
ಸಿಂಹಸ್ಥ ಕುಂಭಮೇಳಕ್ಕಾಗಿ ಉದ್ದೇಶಿತ ಮರಗಳನ್ನು ಕತ್ತರಿಸುವುದರ ಕುರಿತು ಕಪಟಿ ಪರಿಸರಪ್ರೇಮಿಗಳು ಶೋಕ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ಇವರಿಗೆ ಪ್ರಚೋದನೆ ನೀಡುತ್ತಿರುವವರು ಇನ್ನೊಂದೆಡೆ, ಚುನಾವಣಾ ಆಯೋಗವು ಮತದಾನವನ್ನು ಇಲೆಕ್ಟ್ರಾನಿಕ್ ಮತಯಂತ್ರಗಳ (ಇ.ವಿ.ಎಮ್.) ಮೂಲಕ ನಡೆಸದೆ ಹಳೆಯ ಪದ್ಧತಿಯಂತೆ, ಅಂದರೆ ಮತಪತ್ರಗಳನ್ನು ಬಳಸಿ ನಡೆಸಬೇಕು ಎಂದು ಬೊಬ್ಬೆ ಹಾಕುತ್ತಿದ್ದಾರೆ.
ಮತಪತ್ರಗಳಿಗಾಗಿ ಎಷ್ಟು ಮರಗಳನ್ನು ಕತ್ತರಿಸಬೇಕಾಗಬಹುದು ?
ಮತಪತ್ರಗಳನ್ನು ಕಾಗದದಿಂದ ತಯಾರಿಸಲಾಗುತ್ತದೆ. ಕಾಗದ ಬೇಕೆಂದರೆ ಮರಗಳನ್ನು ಕತ್ತರಿಸುವುದು ಅನಿವಾರ್ಯ ! ಜನರು ನಮ್ಮನ್ನು ತಿರಸ್ಕರಿಸಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳದೆ, ತಮ್ಮ ಸೋಲಿನ ಹತಾಶೆಯನ್ನು ‘ಇ.ವಿ.ಎಮ್.’ ಮೇಲೆ ಹಾಕುತ್ತಿರುವ ನಾಯಕರ ಹಠವನ್ನು ಪೂರೈಸಲು ಪ್ರತಿ ೫ ವರ್ಷಕ್ಕೊಮ್ಮೆ ಎಷ್ಟು ಮರಗಳನ್ನು ಕಡಿಯಬೇಕಾಗಬಹುದು ? ಎನ್ನುವುದನ್ನು ‘ಚಾಟ್ ಜಿಪಿಟಿ’ ಬಳಸಿ ನಾನು ತೆಗೆದ ಒಂದು ಸ್ಥೂಲ ಮತ್ತು ಕನಿಷ್ಟ ಅಂದಾಜು ಈ ಮುಂದಿನಂತಿದೆ:
೧. ಭಾರತದಲ್ಲಿ ಇಂದು ಮತದಾನಕ್ಕೆ ಅರ್ಹರಾಗಿರುವ ಅಂದಾಜು ಜನಸಂಖ್ಯೆ ೧೦೦ ಕೋಟಿ.
೨. ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಒಟ್ಟು ಸ್ಥಾನಗಳು ೨೯ ಲಕ್ಷ.
೩. ಒಂದು ಸ್ಥಾನಕ್ಕೆ ಸಾಧಾರಣ ೨೦ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರೆ, ಮುದ್ರಿಸಬೇಕಾದ ಒಂದು ಮತಪತ್ರದ ಆಕಾರವು ಸುಮಾರು ’ಎ೩’ ಆಕಾರದದಷ್ಟಿರುತ್ತದೆ.
೪. ಒಂದು ಚುನಾವಣೆಯಲ್ಲಿ ಪ್ರತಿ ಮತದಾರನಿಗೆ ಒಂದು ಮತಪತ್ರವನ್ನು ಮುದ್ರಿಸಿದರೆ, ೫ ವರ್ಷಗಳಲ್ಲಿನ ೩ ಚುನಾವಣೆಗಳಿಗಾಗಿ (ಲೋಕಸಭೆ, ವಿಧಾನಸಭೆ, ಪಂಚಾಯತ್ ಇತ್ಯಾದಿ) ಒಟ್ಟು ೩೦೦ ಕೋಟಿ ‘ಎ೩’ ಆಕಾರದ ಕಾಗದಗಳನ್ನು ಮುದ್ರಿಸಬೇಕಾಗುತ್ತದೆ. (ವಾಸ್ತವದಲ್ಲಿ ಇದಕ್ಕಿಂತ ಹೆಚ್ಚಿನದ್ದನ್ನೇ ಮುದ್ರಿಸಬೇಕಾಗುತ್ತದೆ.)
೫. ಒಂದು ಪೂರ್ಣ ಬೆಳೆದ ಮರದಿಂದ ೮೦ ಜಿ.ಎಸ್.ಎಮ್. ಗುಣಮಟ್ಟದ ಸುಮಾರು ೪ ಸಾವಿರ ‘ಎ೩’ ಆಕಾರದ ಕಾಗದಗಳನ್ನು ತಯಾರಿಸಬಹುದು. ಅಂದರೆ ೩೦೦ ಕೋಟಿ ಮತಪತ್ರಗಳನ್ನು ೫ ವರ್ಷಗಳಿಗೊಮ್ಮೆ ಮುದ್ರಿಸಲು ಕನಿಷ್ಟ ೭ ಲಕ್ಷ ೫೦ ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ !
ಪರಿಸರ ಪ್ರೇಮಿಗಳ ಕಪಟ ವೃಕ್ಷಪ್ರೇಮ
ಹತ್ತು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳಕ್ಕಾಗಿ ಕತ್ತರಿಸಲಾಗುವ ಅಂದಾಜು ೧ ಸಾವಿರದ ೮೦೦ ಮರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವವರಿಗೆ, ಪ್ರತಿ ೫ ವರ್ಷಕ್ಕೊಮ್ಮೆ ಕನಿಷ್ಟ ೭ ಲಕ್ಷ ೫೦ ಸಾವಿರ ಮರಗಳನ್ನು ಕಡಿಯುವುದು ಸಮ್ಮತವೇ ? ಜನಸಂಖ್ಯೆ ಹೆಚ್ಚಾದಂತೆ ಈ ಅಂಕಿ-ಅಂಶವೂ ಹೆಚ್ಚಾಗುತ್ತಾ ಹೋಗುತ್ತದೆ. ಪರಿಸರಪ್ರೇಮಿಗಳ ವಿರೋಧವು ಪ್ರಾಮಾಣಿಕವಾಗಿದ್ದರೆ, ಅವರು ‘ಮತಪತ್ರ ಬಳಸಿ ಮತದಾನ ಮಾಡಬೇಕು’ ಎಂಬ ಬೇಡಿಕೆಯ ಬಗ್ಗೆ ಕನಿಷ್ಟ ಆಮರಣಾಂತ ಉಪವಾಸವನ್ನಾದರೂ ಮಾಡಬೇಕು ! ಅವರು ಹಾಗೆ ಮಾಡುವರೇ ?
– ಶ್ರೀ. ಏಕನಾಥ ಮರಾಠೆ, ನವೀನ ಪನವೇಲ, ರಾಯಗಡ ಜಿಲ್ಲೆ.
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಅಡುಗೆಮನೆ
ಗಾಂಧಿವಾದದ ಮುಖವಾಡ ಕಳಚಿದ ಭಾರತ !