೧. ಆಧ್ಯಾತ್ಮಿಕ ಮಟ್ಟಕ್ಕನುಸಾರ ಪ್ರಾರಬ್ಧಭೋಗವನ್ನು ಭೋಗಿಸುವ ವ್ಯಕ್ತಿಯ ಸ್ಥಿತಿ
ಅ. ‘ಸಾಮಾನ್ಯ ವ್ಯಕ್ತಿಗೆ ತನ್ನ ಜೀವನದಲ್ಲಿ ಬರುವ ಪ್ರಾರಬ್ಧರೂಪಿ ತೊಂದರೆಗಳನ್ನು ಎದುರಿಸಲು ಸಾಧ್ಯ ಆಗುವುದಿಲ್ಲ. ಆದುದರಿಂದ ನಿರಾಶೆಗೆ ಹೋಗಿ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಆ. ಯಾವ ವ್ಯಕ್ತಿಯು ಸ್ವಲ್ಪಮಟ್ಟಿಗೆ ಸಾಧನೆ ಮಾಡುತ್ತಾನೋ, ಅವನು ದುಃಖಿತನಾಗಿಯೇ ಪ್ರಾರಬ್ಧವನ್ನು ಭೋಗಿಸಲು ಪ್ರಯತ್ನಿಸುತ್ತಾನೆ.
ಇ. ಯಾವ ಸಾಧಕನು ಉತ್ತಮ ಸಾಧನೆ ಮಾಡುತ್ತಾನೋ, ಅವನು ಸಹಜವಾಗಿ (ಸ್ವಾಭಾವಿಕವಾಗಿ) ಪ್ರಾರಬ್ಧವನ್ನು ಭೋಗಿಸುತ್ತಾನೆ.
ಈ. ಸಂತರು ಮಾತ್ರ ಅದೇ ಪ್ರಾರಬ್ಧವನ್ನು ಆನಂದದಿಂದ ಭೋಗಿಸುತ್ತಾರೆ.

ಅಂದರೆ ‘ಕೇವಲ ಉಚ್ಚ ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡ ನಂತರವೇ ಪ್ರಾರಬ್ಧರೂಪಿ ಭೋಗಗಳನ್ನು ಆನಂದದಿಂದ ಎದುರಿಸಲು ಸಾಧ್ಯವಾಗುತ್ತದೆ’, ಎಂಬುದು ಇದರಿಂದ ಸಿದ್ಧವಾಗುತ್ತದೆ.
೨. ವರ್ತಮಾನಕಾಲದಲ್ಲಿ ಸಾಧಕನು ಶಾರೀರಿಕ ಮತ್ತು ಕೌಟುಂಬಿಕ ಪ್ರಾರಬ್ಧವನ್ನು ವ್ಯಷ್ಟಿ ಸ್ತರದಲ್ಲಿ ಭೋಗಿಸುವುದು; ಆದರೆ ಸಮಷ್ಟಿ ರೂಪದ ಪ್ರಾರಬ್ಧವನ್ನು ಸಾಮೂಹಿಕ ರೂಪದಲ್ಲಿ ಭೋಗಿಸಬೇಕಾಗುವುದರಿಂದ ಸಾಧಕರು ಸಂಘಟಿತರಾಗಿದ್ದು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸುವುದು ಆವಶ್ಯಕವಾಗಿದೆ !
ವರ್ತಮಾನಕಾಲದಲ್ಲಿ ಸಾಧಕರಾದ ನಾವು ಶಾರೀರಿಕ ಮತ್ತು ಕೌಟುಂಬಿಕ ಪ್ರಾರಬ್ಧವನ್ನು ವ್ಯಷ್ಟಿ ಸ್ತರದಲ್ಲಿ ವೈಯಕ್ತಿಕವಾಗಿ ಭೋಗಿಸುತ್ತಿದ್ದೇವೆ; ಆದರೆ ಮುಂಬರುವ ಆಪತ್ಕಾಲದಲ್ಲಿ ನಮಗೆ ಸಮಷ್ಟಿ ರೂಪದ ಪ್ರಾರಬ್ಧವನ್ನು ಸಾಮೂಹಿಕವಾಗಿ ಭೋಗಿಸಬೇಕಾಗುತ್ತದೆ. ‘ಅತಿವೃಷ್ಟಿ, ಅನಾವೃಷ್ಟಿ, ಸಾಂಕ್ರಾಮಿಕ ರೋಗಗಳು, ಅರಾಜಕತೆ’ ಇತ್ಯಾದಿ ವಿಪತ್ತುಗಳು ‘ಸಮಷ್ಟಿ ರೂಪದ ಪ್ರಾರಬ್ಧ’ ಆಗಿರುವುದರಿಂದ ಆ ಪ್ರಾರಬ್ಧವನ್ನು ಪ್ರತ್ಯೇಕವಾಗಿದ್ದು ವೈಯಕ್ತಿಕ ಸ್ತರದಲ್ಲಿ ಭೋಗಿಸುವುದು ನಮಗೆ ಸಾಧ್ಯ ಆಗಲಾರದು. ಸಮಷ್ಟಿ ರೂಪದ ಪ್ರಾರಬ್ಧವನ್ನು ಭೋಗಿಸಲು ‘ಸಾಧಕರು ಸಂಘಟಿತರಾಗಿದ್ದು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಿಕೊಳ್ಳುವುದು’ ಇದನ್ನು ಹೊರತುಪಡಿಸಿ ಬೇರೆ ಯಾವುದೇ ಪರ್ಯಾಯವಿಲ್ಲ’, ಎಂಬುದನ್ನು ಗಮನದಲ್ಲಿಡಬೇಕು !’
– ಶ್ರೀ. ಗುರುಪ್ರಸಾದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೭), ಹುಬ್ಬಳ್ಳಿ (೧೮.೧೨.೨೦೨೫)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಅಡುಗೆಮನೆ
ಗಾಂಧಿವಾದದ ಮುಖವಾಡ ಕಳಚಿದ ಭಾರತ !