(‘ಎಸ್ ಡಿಪಿಐ’ ಎಂದರೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ)

ಪುತ್ತೂರು – ಕುಂಬ್ರಾದ ರಾಮಗಿರಿ ಶ್ರೀ ರಾಮ ಭಜನಾ ಮಂದಿರದಲ್ಲಿ ಫೆಬ್ರವರಿ ೧೫ ರಂದು ಆಯೋಜಿಸಲಾಗಿದ್ದ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ಯು, ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷವಾದ ‘ಎಸ್ ಡಿಪಿಐ’ನ ತೀವ್ರ ವಿರೋಧದ ನಡುವೆಯೂ ಯಶಸ್ವಿಯಾಗಿ ಜರುಗಿತು. ‘ಈ ಸಭೆಯು ಸಂವಿಧಾನ ವಿರೋಧಿಯಾಗಿದ್ದು ಸಮಾಜದಲ್ಲಿ ದ್ವೇಷ ಹರಡುವ ಸಾಧ್ಯತೆಯಿದೆ’, ಎಂದು ಆರೋಪಿಸಿ ಪಕ್ಷದ ಕುಂಬ್ರಾ ಬ್ಲಾಕ್ ಸಮಿತಿಯು ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಸಮಿತಿಯ ಅಧ್ಯಕ್ಷ ರಿಯಾಜ್ ಬಳಕ್ಕ ನೇತೃತ್ವದ ನಿಯೋಗವು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿತ್ತು. ಈ ಕಾರ್ಯಕ್ರಮಕ್ಕೆ ನೀಡಲಾದ ಅನುಮತಿಯನ್ನು ರದ್ದುಗೊಳಿಸಬೇಕು ಮತ್ತು ಆಯೋಜಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದೂರು ದಾಖಲಿಸಲಾಗಿತ್ತು. ಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದ್ದು, ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಾದ ರಾಷ್ಟ್ರದ ಪರಿಕಲ್ಪನೆಯನ್ನು ಪ್ರಚಾರ ಮಾಡುವುದು ರಾಷ್ಟ್ರವಿರೋಧಿ ಕೃತ್ಯವಾಗಿದೆ, ಎಂದು ಈ ದೂರಿನಲ್ಲಿ ನಮೂದಿಸಲಾಗಿತ್ತು. (ಹಿಂದೂಗಳ ಮೇಲೆ ಆಘಾತ ಮಾಡಲು ಮತಾಂಧರಿಗೆ ಅನುಕೂಲಕ್ಕೆ ತಕ್ಕಂತೆ ಭಾರತ ‘ಜಾತ್ಯತೀತ’ ಎಂಬುದು ನೆನಪಾಗುತ್ತದೆ, ಎಂಬುದನ್ನು ಗಮನಿಸಿ ! – ಸಂಪಾದಕರು)
ವಿರೋಧದ ನಡುವೆಯೂ ನಡೆದ ಸಭೆ

ಇಷ್ಟೊಂದು ವಿರೋಧ ವ್ಯಕ್ತವಾದರೂ ಸಭೆಯು ನಿಗದಿತ ಸಮಯದಲ್ಲಿ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರರಾದ ಶ್ರೀ. ವಿಜಯಕುಮಾರ ಅವರು, ಹಿಂದೂ ರಾಷ್ಟ್ರವು ಸತ್ವಗುಣಿ ಜನರ ರಾಷ್ಟ್ರದ ಪರಿಕಲ್ಪನೆಯಾಗಿದೆ. ಇಂತಹ ಧರ್ಮಜಾಗೃತಿ ಸಭೆಗಳಿಗೆ ಅಡ್ಡಿಪಡಿಸುವುದು ಕೆಲವು ಜನರ ನಿತ್ಯದ ಕೆಲಸವಾಗಿದೆ. ನಾವು ಮಾಡುತ್ತಿರುವ ಕಾರ್ಯವು ಭಗವಾನ ಶ್ರೀಕೃಷ್ಣನ ಆಶೀರ್ವಾದದಿಂದ ನಡೆಯುತ್ತಿರುವ ಧರ್ಮರಕ್ಷಣೆಯ ಕಾರ್ಯವಾಗಿದೆ ಮತ್ತು ಈ ಕಾರ್ಯಕ್ಕೆ ಈಶ್ವರನ ರಕ್ಷಣೆ ಯಾವಾಗಲೂ ಇರುತ್ತದೆ, ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಹಿಂದೂ ಜನಜಾಗೃತಿ ಸಮಿತಿಯು ಕಳೆದ ೨೦ ವರ್ಷಗಳಲ್ಲಿ ದೇಶಾದ್ಯಂತ ೨ ಸಾವಿರಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದು, ಸುಮಾರು ೨೦ ಲಕ್ಷಕ್ಕೂ ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಿದೆ. ಈ ಎಲ್ಲಾ ಕಾರ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲೇ ಮಾಡಲಾಗುತ್ತಿದೆ. ಆದ್ದರಿಂದ ಇಂತಹ ಸಭೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಶ್ರೀ. ವಿಜಯಕುಮಾರ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಸಂಪಾದಕೀಯ ನಿಲುವು‘ಎಸ್‌ಡಿಪಿಐ’ ಒಂದು ಮತಾಂಧ, ಕಟ್ಟರವಾದಿ ಮತ್ತು ದೇಶವಿರೋಧಿ ರಾಜಕೀಯ ಸಂಘಟನೆಯಾಗಿದೆ. ಹೀಗಿದ್ದರೂ ಅದರ ಮೇಲೆ ಇನ್ನೂ ಏಕೆ ನಿಷೇಧ ಹೇರಿಲ್ಲ?, ಎಂಬುದು ಪ್ರಶ್ನೆಯಾಗಿದೆ ! |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !