‘ದ ಕೇರಳ ಸ್ಟೋರಿ-೨’ ನಂತಹ ದ್ವೇಷಪೂರಿತ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ ಹೇಗೆ ನೀಡಲಾಗುತ್ತದೆ? – Kerala CM

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಶ್ನೆ

ತಿರುವನಂತಪುರಂ (ಕೇರಳ) – ‘ದ ಕೇರಳ ಸ್ಟೋರಿ’ ಚಿತ್ರದ ಎರಡನೇ ಭಾಗ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಮೊದಲ ಚಿತ್ರವನ್ನು ಉದ್ದೇಶಪೂರ್ವಕವಾಗಿ ನಿರ್ಮಿಸಲಾಗಿತ್ತು, ಅದರ ಮೂಲಕ ಕೇರಳ ವಿರೋಧಿ ದ್ವೇಷವನ್ನು ಹರಡುವ ಮತ್ತು ರಾಜ್ಯದ ಎಲ್ಲಾ ಧರ್ಮಗಳನ್ನು ಗೌರವಿಸುವ ಸಂಸ್ಕೃತಿಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗಿತ್ತು. ಸಮಾಜದಲ್ಲಿ ಒಡಕು ಮತ್ತು ದ್ವೇಷವನ್ನು ಉಂಟುಮಾಡುವ ಇಂತಹ ವಿಷಪೂರಿತ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಹೇಗೆ ಅನುಮತಿ ನೀಡಲಾಗುತ್ತದೆ? ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. 2022 ರಲ್ಲಿ ‘ದ ಕೇರಳ ಸ್ಟೋರಿ’ ಚಿತ್ರದ ಮೊದಲ ಭಾಗ ಬಿಡುಗಡೆಯಾಗಿತ್ತು. ಇದರಲ್ಲಿ ಹಿಂದೂ ಯುವತಿಯರನ್ನು ‘ಲವ್ ಜಿಹಾದ್’ ಮೂಲಕ ವಂಚಿಸಿ ಅವರನ್ನು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿರುವುದನ್ನು ತೋರಿಸಲಾಗಿತ್ತು. ಆಗಲೂ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗಿತ್ತು. ಈಗ ಇದರ ಎರಡನೇ ಭಾಗ ಬರುತ್ತಿದೆ. ಈ ಚಿತ್ರದ ನಿರ್ದೇಶಕರು ಸುದೀಪ್ತೋ ಸೇನ್ ಮತ್ತು ವಿಪುಲ್ ಶಾ ನಿರ್ಮಾಪಕರಾಗಿದ್ದಾರೆ.

ಮುಖ್ಯಮಂತ್ರಿ ವಿಜಯನ್ ಅವರು ಮಂಡಿಸಿದ ಅಂಶಗಳು!

೧. ಸಂಘ ಪರಿವಾರವು ಈ ಚಲನಚಿತ್ರದ ಕಥೆಯನ್ನು ಮುಂದೆ ಕೊಂಡೊಯ್ದು ಪ್ರಚಾರ ಮಾಡಿತು. ಪರಸ್ಪರ ಒಪ್ಪಿಗೆಯಿಂದ ನಡೆದ ವಿವಾಹಗಳನ್ನು ಸಹ ಬಲವಂತದ ಮತಾಂತರ ಮತ್ತು ಮತಾಂಧತೆಯ ಉದಾಹರಣೆಗಳಾಗಿ ತೋರಿಸಲಾಗುತ್ತಿದೆ. (ಈ ರೀತಿ ಅಸ್ಪಷ್ಟವಾಗಿ ಮಾತನಾಡಿ ತನ್ನದೇ ಆದ ಕಥೆಯನ್ನು ಹೇರುತ್ತಿರುವ ವಿಜಯನ್ ವಿರುದ್ಧ ಇಡೀ ಹಿಂದೂ ಸಮಾಜವು ಒಗ್ಗಟ್ಟಾಗಿ ನಿಲ್ಲುವುದು ಅವಶ್ಯಕ! – ಸಂಪಾದಕರು)

೨. ಕೇರಳದಲ್ಲಿ ಎಂದಿಗೂ ಕೋಮು ಗಲಭೆಗಳು ನಡೆದಿಲ್ಲ, ಇಲ್ಲಿ ಎಲ್ಲಾ ಸಮುದಾಯಗಳು ಪರಸ್ಪರ ಗೌರವವನ್ನು ಕಾಪಾಡಿಕೊಳ್ಳುತ್ತವೆ. (ಮೋಪ್ಲಾ ದಂಗೆಯನ್ನು ಯಾರು ಮತ್ತು ಏಕೆ ಮಾಡಿದರು? ಅದರ ಪರಿಣಾಮ ಏನಾಯಿತು ಎಂಬುದನ್ನು ವಿಜಯನ್ ಏಕೆ ಹೇಳುತ್ತಿಲ್ಲ? – ಸಂಪಾದಕರು) ಆದ್ದರಿಂದ ಕೆಲವರು ಕೇರಳದ ಕಡೆಗೆ ಅಸೂಯೆ ಹೊಂದಿದ್ದಾರೆ ಮತ್ತು ರಾಜ್ಯದಲ್ಲಿ ಶಾಂತಿ ಭಂಗ ಮಾಡಲು ಪ್ರಯತ್ನಿಸುತ್ತಿದ್ದಾರೆ. (ವಿಚಿತ್ರವೆಂದರೆ ‘ದ ಕೇರಳ ಸ್ಟೋರಿ-೨’ ಕೇರಳ ರಾಜ್ಯದ ಹೊರಗಿನ ಲವ್ ಜಿಹಾದ್ ಘಟನೆಗಳ ಆಧಾರಿತ ಚಲನ ಚಿತ್ರವಾಗಿದೆ ಎಂದು ಅದರ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಇದು ಮುಖ್ಯಮಂತ್ರಿ ಮಹಾಶಯರಿಗೆ ತಿಳಿದಿದೆಯೇ? – ಸಂಪಾದಕರು)

೩. ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂದು ಬಿಂಬಿಸುವ ಪ್ರಯತ್ನಗಳನ್ನು ನಾವೆಲ್ಲರೂ ಒಟ್ಟಾಗಿ ತಿರಸ್ಕರಿಸಬೇಕು. ಕೇರಳವು ಧಾರ್ಮಿಕ ಸಾಮರಸ್ಯದ ರಾಜ್ಯವಾಗಿದೆ, ಇಲ್ಲಿ ಸ್ಥಿರವಾದ ಪ್ರಗತಿಯಾಗುತ್ತಿದೆ ಮತ್ತು ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. (ಮುಸ್ಲಿಂ ಬಹುಸಂಖ್ಯಾತ ಮಲಪ್ಪುರಂ ಜಿಲ್ಲೆಯಲ್ಲಿ ಹಿಂದೂಗಳ ಸ್ಥಿತಿ ಏನಿದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ! – ಸಂಪಾದಕರು)

೪. ಈ ಸುಳ್ಳು ಪ್ರಚಾರದಿಂದ ರಾಜ್ಯದ ಎಲ್ಲಾ ಧರ್ಮಗಳನ್ನು ಗೌರವಿಸುವ ಸಂಸ್ಕೃತಿಯ ಅಡಿಪಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಜಾತ್ಯತೀತತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಬಲಪಡಿಸುವ ಮೂಲಕ ಈ ಅಸತ್ಯದ ಪ್ರತಿಪಾದನೆಗಳಿಗೆ ಪ್ರತ್ಯುತ್ತರ ನೀಡಬೇಕು ಎಂದು ಅವರು ಕರೆ ನೀಡಿದರು.

ಸಂಪಾದಕೀಯ ನಿಲುವು

  •  ‘ದ ಕೇರಳ ಸ್ಟೋರಿ’ ಚಲನ ಚಿತ್ರದ ಮೂಲಕ ಹಿಂದೂ ಯುವತಿಯರನ್ನು ಮುಸ್ಲಿಮರು ಹೇಗೆ ವಂಚಿಸುತ್ತಿದ್ದಾರೆ ಮತ್ತು ಲೈಂಗಿಕ ಶೋಷಣೆಯೊಂದಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಅವರನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ತೋರಿಸಲಾಗಿತ್ತು. ಇದು ಸತ್ಯ ಘಟನೆಗಳ ಆಧಾರದ ಮೇಲೆ ತೋರಿಸಲ್ಪಡುತ್ತಿದ್ದರೆ, ಭಯೋತ್ಪಾದಕರ ಬೆಂಬಲಿಗರಾಗಿರುವ ಪಿಣರಾಯಿ ವಿಜಯನ್ ಅವರಿಗೆ ತೊಂದರೆಯಾಗುವುದು ಸಹಜವೇ!
  • ಸಂವಿಧಾನವು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ನೀಡಿದೆ ಮತ್ತು ಪ್ರತಿಯೊಂದು ವಿಷಯಕ್ಕೂ ತನ್ನದೇ ಆದ ಕಾರ್ಯವಿಧಾನವಿದೆ. ಅದನ್ನು ಪಾಲಿಸಿ ಯಾರಾದರೂ ಸಿನಿಮಾ ನಿರ್ಮಿಸುತ್ತಿದ್ದರೆ ಮತ್ತು ಅದಕ್ಕೆ ಅನುಮತಿ ಸಿಗುತ್ತಿದ್ದರೆ, ಪಿಣರಾಯಿ ವಿಜಯನ್ ಅವರ ಹೊಟ್ಟೆಗೇಕೆ ಉರಿ?