
ನವ ದೆಹಲಿ – ದೇಶ-ವಿದೇಶಗಳಲ್ಲಿ ಫೆಬ್ರವರಿ ೧೪ ರಂದು ‘ವ್ಯಾಲೆಂಟೈನ್ ಡೇ’ ಆಚರಿಸಲಾಯಿತು. ಭಾರತದಲ್ಲಿ ‘ಕ್ವಿಕ್ ಕಾಮರ್ಸ್’ ಎಂಬ ಆನ್ ಲೈನ್ ಮಾರಾಟದ ಆಪ್ ಗಳಲ್ಲಿ ಈ ಅವಧಿಯಲ್ಲಿ ಯುವಜನತೆ ಹಿಂದಿನಂತೆ ಕೇವಲ ಹೂವುಗಳು, ಚಾಕೊಲೇಟ್ ಅಥವಾ ಉಡುಗೊರೆಗಳನ್ನು ಆರ್ಡರ್ ಮಾಡಿಲ್ಲ, ಬದಲಾಗಿ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಮುಕ್ತವಾಗಿ ಖರೀದಿಸಿದ್ದಾರೆ. ನಿರೋಧ್ ನಿಂದ ಹಿಡಿದು ಇತರ ಸಾಧನಗಳವರೆಗೆ ವಿವಿಧ ವಸ್ತುಗಳಿಗೆ ಬೇಡಿಕೆ ಕಂಡುಬಂದಿದೆ.
Reports show a massive surge in the sale of contraceptives and sexual products ahead of Valentine’s Day.
Is this "love" or just rising immorality?
It is time to consider a ban on such days that promote immorality under the garb of celebration. 🚫🇮🇳#SocialValues #ValentineDay… pic.twitter.com/LgZcJEFds9
— Sanatan Prabhat (@SanatanPrabhat) February 17, 2026
೧. ‘ಇನ್ ಸ್ಟಾಮಾರ್ಟ್’ನ ವರದಿಯ ಪ್ರಕಾರ, ೨೦೨೬ ರ ಸಾಲಿನಲ್ಲಿ ಭಾರತದಲ್ಲಿ ಲೈಂಗಿಕ ಆರೋಗ್ಯ ಉತ್ಪನ್ನಗಳ ಮಾರಾಟದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ. ಈ ಹಿಂದೆ ನಿಷೇಧಿತ ಎಂದು ಪರಿಗಣಿಸಲಾಗುತ್ತಿದ್ದ ವಸ್ತುಗಳು ಈಗ ‘ಆನ್‌ಲೈನ್’ ಮೂಲಕ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳಾಗಿ ಮಾರ್ಪಟ್ಟಿವೆ.
೨. ‘ವ್ಯಾಲೆಂಟೈನ್ ಡೇ’ ನಿಮಿತ್ತ ಲೈಂಗಿಕ ಆರೋಗ್ಯ ಉತ್ಪನ್ನಗಳ ಜೊತೆಗೆ ಸೌಂದರ್ಯ ಮತ್ತು ಸ್ವ-ಆರೈಕೆ ವಸ್ತುಗಳು ಕೂಡ ಭಾರೀ ಮಾರಾಟವಾಗಿವೆ. ಒಡಿಶಾದ ಕಟಕ್ ನ ಗ್ರಾಹಕರೊಬ್ಬರು ೧೫,೦೯೩ ರೂಪಾಯಿಗಳ ಮೇಕಪ್ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಗುಜರಾತಿನ ಸೂರತ್ ನ ವ್ಯಕ್ತಿಯೊಬ್ಬರು ಕೂದಲಿನ ಆರೈಕೆ, ಸ್ನಾನ ಮತ್ತು ದೇಹದ ಆರೈಕೆ ಉತ್ಪನ್ನಗಳಿಗಾಗಿ ೧೦,೮೪೫ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.
೩. ವ್ಯಾಲೆಂಟೈನ್ ಡೇ ಕಾರ್ಡ್‌ಗಳ ಮಾರಾಟದಲ್ಲೂ ಭಾರೀ ಏರಿಕೆ ಕಂಡುಬಂದಿದೆ. ದೆಹಲಿ, ಮುಂಬಯಿ, ಭಾಗ್ಯನಗರ (ಹೈದರಾಬಾದ) ಮತ್ತು ಚೆನ್ನೈಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರು ನಗರದಲ್ಲಿ ಕಾರ್ಡ್‌ಗಳು ಮಾರಾಟವಾಗಿವೆ.
ಸಂಪಾದಕೀಯ ನಿಲುವುತಥಾಕಥಿತ ಪ್ರೇಮದ ದಿನದ ಹೆಸರಿನಲ್ಲಿ ಸ್ವೈರಾಚಾರ ಮತ್ತು ಅನೈತಿಕ ಕೃತ್ಯಗಳು ನಡೆಯುತ್ತಿರುವುದರಿಂದ ಭಾರತದಲ್ಲಿ ಇಂತಹ ದಿನಗಳನ್ನು ಈಗ ನಿಷೇಧಿಸುವುದು ಅವಶ್ಯಕವಾಗಿದೆ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !