ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ೩೬

ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಪರಿಹಾರವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಸ್ಫೂರ್ತಿ ಪಡೆಯಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ ನಿಯಮಗಳು ಮತ್ತು ಕಾಯಿಲೆಗೆ ಅನುಗುಣವಾಗಿ ಯೋಗ್ಯ ವ್ಯಾಯಾಮ’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ವ್ಯಾಯಾಮದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಸ್ಫೂರ್ತಿದಾಯಕವಾಗಿರಲಿದೆ ! ಜೀರ್ಣಕ್ರಿಯೆಯನ್ನು ಸುಧಾರಿಸುವ ದೃಷ್ಟಿಯಿಂದ ವ್ಯಾಯಾಮಕ್ಕೆ ಸಂಬಂಧಿಸಿದ ಅಂಶಗಳನ್ನು ನೀಡಲಾಗಿದೆ.
೧. ಜೀರ್ಣಾಂಗವ್ಯವಸ್ಥೆ ಉತ್ತಮವಾಗಲು ವ್ಯಾಯಾಮಗಳು

೧ ಅ. ‘ಏರೋಬಿಕ್’ ವ್ಯಾಯಾಮ (ಸೂಚನೆ) : ‘ನಡೆಯುವುದು, ಓಡುವುದು, ಸೈಕಲ್ ಚಾಲನೆ ಅಥವಾ ಈಜುವುದು’ ಇಂತಹ ವ್ಯಾಯಾಮಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಹೊಟ್ಟೆಯ ಚಲನೆಯನ್ನು ನಿಯಮಿತಗೊಳಿಸುತ್ತವೆ. ಈ ರೀತಿಯ ವ್ಯಾಯಾಮದಿಂದ ಪಿತ್ತದಿಂದಾಗುವ ಉರಿಯನ್ನು ನಿಯಂತ್ರಿಸುವ ‘ಫೀಕಲಿಬ್ಯಾಕ್ಟೀರಿಯಂ ಪ್ರಾವ್ಸ್ನಿಟ್ಜಿ’ ಮತ್ತು ‘ಅಕರ್ಮನ್ಸಿಯಾ ಮ್ಯೂಸಿನಿಫಿಲಾ’ (Faecalibacterium prausnitzii ಮತ್ತು Akkermansia muciniphila) ನಂತಹ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತದೆ. ಸೂಚನೆ: ಈ ವ್ಯಾಯಾಮಗಳಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು (ಆಕ್ಸಿಜನ್) ಬಳಸಲಾಗುತ್ತದೆ. ‘ಏರೋಬಿಕ್’ ವ್ಯಾಯಾಮದಲ್ಲಿ ಮನುಷ್ಯನ ಹೃದಯ ಮತ್ತು ಶ್ವಾಸಕೋಶಗಳು ಹೆಚ್ಚು ಕಾರ್ಯನಿರ್ವಹಿಸುತ್ತವೆ.
೧ ಆ. ಯೋಗ ಮತ್ತು ‘ಸ್ಟ್ರೆಚಿಂಗ್’ : ಶರೀರವನ್ನು ತಿರುಗಿಸುವ (‘ಟ್ವಿಸ್ಟ್’ ಮಾಡುವ) ಮತ್ತು ಮುಂದೆ ಬಾಗುವ ಯೋಗಾಸನಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತವೆ. ಅವು ವಾತದೋಷದ (ಗ್ಯಾಸ್) ತೊಂದರೆಯನ್ನು ಕಡಿಮೆ ಮಾಡಿ ಮಲಬದ್ಧತೆಯನ್ನು ದೂರವಾಗಿಸುತ್ತವೆ. ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಜೀರ್ಣಕ್ರಿಯೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
೧ ಇ. ‘ಹೈ-ಇಂಟೆನ್ಸಿಟಿ ಇಂಟರ್ವಲ್ ಟ್ರೈನಿಂಗ್ (HIIT)’ : ಈ ಪದ್ಧತಿಯಲ್ಲಿ ‘ಸ್ವಲ್ಪ ಸಮಯ ತೀವ್ರ ವ್ಯಾಯಾಮ ಮತ್ತು ನಂತರ ವಿಶ್ರಾಂತಿ’ ಇರುತ್ತದೆ. ಈ ವಿಧಗಳು ಹೊಟ್ಟೆಯಲ್ಲಿನ ಬ್ಯಾಕ್ಟೀರಿಯಾಗಳ ವೈವಿಧ್ಯತೆಯನ್ನು ಹೆಚ್ಚಿಸುತ್ತವೆ ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ.
೧ ಈ. ‘ಸ್ಟ್ರೆಂತ್ ಟ್ರೈನಿಂಗ್ (ತೂಕ ಎತ್ತುವುದು)’ : ಇದು ಮಿತವಾಗಿ ತೂಕವನ್ನು ಎತ್ತುವ ವ್ಯಾಯಾಮವಾಗಿದೆ. ‘ಏರೋಬಿಕ್’ ವ್ಯಾಯಾಮದ ಜೊತೆಗೆ ಇದನ್ನು ಮಾಡಿದರೆ ಶರೀರದ ಮೇಲಿನ ಬಾವು (ಇನ್‌ಫ್ಲಮೇಶನ್) ಕಡಿಮೆಯಾಗುತ್ತದೆ ಮತ್ತು ಹೊಟ್ಟೆಯ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ, ಫೋಂಡಾ, ಗೋವಾ. (೮.೧೨.೨೦೨೪)
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !