|

ಟೆಹರಾನ್ (ಇರಾನ್) – ಅಮೆರಿಕ ಮತ್ತು ಇಸ್ರೇಲ್ ದೇಶಗಳ ಜಂಟಿ ದಾಳಿಯಲ್ಲಿ ಇರಾನ್ ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖೊಮೇನಿಯಿ (೮೬ ವರ್ಷ) ಮೃತಪಟ್ಟಿದ್ದಾರೆ. ಇದರೊಂದಿಗೆ ೧೯೮೯ ರಿಂದ ಇದ್ದ ಖೊಮೇನಿಯಿ ಅವರ ಅಧಿಕಾರಾವಧಿಯು ಅಂತ್ಯಗೊಂಡಿದೆ. ಸತತ ೩೬ ವರ್ಷಗಳ ಕಾಲ ಇರಾನ್ ಅನ್ನು ಮುನ್ನಡೆಸಿದ್ದ ಈ ೮೬ ವರ್ಷದ ನಾಯಕನ ಮಧ್ಯ ಟೆಹರಾನ್ ನಲ್ಲಿದ್ದ ನಿವಾಸವು ಇಸ್ರೇಲ್-ಅಮೆರಿಕದ ದಾಳಿಯಲ್ಲಿ ಧ್ವಂಸಗೊಂಡಿದೆ. ಇರಾನ್ ನ ಅಧಿಕೃತ ಮಾಧ್ಯಮಗಳು ಖೊಮೇನಿಯಿ ಅವರ ಮರಣವನ್ನು ದೃಢಪಡಿಸಿವೆ. ಇದಕ್ಕೂ ಮೊದಲು, ಖೊಮೇನಿಯಿ ಅವರ ಮೃತದೇಹದ ವಿಡಿಯೋಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತೋರಿಸಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ಹೇಳಿಕೊಂಡಿದ್ದವು.
ಅಯಾತುಲ್ಲಾ ಅಲಿ ಖೊಮೇನಿಯಿ ಯಾರು?
೧೯೮೯ ರಲ್ಲಿ ರುಹೊಲ್ಲಾ ಖೊಮೇನಿಯಿ ಅವರ ನಿಧನದ ನಂತರ ಅಯಾತುಲ್ಲಾ ಅಲಿ ಖೊಮೇನಿಯಿ ಅವರು ಇರಾನ್ ನ ಸರ್ವೋಚ್ಚ ಪದವಿಯ ಅಧಿಕಾರ ವಹಿಸಿಕೊಂಡರು. ಆರಂಭದ ದಿನಗಳಲ್ಲಿ ಖೊಮೇನಿಯಿ ಅವರನ್ನು ‘ಹಿರಿಯ ಧರ್ಮಗುರುಗಳ ಗುಣಗಳಿಲ್ಲದ ನಾಯಕ’ ಎಂದು ನೋಡಲಾಗುತ್ತಿತ್ತು. ಆದರೆ ಕಾಲಾನಂತರದಲ್ಲಿ ಅವರು ವ್ಯಾಪಕ ಅಧಿಕಾರಗಳನ್ನು ಕ್ರೋಢೀಕರಿಸಿದರು, ಸಶಸ್ತ್ರ ಪಡೆಗಳ ನೇತೃತ್ವ ವಹಿಸಿದರು, ಹಿರಿಯ ನ್ಯಾಯಾಂಗ ಮತ್ತು ಭದ್ರತಾ ಅಧಿಕಾರಿಗಳನ್ನು ನೇಮಿಸಿದರು, ಅಷ್ಟೇ ಅಲ್ಲದೆ ಇರಾನ್ ನ ಅಣುಶಕ್ತಿ ಮತ್ತು ವಿದೇಶಾಂಗ ನೀತಿಗಳಿಗೆ ಹೊಸ ರೂಪ ನೀಡಿದರು.
ಅಮೆರಿಕವನ್ನು ‘ಮಹಾ ಸೈತಾನ’ ಎಂದು ಕರೆದಿದ್ದ ಖೊಮೇನಿಯಿ
ಖೊಮೇನಿಯಿ ತಮ್ಮ ಸಂಪೂರ್ಣ ಅಧಿಕಾರಾವಧಿಯಲ್ಲಿ ಅಮೆರಿಕವನ್ನು ‘ಮಹಾ ಸೈತಾನ’ ಎಂದು ಬಣ್ಣಿಸಿದ್ದಾರೆ. ಇರಾನ್ ನ ಯುರೇನಿಯಂ ಪುಷ್ಟೀಕರಣವನ್ನು ತಡೆಯುವ ಪಾಶ್ಚಿಮಾತ್ಯ ಶಕ್ತಿಗಳ ಎಲ್ಲಾ ಪ್ರಯತ್ನಗಳನ್ನು ಅವರು ವಿಫಲಗೊಳಿಸಿದ್ದರು. ಅಧ್ಯಕ್ಷ ಹಸನ್ ರೂಹಾನಿ ಅವರ ನೇತೃತ್ವದಲ್ಲಿ ೨೦೧೫ ರ ಪರಮಾಣು ಒಪ್ಪಂದಕ್ಕೆ ಖೊಮೇನಿಯಿ ಅವರು ಎಚ್ಚರಿಕೆಯ ಬೆಂಬಲ ನೀಡಿದ್ದರು. ೨೦೧೮ ರಲ್ಲಿ ಅಮೆರಿಕ, ಇರಾನ್ ಮೇಲೆ ನಿರ್ಬಂಧಗಳನ್ನು ಹೇರಿದ ನಂತರ ಅಮೆರಿಕ ಮತ್ತು ಖೊಮೇನಿಯಿ ನಡುವಿನ ಅವಿಶ್ವಾಸ ಹೆಚ್ಚಾಯಿತು. ಮುಂದೆ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅಧಿಕಾರಾವಧಿಯಲ್ಲಿ ಖೊಮೇನಿಯಿ ಅವರ ನಿಲುವು ಮತ್ತಷ್ಟು ಕಠಿಣವಾಯಿತು.
ಇರಾನ್ ಜನತೆಯಲ್ಲಿ ಹೆಚ್ಚುತ್ತಿರುವ ಅಸಮಾಧಾನ!

ಅನೇಕ ವರ್ಷಗಳಿಂದ ಇರಾನ್ ನಲ್ಲಿ ಪದೇ-ಪದೇ ಅಶಾಂತಿ ಕಂಡುಬಂದಿದೆ. ೨೦೦೯ರ ಚುನಾವಣಾ ಪ್ರತಿಭಟನೆಯಿಂದ ಹಿಡಿದು ೨೦೨೨ ರ ಮಹಿಳಾ ಕಾರ್ಯಕರ್ತೆ ಮಹಸಾ ಅಮಿನಿಯ ಕಸ್ಟಡಿ ಸಾವಿನ ನಂತರದ ಪ್ರತಿಭಟನೆಗಳವರೆಗೆ, ಇರಾನ್ ನ ಆಡಳಿತ ವ್ಯವಸ್ಥೆಯು ಜನಸಾಮಾನ್ಯರಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿತು. ಸರಕಾರದ ವಿರುದ್ಧದ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಖೊಮೇನಿಯಿ ಅವರ ನೇತೃತ್ವದಲ್ಲಿ ಜನರಿಗೆ ಮರಣದಂಡನೆ ನೀಡುವುದು ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕುವಂತಹ ಕೃತ್ಯಗಳು ನಡೆದಿದ್ದವು.
ಭಯೋತ್ಪಾದಕ ಶಕ್ತಿಗಳಿಗೆ ಬಹಿರಂಗ ಬೆಂಬಲ!
ಖೊಮೇನಿಯಿ ತಮ್ಮ ಅಧಿಕಾರಾವಧಿಯಲ್ಲಿ ಲೆಬನಾನ್ ನ ಹಿಜ್ಬುಲ್ಲಾ, ಇಸ್ರೇಲ್ ನ ಹಮಾಸ್ ಮತ್ತು ಯೆಮನ್ ನ ಹೌತಿಗಳಂತಹ ಭಯೋತ್ಪಾದಕ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ಇದರಿಂದಾಗಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚಾಯಿತು. ೨೦೨೪ ಹಾಗೂ ೨೦೨೫ ರಲ್ಲಿ ನೇರ ಯುದ್ಧಕ್ಕೆ ಕಾರಣವಾಯಿತು. ಕೊನೆಗೆ ಮಾರ್ಚ್ ೧, ೨೦೨೬ ರಂದು ಖೊಮೇನಿಯಿ ಯುಗದ ಅಂತ್ಯವಾಯಿತು.
ಇರಾನ್ ನಲ್ಲಿ ೪೦ ದಿನಗಳ ಶೋಕಾಚರಣೆ !
ಖೊಮೇನಿಯಿ ಅವರ ನಿಧನದ ಹಿನ್ನೆಲೆಯಲ್ಲಿ ಇರಾನ್ ೪೦ ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಇದರೊಂದಿಗೆ ಇರಾನ್ ನ ‘ರಾಷ್ಟ್ರೀಯ ಭದ್ರತಾ ಮಂಡಳಿ’ಯು ಪ್ರತೀಕಾರವಾಗಿ ದೊಡ್ಡ ಬಂಡಾಯದ ಎಚ್ಚರಿಕೆಯನ್ನು ಸಹ ನೀಡಿದೆ.
ದುಬೈನಲ್ಲಿ ಸಿಲುಕಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುದುಬೈ – ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಸಮಯದಲ್ಲಿ ಇರಾನ್ ದುಬೈನ ಹಲವು ಸ್ಥಳಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಒಲಿಂಪಿಕ್ ವಿಜೇತೆ ಪಿ.ವಿ. ಸಿಂಧು ಈ ದಾಳಿಯ ಸಮಯದಲ್ಲಿ ದುಬೈ ವಿಮಾನ ನಿಲ್ದಾಣದಲ್ಲಿದ್ದರು. ಮಾರ್ಚ್ ೧ ರಂದು ಪಿ.ವಿ. ಸಿಂಧು ಅವರು ದುಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗಿದ್ದ ಸ್ಥಳದ ಬಳಿಯೇ ಸ್ಫೋಟ ಸಂಭವಿಸಿದೆ. ಈ ಭೀಕರ ಪ್ರಸಂಗದ ಮಾಹಿತಿಯನ್ನು ಸಿಂಧು ಅವರು ‘ಎಕ್ಸ್’ ಮೂಲಕ ಹಂಚಿಕೊಂಡಿದ್ದಾರೆ. ಅವರು ಮತ್ತು ಅವರ ಸಹೋದ್ಯೋಗಿಗಳು ಸದ್ಯ ಸುರಕ್ಷಿತ ಸ್ಥಳದಲ್ಲಿದ್ದು, ಭಾರತಕ್ಕೆ ಮರಳಲು ಕಾಯುತ್ತಿದ್ದಾರೆ.
|
‘ಆಲ್ ಇಂಡಿಯಾ ಶಿಯಾ ಪರ್ಸನಲ್ ಲಾ ಬೋರ್ಡ್’ನಿಂದ ೩ ದಿನಗಳ ಶೋಕಾಚರಣೆ ಘೋಷಣೆ!
‘ಆಲ್ ಇಂಡಿಯಾ ಶಿಯಾ ಪರ್ಸನಲ್ ಲಾ ಬೋರ್ಡ್’ ೩ ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಭಾರತೀಯ ಮುಸಲ್ಮಾನರೆಲ್ಲರೂ ಕಪ್ಪು ಬಟ್ಟೆಗಳನ್ನು ಧರಿಸುವ ಮೂಲಕ ಮತ್ತು ತಮ್ಮ ಮನೆಗಳ ಮೇಲೆ ಕಪ್ಪು ಧ್ವಜಗಳನ್ನು ಹಾರಿಸುವ ಮೂಲಕ ಈ ಘಟನೆಯನ್ನು ಪ್ರತಿಭಟಿಸಬೇಕೆಂದು ಮಂಡಳಿಯು ಕರೆ ನೀಡಿದೆ.
ಸಂಪಾದಕೀಯ ನಿಲುವುಭಾರತದ ಮತಾಂಧ ಮುಸಲ್ಮಾನರು ಶೋಕಾಚರಣೆಯನ್ನು ಆಚರಿಸುವಾಗ ಏನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಈಗ ಭಾರತದಲ್ಲಿನ ಹಿಂದೂಗಳ ರಕ್ಷಣೆಯ ಜವಾಬ್ದಾರಿಯನ್ನು ಸರಕಾರ ತೆಗೆದುಕೊಳ್ಳುತ್ತದೆಯೇ ಅಥವಾ ಹಿಂದೂಗಳೇ ಆತ್ಮರಕ್ಷಣೆಗಾಗಿ ಸಿದ್ಧರಾಗಿರಬೇಕೇ? ಇದಕ್ಕೆ ಯಾರು ಉತ್ತರ ನೀಡುತ್ತಾರೆ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation