
(ಈ ಮೇಲೆ ಪ್ರಕಟಿಸಿರುವ ಚಿತ್ರದ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿಯಿ ತಿಳಿಸುವುದಾಗಿದೆ – ಸಂಪಾದಕರು)
ವಾಷಿಂಗ್ಟನ್ ಡಿಸಿ (ಅಮೆರಿಕಾ) – ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗವು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದ ವಿವಾದಾತ್ಮಕ ಪೋಸ್ಟ್‌ಗೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದೆ. ಈ ಪೋಸ್ಟ್‌ನಲ್ಲಿ ಸಂಸ್ಕೃತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಿಂದೂ ವಿರೋಧಿ ಮತ್ತು ಅವಹೇಳನಕಾರಿ ಚಿತ್ರವನ್ನು ಪ್ರದರ್ಶಿಸಲಾಗಿತ್ತು, ಇದನ್ನು ಹಿಂದೂ ಸಮುದಾಯವು ವಿರೋಧಿಸಿತ್ತು. ಪ್ರಾಥಮಿಕ ಸಂಸ್ಕೃತ ಪಠ್ಯಕ್ರಮವನ್ನು ಬಿಂಬಿಸಲು ಬಳಸಲಾದ ಈ ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ವಿಶ್ವವಿದ್ಯಾಲಯದ ವಿರುದ್ಧ ಹಿಂದೂ ದ್ವೇಷಕ್ಕೆ ಪ್ರೋತ್ಸಾಹ ನೀಡಿದ ಆರೋಪ!
‘ಕೋಅಲಿಷನ್ ಆಫ್ ಹಿಂದೂಸ್ ಆಫ್ ನಾರ್ತ್ ಅಮೇರಿಕಾ’ (CoHNA) ಸಂಘಟನೆಯು ಹಾರ್ವರ್ಡ್ ವಿಶ್ವವಿದ್ಯಾಲಯವು ಬಹಿರಂಗವಾಗಿ ಹಿಂದೂ ದ್ವೇಷಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದೆ. ಸಂಬಂಧಿತ ಚಿತ್ರದಲ್ಲಿ ಸಂಸ್ಕೃತ ಮತ್ತು ಹಿಂದೂ ಧರ್ಮವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಅದು ವಾದಿಸಿದೆ. ಬಳಸಲಾದ ಚಿತ್ರವು ಯಾವುದೋ ಹಾರರ್ (ಭಯಾನಕ) ಚಿತ್ರದಂತೆ ಕಾಣುತ್ತಿದ್ದು, ಅದರಲ್ಲಿ ತಿಲಕವಿಟ್ಟ ಕಪ್ಪು ಮೈಬಣ್ಣದ ಹಿಂದೂ ವ್ಯಕ್ತಿಯ ಕೈಯಲ್ಲಿ ಭೂತದಂತಹ ಆಕೃತಿಯೊಂದು ನೇತಾಡುತ್ತಿರುವುದನ್ನು ತೋರಿಸಲಾಗಿದೆ. ಈ ಚಿತ್ರವು ಮಹಾಭಾರತದ ವಿಷಯಗಳಿಗೆ ಮತ್ತು ಭಗವಾನ್ ಶ್ರೀಕೃಷ್ಣನ ರಾಸಲೀಲೆಗೆ ಸಂಬಂಧಿಸಿದ್ದೆಂದು ಹೇಳಲಾಗಿತ್ತು; ಆದರೆ ಅದರ ಪ್ರಸ್ತುತಿಯು ಅತ್ಯಂತ ಅವಹೇಳನಕಾರಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ‘ಮಾಸ್ಟರ್ ಆಫ್ ಪಪೆಟ್ಸ್’ ಎಂಬ ಶೀರ್ಷಿಕೆಯಡಿ ಈ ಚಿತ್ರವನ್ನು ಅನಿರುದ್ಧ ಸಾಯಿನಾಥ್ ಅವರು ರಚಿಸಿದ್ದಾರೆ.
ಸಾಂಸ್ಕೃತಿಕ ಸಂಪ್ರದಾಯಗಳಿಗೆ ನಾವು ಬದ್ಧರಾಗಿದ್ದೇವೆ! – ಹಾರ್ವರ್ಡ್ ವಿಶ್ವವಿದ್ಯಾಲಯ
ವಿವಾದ ಉಲ್ಬಣಗೊಂಡ ನಂತರ, ದಕ್ಷಿಣ ಏಷ್ಯಾ ಅಧ್ಯಯನ ವಿಭಾಗವು ಮನವಿಯೊಂದನ್ನು ಬಿಡುಗಡೆ ಮಾಡಿ ವಿಷಾದ ವ್ಯಕ್ತಪಡಿಸಿದೆ. ಸಂಸ್ಕೃತ ಕಾರ್ಯಕ್ರಮಕ್ಕಾಗಿ ಅಸೂಕ್ಷ್ಮ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ವಿಭಾಗವು ಕ್ಷಮೆಯಾಚಿಸಿದೆ. “ಸಂಸ್ಕೃತ ಬೋಧನೆಯಲ್ಲಿ ನಮಗೆ ಸುದೀರ್ಘ ಸಂಪ್ರದಾಯವಿದೆ. ಈ ಭಾಷೆಯ ಹಾಗೂ ಅದಕ್ಕೆ ಸಂಬಂಧಿಸಿದ ಬೌದ್ಧಿಕ ಮತ್ತು ಸಾಾಂಸ್ಕೃತಿಕ ಸಂಪ್ರದಾಯಗಳಿಗೆ ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಾಮಾಜಿಕ ಜಾಲತಾಣಗಳ ಆಂತರಿಕ ಪ್ರಕ್ರಿಯೆಯನ್ನು ಪರಿಶೀಲಿಸಲಾಗುತ್ತಿದೆ, ಇದರಿಂದ ಪ್ರಕಟವಾಗುವ ಪೋಸ್ಟ್‌ಗಳು ವಿಭಾಗದ ಗುರಿ ಮತ್ತು ಮೌಲ್ಯಗಳಿಗೆ ಅನುಗುಣವಾಗಿರುತ್ತವೆ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ವಿವಾದಕ್ಕೀಡಾದ ಪೋಸ್ಟ್‌ಗೂ ‘ದ ಲಕ್ಷ್ಮಿ ಮಿತ್ತಲ್ ಆಂಡ್ ಫ್ಯಾಮಿಲಿ ಸೌತ್ ಏಷ್ಯಾ ಇನ್‌ಸ್ಟಿಟ್ಯೂಟ್’ಗೂ ಯಾವುದೇ ಸಂಬಂಧವಿಲ್ಲ ಎಂದು ವಿಶ್ವವಿದ್ಯಾಲಯ ತಿಳಿಸಿದೆ. “ದ ಲಕ್ಷ್ಮಿ ಮಿತ್ತಲ್ ಅಂಡ್ ಫ್ಯಾಮಿಲಿ ಸೌತ್ ಏಷಿಯಾ ಇನ್ಸ್ಟಿಟ್ಯೂಟ್ “, ಈ ಹಾರ್ವರ್ಡ್ ನಲ್ಲಿನ ಸ್ವತಂತ್ರ ಮತ್ತು ವಿಶಿಷ್ಟ ಸಂಸ್ಥೆ ಆಗಿದೆ.
ಕ್ಷಮೆಯಾಚನೆಗೆ ಸ್ವಾಗತ
ಹಾರ್ವರ್ಡ್ ವಿಶ್ವವಿದ್ಯಾಲಯವು ವಿವಾದಾತ್ಮಕ ಪೋಸ್ಟ್ ಬಗ್ಗೆ ಕ್ಷಮೆಯಾಚಿಸಿರುವುದನ್ನು ‘ಕೋಅಲಿಷನ್ ಆಫ್ ಹಿಂದೂಸ್ ಆಫ್ ನಾರ್ತ್ ಅಮೇರಿಕಾ’ ಸಂಘಟನೆಯು ಸ್ವಾಗತಿಸಿದೆ. ‘ಎಕ್ಸ್’ (Twitter) ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತದ ಬಗ್ಗೆ ಗೌರವ ವ್ಯಕ್ತವಾಗುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಸಂಸ್ಕೃತವು ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿದೆ” ಎಂದು ಸಂಘಟನೆ ಹೇಳಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation