|

ಬಾಗಲಕೋಟೆ – ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ನಿಮಿತ್ತ ಹೊರಡಿಸಲಾದ ಮೆರವಣಿಗೆಯ ಮೇಲೆ ಕಲ್ಲು ಮತ್ತು ಚಪ್ಪಲಿಗಳನ್ನು ಎಸೆದಿದ್ದರಿಂದ ನಗರದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಈ ಘಟನೆ ನಡೆದು ೭ ದಿನಗಳು ಕಳೆದರೂ ಪರಿಸ್ಥಿತಿ ಇನ್ನೂ ಶಾಂತವಾಗಿಲ್ಲ. ಫೆಬ್ರವರಿ ೨೭ ರಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹಿಂದೂಗಳು ಬೃಹತ್ ಪ್ರತಿಭಟನೆ ನಡೆಸಿದರು. ಆ ಸಮಯದಲ್ಲಿ ಬಾಗಲಕೋಟೆ ಪೊಲೀಸರು ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಪ್ರಯತ್ನಿಸಿದಾಗ, ಕಿಲ್ಲಾ ಓಣಿಯ ನಾಗರಿಕರು ಮತ್ತು ಮಹಿಳೆಯರು ಅದನ್ನು ವಿರೋಧಿಸಿ ಪೊಲೀಸರ ದಾರಿಯನ್ನು ತಡೆದರು. ಮುತ್ತು ಮಾಗಿ ಎಂಬ ಯುವಕನನ್ನು ವಶಕ್ಕೆ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದರು. ‘ಪೊಲೀಸರು ನಿರಪರಾಧಿಗಳನ್ನು ಬಂಧಿಸುತ್ತಿದ್ದಾರೆ’ ಎಂದು ಆರೋಪಿಸಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹಿಳೆಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
೧. ಬಾಗಲಕೋಟೆಯ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತಪ್ತ ನಾಗರಿಕರನ್ನು ಸಮಾಧಾನಪಡಿಸಿದರು. ಈ ವೇಳೆ ಮಹಿಳೆಯರು ಮತ್ತು ಹಿಂದೂ ಕಾರ್ಯಕರ್ತರು ‘ಪೊಲೀಸ್ ಅಧೀಕ್ಷಕರು ಸ್ವತಃ ಘಟನಾ ಸ್ಥಳಕ್ಕೆ ಬರಬೇಕು ಮತ್ತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಚರಂತಿಮಠ ಅವರು ಪೊಲೀಸ್ ಅಧೀಕ್ಷಕ ಸಿದ್ಧಾರ್ಥ್ ಗೋಯಲ ಅವರನ್ನು ಸಂಪರ್ಕಿಸಿ, ‘ಬಂಧನದ ಹೆಸರಿನಲ್ಲಿ ಬಡವರಿಗೆ ತೊಂದರೆ ನೀಡಬೇಡಿ. ನಾನು ಜನರನ್ನು ಸಮಾಧಾನಪಡಿಸುತ್ತಿದ್ದೇನೆ. ನಿಮ್ಮ ಪೊಲೀಸರ ಇಂತಹ ವರ್ತನೆ ಸರಿಯಲ್ಲ’ ಎಂದು ಎಚ್ಚರಿಸಿದರು.
೨. ಘಟನಾ ಸ್ಥಳದಲ್ಲಿದ್ದ ಪೊಲೀಸ ಉಪಅಧೀಕ್ಷಕರ ಪ್ರಶಾಂತ ಮುನ್ನೋಳಿ ಅವರೊಂದಿಗೆ ಚರಂತಿಮಠ ಅವರು ಸಂವಾದ ನಡೆಸಿದರು. ಅವರು ಪೊಲೀಸರಿಗೆ, ‘‘ಪರಿಸ್ಥಿತಿ ಶಾಂತವಾಗಿರುವಾಗ ಪೊಲೀಸರು ಇಲ್ಲಿಗೆ ಬರುವ ಅಗತ್ಯವೇನಿತ್ತು? ಹುಡುಗನ ತಂದೆ-ತಾಯಿ ಇಲ್ಲಿದ್ದಾರೆ, ಮಹಿಳೆಯರ ಬಟ್ಟೆಗಳು ಹರಿದಿವೆ. ನೀವು ಹೀಗೆ ವರ್ತಿಸಿದರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ. ಇದರಿಂದ ಶಾಂತಿ ಸ್ಥಾಪನೆಯಾಗುವುದಿಲ್ಲ’’ಎಂದರು. ಅವರು ಯುವಕನನ್ನು ಮನೆಗೆ ಬಿಡುವಂತೆ ತಿಳಿಸಿ, ತಾವು ಸ್ವತಃ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡುವುದಾಗಿ ಹೇಳಿದರು. ನಂತರ ನಾಗರಿಕರಿಗೆ ತಮ್ಮ ತಮ್ಮ ಮನೆಗಳಿಗೆ ತೆರಳುವಂತೆ ವಿನಂತಿಸಿದರು.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ