ಸಾಮಾನ್ಯ ವರ್ಗದ ನೌಕರನಿಗೆ ಹಕ್ಕು ದೊರಕಿಸಿಕೊಟ್ಟ ಪಂಜಾಬ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಮಹತ್ವಪೂರ್ಣ ತೀರ್ಪು !

ಪಂಜಾಬ ಮತ್ತು ಹರಿಯಾಣಾ ಉಚ್ಚನ್ಯಾಯಾಲಯ

೧. ಸೇವಾ ಹಿರಿತನಕ್ಕನುಸಾರ ಅರ್ಹನಾಗಿದ್ದ ಸಾಮಾನ್ಯ ವರ್ಗದ ನೌಕರನನ್ನು ಕಡೆಗಣಿಸಿ ಪರಿಶಿಷ್ಟ ಜಾತಿಯ ನೌಕರನಿಗೆ ಬಡ್ತಿ

ಸತತವಾಗಿ ಕೇವಲ ಪರಿಶಿಷ್ಟ ಜಾತಿಯ ಜನರಿಗೆ ಬಡ್ತಿ ನೀಡುವುದು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಅದರಿಂದ ದೂರವಿಡುವುದು, ಇದು ರಾಜ್ಯಸಂವಿಧಾನದ ಕಲಂ ೧೪ ಮತ್ತು ೧೬ ರ ಪ್ರಕಾರ ಅನ್ಯಾಯವಾಗಿದೆ. ಬಡ್ತಿಯ ಕೆಲವು ಹುದ್ದೆಗಳಿಗೆ ಮೀಸಲಾತಿ ಇಲ್ಲದಿರುವುದರಿಂದ, ಅಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದವರು ಸೇರಿದಂತೆ ಇತರ ಹಿಂದುಳಿದ ವರ್ಗದವರೂ ಸಹ ಬಡ್ತಿಗೆ ಅರ್ಹರಾಗಿರುತ್ತಾರೆ. ಈ ಜಾಗದಲ್ಲಿ ನೌಕರನ ಕಾರ್ಯಾಲಯದ ಹಿರಿತನ ಮತ್ತು ಗುಣಮಟ್ಟವನ್ನು ನೋಡಿ ಬಡ್ತಿ ನೀಡಲಾಗುತ್ತದೆ. ಈ ಪ್ರಕರಣದಲ್ಲಿ, ಮೀಸಲಾತಿ ಇಲ್ಲದ ಬಡ್ತಿಯ ಸ್ಥಾನದಲ್ಲಿಯೂ ಕೇವಲ ಪರಿಶಿಷ್ಟ ಜಾತಿಯ ನೌಕರನಿಗೆ ಬಡ್ತಿ ನೀಡಲಾಯಿತು ಮತ್ತು ಸಾಮಾನ್ಯ ವರ್ಗದ ವ್ಯಕ್ತಿಯನ್ನು ವಂಚಿಸಲಾಯಿತು. ಅದರ ನಂತರ ಆ ನೌಕರನು ಪಂಜಾಬ ಮತ್ತು ಹರಿಯಾಣ ಉಚ್ಚ ನ್ಯಾಯಾಲಯಕ್ಕೆ ಹೋದನು. ಅಲ್ಲಿ ಉಚ್ಚ ನ್ಯಾಯಾಲಯವು ಸಾಮಾನ್ಯ ವರ್ಗದ ಬಡ್ತಿಯ ಸ್ಥಾನದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಗೆ ನೀಡಿದ ಬಡ್ತಿಯ ಆದೇಶವನ್ನು ರದ್ದುಗೊಳಿಸಿತು ಮತ್ತು ಈ ಜಾಗವನ್ನು ಸೇವಾ ಹಿರಿತನ ಮತ್ತು ಇತರ ಗುಣಮಟ್ಟದ ಆಧಾರದ ಮೇಲೆ ಸಾಮಾನ್ಯ ವ್ಯಕ್ತಿಗೆ ನೀಡಬೇಕು ಎಂದು ಆದೇಶಿಸಿತು.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೨. ಬಡ್ತಿಯ ಪ್ರಕರಣ

ಅರ್ಜಿದಾರನು ೧೯೭೪ ರಲ್ಲಿ ಕಾಲುವೆಯ ಗ್ರಾಮಾಧಿಕಾರಿ (ಹಳ್ಳಿಯಲ್ಲಿನ ಸರಕಾರಿ ಅಧಿಕಾರಿ) ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡನು. ಅವನಿಗೆ ೧೯೭೯ ರಲ್ಲಿ ಸಹಾಯಕನಾಗಿ ಬಡ್ತಿ ದೊರೆಯಿತು. ೧೯೯೬ ರಲ್ಲಿ ಗುಮಾಸ್ತ (ಕ್ಲರ್ಕ್) ಆಗಿ ಬಡ್ತಿ ದೊರೆಯಿತು ಮತ್ತು ೨೦೧೦ ರಲ್ಲಿ ಜಿಲ್ಲಾ ಮಟ್ಟದ ಅಧಿಕಾರಿ ಆಗಿ ಬಡ್ತಿ ದೊರೆಯಿತು. ಆದರೆ, ಅವನ ಪರಿಶಿಷ್ಟ ಜಾತಿಯ ಕಿರಿಯ ಸಹೋದ್ಯೋಗಿ ಸಹ ೧೯೭೪ ರಲ್ಲಿ ಕೆಲಸಕ್ಕೆ ನೇಮಕಗೊಂಡಿದ್ದನು. ಹಾಗಿದ್ದರೂ, ಅವನಿಗೆ ಸಹಾಯಕ ಕಂದಾಯ ಗುಮಾಸ್ತ, ಕಂದಾಯ ಗುಮಾಸ್ತ ಮತ್ತು ಜಿಲ್ಲಾ ಅಧಿಕಾರಿ ಹುದ್ದೆಗಳಲ್ಲಿ ಅನುಕ್ರಮವಾಗಿ ೧೯೭೯, ೧೯೮೨, ೧೯೯೨ ರಲ್ಲಿ ಬಡ್ತಿಗಳು ದೊರೆತವು ಮತ್ತು ೨೦೧೨ ರಲ್ಲಿ ಜಿಲ್ಲಾದಾರನಾಗಿ ಅವನು ನಿವೃತ್ತನೂ ಆದನು. ಅವನಿಗೆ ಮೀಸಲಾತಿಯ ಆಧಾರದ ಮೇಲೆ, ಅಂದರೆ ಪರಿಶಿಷ್ಟ ಜಾತಿಯ ವ್ಯಕ್ತಿ ಎಂದು ಬಡ್ತಿ ನೀಡಲಾಗಿತ್ತು. ಅರ್ಜಿದಾರನ ಹೇಳಿಕೆಯೇನೆಂದರೆ, ಅವನು ೨೦೧೦ ರಲ್ಲಿ ಜಿಲ್ಲಾದಾರ ಹುದ್ದೆಗೆ ಬಡ್ತಿ ಪಡೆದಿದ್ದನು ಮತ್ತು ಪರಿಶಿಷ್ಟ ಜಾತಿಯ ವ್ಯಕ್ತಿ ೧೯೯೨ ರಲ್ಲಿ ಬಡ್ತಿಗೆ ಅರ್ಹನಾಗಿದ್ದನು. ಕಚೇರಿಯು ಇಬ್ಬರಿಗೂ ಬಡ್ತಿ ನೀಡಿತು; ಆದರೆ, ಅದರ ನಂತರದ ಬಡ್ತಿಗಾಗಿ ಅವರು ಜಿಲ್ಲಾದಾರನ ಹಿರಿತನದ ಪಟ್ಟಿಯನ್ನು ತಯಾರಿಸದೆ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಆ ಹುದ್ದೆಗೆ ಹಕ್ಕಿದೆ ಎಂದು ಘೋಷಿಸಿತು.

ಈ ಪ್ರಕರಣದಲ್ಲಿ ಬಡ್ತಿ ಪಡೆದ ನೌಕರನು ಸಾಮಾನ್ಯ ವರ್ಗದ ನೌಕರನ ನಂತರ ಕೆಲಸಕ್ಕೆ ಸೇರಿಕೊಂಡರೂ, ಅವನಿಗೆ ಬಡ್ತಿ ದೊರೆತ ಕಾರಣ ಅವನು ಮತ್ತು ಅರ್ಜಿದಾರನು ಒಂದೇ ಹುದ್ದೆಗೆ ಬಂದರು. ಬಡ್ತಿ ನೀಡುವ ವಿಷಯ ಬಂದಾಗ, ಸಾಮಾನ್ಯ ವರ್ಗದ ವ್ಯಕ್ತಿಗೆ ಅವನ ಸೇವಾ ಹಿರಿತನದ ಮತ್ತು ಗುಣಮಟ್ಟದ ಪ್ರಕಾರ ಬಡ್ತಿ ನೀಡಬೇಕು. ಬಡ್ತಿ ನೀಡುವಾಗ ಇತರ ಮೀಸಲಾತಿ ವರ್ಗದವರನ್ನೂ ಸಹ ಪರಿಗಣಿಸಿ ಅವರಿಗೆ ಬಡ್ತಿ ನೀಡಬಹುದು. ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವ್ಯಕ್ತಿಗೆ ಬಡ್ತಿ ನೀಡುವುದು ಕಾನೂನಿಗೆ ಸಮ್ಮತವಲ್ಲ. ಇಲ್ಲಿ ‘ಕ್ಯಾಚ್ ಅಪ್’ ನಿಯಮದ ಪ್ರಕಾರ ಸಾಮಾನ್ಯ ವರ್ಗದ ವ್ಯಕ್ತಿಗಳಿಗೆ ಬಡ್ತಿ ನೀಡಬೇಕು. ಕೇವಲ ಪರಿಶಿಷ್ಟ ಜಾತಿಯವರು ಎಂಬ ಕಾರಣಕ್ಕೆ ಅವರಿಗೆ ಎರಡನೇ ಬಾರಿ ಬಡ್ತಿ ನೀಡುವುದನ್ನು ‘ಹಿಮ್ಮುಖ ತಾರತಮ್ಯ’ (ರಿವರ್ಸ್ ಡಿಸ್ಕ್ರಿಮಿನೇಶನ್) ಎನ್ನುತ್ತಾರೆ ಮತ್ತು ಹಾಗೆ ಮಾಡುವುದು ರಾಜ್ಯಸಂವಿಧಾನದ ಕಲಂ ೧೪ ಮತ್ತು ೧೬ ರ ಉಲ್ಲಂಘನೆ ಎಂದು ನ್ಯಾಯಾಲಯವು ತೀರ್ಮಾನಿಸಿತು.

ನ್ಯಾಯಕ್ಷೇತ್ರದಲ್ಲಿನ ವಾರ್ತೆಗಳ ವಿಶ್ಲೇಷಣೆ

೩. ಉಚ್ಚ ನ್ಯಾಯಾಲಯದಿಂದ ಸಾಮಾನ್ಯ ವರ್ಗದ ನೌಕರನಿಗೆ ನ್ಯಾಯ

ಅರ್ಜಿದಾರನು ಸರ್ವೋಚ್ಚ ನ್ಯಾಯಾಲಯದ ಕೆಲವು ತೀರ್ಪುಗಳನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದನು. ಈ ತೀರ್ಪುಗಳಲ್ಲಿ, ರಾಜ್ಯಸಂವಿಧಾನದ ಪ್ರಕಾರ ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಅಗತ್ಯ; ಆದರೆ ಅದನ್ನು ನೀಡುವಾಗ ಪ್ರಜಾಪ್ರಭುತ್ವೀಕರಣ ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆ ಎಂಬ ಎರಡು ಅಂಶಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ರಾಜ್ಯಸಂವಿಧಾನದ ಕಲಂ ೩೩೫ ಹೀಗೆ ಹೇಳುತ್ತದೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಬಡ್ತಿ ನೀಡಿ; ಆದರೆ ಅದನ್ನು ನೀಡುವಾಗ ಆಡಳಿತಾತ್ಮಕ ಕಾರ್ಯಕ್ಷಮತೆಯ ಅಂಶ ವನ್ನು ಮರೆಯಬೇಡಿ. ಆದ್ದರಿಂದ, ಹಿರಿತನದ ಪಟ್ಟಿಯಲ್ಲಿರುವ ಅರ್ಜಿದಾರನು ತನ್ನ ಪರಿಶಿಷ್ಟ ಜಾತಿಯ ಕಿರಿಯ ಸಹೋದ್ಯೋಗಿ ಪಡೆದ ಜಿಲ್ಲಾದಾರ ಹುದ್ದೆಯ ಬಡ್ತಿಗೆ ತಡವಾಗಿಯಾದರೂ ನೇಮಕಗೊಂಡನು. ಇಬ್ಬರೂ ಜಿಲ್ಲಾದಾರ ಹುದ್ದೆಯಲ್ಲಿರುವಾಗ, ಅವರ ಒಗ್ಗೂಡಿದ ಸೇವಾ ಹಿರಿತನದ ಪಟ್ಟಿಯನ್ನು ತಯಾರಿಸುವುದು ಅವಶ್ಯಕವಾಗಿದೆ.

ಈ ಸಮಯದಲ್ಲಿ ಕಚೇರಿಯವಾದ ಏನೆಂದರೆ, ಜಿಲ್ಲಾದಾರ ಹುದ್ದೆಗೆ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಬಡ್ತಿ ದೊರೆಯಿತು. ಅರ್ಜಿದಾರನು ಹಿರಿತನದ ಪಟ್ಟಿಯಲ್ಲಿ ಹಿರಿಯನಾಗಿದ್ದರೂ, ಅವನಿಗೆ ಜಿಲ್ಲಾದಾರ ಹುದ್ದೆಯ ಬಡ್ತಿ ತಡವಾಗಿ ದೊರಕಿತು. ಆದ್ದರಿಂದ ಅವನ ಒಟ್ಟಾರೆ ಸೇವಾ ಹಿರಿತನವಿರಲು ಸಾಧ್ಯವಿಲ್ಲ.ಇದಕ್ಕೆ ಉಚ್ಚ ನ್ಯಾಯಾಲಯವು, ‘ಇದು ಕೇವಲ ಹೆಚ್ಚು ಹಣ ಪಡೆಯುವ ವಿಷಯವಲ್ಲ, ಆದರೆ ನೌಕರಿಯಲ್ಲಿ ಪ್ರಾಮಾಣಿಕವಾಗಿ ಮತ್ತು ಗುಣಮಟ್ಟದ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿಯ ಗೌರವದ ವಿಷಯವಾಗಿದೆ. ತಾಂತ್ರಿಕ ಕಾರಣಗಳನ್ನು ನೀಡಿ ಅವನನ್ನು ವಂಚಿಸುವುದು ತಪ್ಪು. ಆ ಕಾರಣದಿಂದ ಅರ್ಜಿದಾರನ ಹಕ್ಕನ್ನು ಹೀಗೆ ಕಸಿದುಕೊಳ್ಳಲು (ಮುಚ್ಚಿಡಲು) ಸಾಧ್ಯವಿಲ್ಲ,’ ಎಂದು ಹೇಳಿತು. ಅನಂತರ ಉಚ್ಚ ನ್ಯಾಯಾಲಯವು ಅವನನ್ನು ಪರಿಶಿಷ್ಟ ಜಾತಿಯ ವ್ಯಕ್ತಿಗಿಂತ ಹಿರಿತನದ ಪಟ್ಟಿಯಲ್ಲಿ ಹಿರಿಯನೆಂದು ತೋರಿಸಿತು ಮತ್ತು ಅವನಿಗೆ ಬೇಕಾದ ’ಪೇ ಸ್ಕೇಲ್’ (ವೇತನ ಶ್ರೇಣಿ) ಅನ್ನು ಒದಗಿಸಿತು. ಅನಂತರ ಈ ಅರ್ಜಿಯು ಸ್ವೀಕೃತವಾಯಿತು.

 ‘ಸಾಮಾನ್ಯ ವರ್ಗದ ವ್ಯಕ್ತಿಯು ಸೇವಾ ಹಿರಿತನದಲ್ಲಿ ಹಿರಿಯನಾಗಿದ್ದನು ಮತ್ತು ಪರಿಶಿಷ್ಟ ಜಾತಿಯ ವ್ಯಕ್ತಿಯು ಕಿರಿಯನಾಗಿದ್ದನು. ಬಡ್ತಿಯು ಮೀಸಲಾತಿಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಮೊದಲೇ ದೊರೆತರೂ, ಇಬ್ಬರೂ ಆ ಹುದ್ದೆಗೆ ಬಂದ ನಂತರ, ಒಗ್ಗೂಡಿದ ಹಿರಿತನದ ಪಟ್ಟಿ ಮತ್ತು ಸಾಮಾನ್ಯ ಹಿರಿತನದ ಪಟ್ಟಿಯಲ್ಲಿ ಸಾಮಾನ್ಯ ವ್ಯಕ್ತಿಯ ಹಿರಿತನವನ್ನು ನಿರಾಕರಿಸಲು ಸಾಧ್ಯವಿಲ್ಲ,’ ಎಂದು ನ್ಯಾಯಾಲಯವು ಘೋಷಿಸಿತು.

ಶ್ರೀಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೨.೧೦.೨೦೨೫)