ಪ್ರಧಾನಿ ನರೇಂದ್ರ ಮೋದಿ ಅವರ ‘ಇನ್‌ಸ್ಟಾಗ್ರಾಮ್’ ಅನುಯಾಯಿಗಳ ಸಂಖ್ಯೆ ೧೦ ಕೋಟಿ

ಇಂತಹ ಸಾಧನೆ ಮಾಡಿದ ವಿಶ್ವದ ಮೊದಲ ರಾಜಕೀಯ ನಾಯಕ

ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು, ಅವರಿಗೆ ಕೋಟ್ಯಂತರ ಅನುಯಾಯಿಗಳಿದ್ದಾರೆ (ಫಾಲೋವರ್ಸ್). ಇತ್ತೀಚೆಗಷ್ಟೇ ಅವರ ‘ಇನ್‌ಸ್ಟಾಗ್ರಾಮ್’ ನ ಖಾತೆಯು ೧೦ ಕೋಟಿ ಅನುಯಾಯಿಗಳ ಸಂಖ್ಯೆಯನ್ನು ದಾಟಿದೆ. ‘ಇನ್‌ಸ್ಟಾಗ್ರಾಮ್’ನಲ್ಲಿ ಇಷ್ಟೊಂದು ಅನುಯಾಯಿಗಳನ್ನು ಹೊಂದಿರುವ ವಿಶ್ವದ ಮೊದಲ ರಾಜಕೀಯ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ಪಾತ್ರರಾಗಿದ್ದಾರೆ.

೧. ಅನುಯಾಯಿಗಳ ಸಂಖ್ಯೆಯಲ್ಲಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೂ ಹಿಂದಿಕ್ಕಿದ್ದಾರೆ. ಮೋದಿ ಅವರ ಅನುಯಾಯಿಗಳ ಸಂಖ್ಯೆಯು ಟ್ರಂಪ್ ಅವರಿಗಿಂತ ಎರಡರಷ್ಟು ಹೆಚ್ಚಿದೆ. ಟ್ರಂಪ್ ಅವರು ೪ ಕೋಟಿ ೩೨ ಲಕ್ಷ ಅನುಯಾಯಿಗಳನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.

​೨. ವಿಶ್ವದಲ್ಲಿ ೫ ಪ್ರಮುಖ ನಾಯಕರ ಒಟ್ಟು ಅನುಯಾಯಿಗಳ ಸಂಖ್ಯೆಯು ಪ್ರಧಾನಿ ಮೋದಿ ಅವರ ಅನುಯಾಯಿಗಳ ಸಂಖ್ಯೆಗಿಂತ ಕಡಿಮೆಯಿದೆ. ೨೦೧೪ ರಲ್ಲಿ ಮೋದಿ ಅವರು ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಅವರ ಅನುಯಾಯಿಗಳ ಸಂಖ್ಯೆ ೫೦ ಸಾವಿರಕ್ಕೆ ತಲುಪಿತ್ತು.