ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿದೆ. ಆದರೂ ಕಾಂಗ್ರೆಸ್ಸಿನ ಗಾಂಧಿ ಕುಟುಂಬಕ್ಕೆ ಈ ತಪ್ಪಿನ ಅರಿವಿಲ್ಲ. ಇಂತಹ ಭಯೋತ್ಪಾದನಾ ಸಮರ್ಥಕ ಕಾಂಗ್ರೆಸ್ ಅನ್ನು ದೇಶದಿಂದ ರಾಜಕೀಯವಾಗಿ ನಿರ್ನಾಮ ಮಾಡುವುದು ಅವಶ್ಯಕವಾಗಿದೆ – ಸಂಪಾದಕರು)

ಪ್ರಧಾನಿ ನರೇಂದ್ರ ಮೋದಿಯವರು ಸರಿಯಾದ ನಿಲುವು ತಳೆಯಬೇಕು! – ರಾಹುಲ್ ಗಾಂಧಿ ಆಗ್ರಹ

ಪ್ರಧಾನಿ ಮೋದಿಯವರು ಸರಿಯಾದ ನಿಲುವನ್ನೇ ತಳೆದಿದ್ದಾರೆ ಎಂದು ಜನತೆಗೆ ಅನಿಸುತ್ತಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಸಂಘರ್ಷದಲ್ಲಿ ಭಾರತೀಯರೂ ಸಿಲುಕಿಕೊಂಡಿದ್ದು, ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಭಾರತವು ಈ ಬಗ್ಗೆ ಸೂಕ್ತ ನಿಲುವು ತಳೆಯಬೇಕು. ಇದು ೧ ಕೋಟಿ ಭಾರತೀಯರ ಪ್ರಶ್ನೆಯಾಗಿದೆ. ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವ ಜೀವನದ ಬಗ್ಗೆ ಭಾರತವು ದೃಢವಾದ ನಿಲುವನ್ನು ಪ್ರದರ್ಶಿಸಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಹತ್ಯೆಯಾದಾಗ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಮಾರಣಹೋಮ ನಡೆದಾಗ ಸೋನಿಯಾ ಗಾಂಧಿಯವರು ಎಂದಾದರೂ ಪತ್ರ ಬರೆದು ಆ ದೇಶದ ಮುಖ್ಯಸ್ಥರನ್ನು ಪ್ರಶ್ನಿಸಿದ್ದಾರೆಯೇ?