ಸಾಧಕರಿಗೆ ಸೂಚನೆ

೧. ಸಾಧಕರು ೧೯೯೯ ನೇ ವರ್ಷದಿಂದ ಪ್ರಮುಖವಾಗಿ ಪ್ರತಿದಿನ ಮುಂದಿನ ವ್ಯಷ್ಟಿ ಸಾಧನೆಯನ್ನು ಮಾಡುತ್ತಿದ್ದಾರೆ.
೧ ಅ. ಕುಲದೇವತೆಯ ಜಪ – ಇದನ್ನು ಸಾಧ್ಯವಾದಷ್ಟು ಹೆಚ್ಚು ಸಮಯ ಮಾಡುವುದು. ಈ ಜಪವು ಪ್ರಾರಬ್ಧದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೧ ಆ. ದತ್ತನ ಜಪ – ‘ಶ್ರೀ ಗುರುದೇವ ದತ್ತ |’: ತೊಂದರೆಯ ತೀವ್ರತೆಗನುಸಾರ ಈ ಜಪವನ್ನು ೩ ರಿಂದ ೯ ಮಾಲೆಗಳಷ್ಟು ಮಾಡುವುದು. ಈ ಜಪವು ಪೂರ್ವಜರಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೨. ೨೦೧೦ ನೇ ವರ್ಷದಿಂದ ವ್ಯಷ್ಟಿ ಸಾಧನೆ ಮಾಡುವವರು ಸಮಷ್ಟಿಗಾಗಿ ಮಾಡಬೇಕಾದ ಜಪ
೨೦೧೦ ನೇ ವರ್ಷದಲ್ಲಿ, ‘ಕಾಲಾನುಸಾರ ಸಮಷ್ಟಿ ಸಾಧನೆ ಮಾಡುವ ಸಾಧಕರು “ಓಂ ನಮೋ ಭಗವತೇ ವಾಸುದೇವಾಯ |” ಈ ಜಪವನ್ನು ಸಾಧ್ಯವಾದಷ್ಟು ಹೆಚ್ಚು ಸಮಯ ಮಾಡಬೇಕು’ ಎಂದು ಹೇಳಲಾಗಿತ್ತು.
೩. ೨೦೨೧ ನೇ ವರ್ಷದಲ್ಲಿ ‘ನಿರ್ವಿಚಾರ’ ನಾಮಜಪ ಮಾಡಲು ತಿಳಿಸಲಾಗಿತ್ತು.
೨೦೨೬ ನೇ ವರ್ಷದ ಮಹಾಶಿವರಾತ್ರಿಯಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡುವವರು ಮಾಡಬೇಕಾದ ನಾಮಜಪ

‘ಈಗ ಮೂರನೇ ಮಹಾಯುದ್ಧದ ಕಾಲವು ಹತ್ತಿರ ಬರುತ್ತಿರುವುದರಿಂದ, ಅದರಲ್ಲಿ ನಮ್ಮ ರಕ್ಷಣೆಯಾಗಲು ಮತ್ತು ಮುಂದೆ ‘ರಾಮರಾಜ್ಯದ ಸ್ಥಾಪನೆ’ಯಾಗಲು, ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ಜಪವನ್ನು ಕಡಿಮೆಪಕ್ಷ ೧೦ ಮಾಲೆಗಳು ಮತ್ತು ಗರಿಷ್ಠ ಸಾಧ್ಯವಾದಷ್ಟು ಮಾಡಬೇಕು.
ಇದರೊಂದಿಗೆ ದಿನಕ್ಕೆ ಒಮ್ಮೆ ರಾಮರಕ್ಷಾ ಸ್ತೋತ್ರ ಮತ್ತು ಹನುಮಾನಚಾಲೀಸಾ (ಹಿಂದಿ ಬರುವವರು) ಅಥವಾ ಮಾರುತಿ ಸ್ತೋತ್ರ (ಮರಾಠಿ ಬರುವವರು) ಇವುಗಳನ್ನು ಅರ್ಥ ಮಾಡಿಕೊಂಡು ಭಾವಪೂರ್ಣವಾಗಿ ಪಠಿಸಬೇಕು.
ಈ ನಾಮಜಪವನ್ನು ಈಗಿನಿಂದ ಮೂರನೇ ಮಹಾಯುದ್ಧವು ಮುಗಿದು ರಾಮರಾಜ್ಯ ಸ್ಥಾಪನೆಯಾಗುವವರೆಗೆ ಮಾಡಬೇಕಿದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩೧.೧.೨೦೨೬)
೪. ಮಹಾಶಿವರಾತ್ರಿಯಿಂದ ಈ ನಾಮಜಪವನ್ನು ಪ್ರಾರಂಭಿಸಲು ಕಾರಣ
‘ಸ್ವತಃ ಶಿವನು ಯಾವಾಗಲೂ ರಾಮನಾಮವನ್ನು ಜಪಿಸುತ್ತಿರುತ್ತಾನೆ. ಆದ್ದರಿಂದ ಅವನ ಆಶೀರ್ವಾದದೊಂದಿಗೆ ಕಾಲಾನುಸಾರ ಸಾಧನೆಯಾಗಿ ಈ ನಾಮಜಪವನ್ನು ಪ್ರಾರಂಭಿಸಲಿದ್ದೇವೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩೧.೧.೨೦೨೬)
ಕೆಲವು ಸೂಚನೆಗಳು
೧. ವ್ಯಷ್ಟಿ ಸಾಧನೆಯ ದೃಷ್ಟಿಕೋನದಿಂದ ನಾಮಜಪ
೧ ಅ. ಹೊಸ ಸಾಧಕರಿಗಾಗಿ ನಾಮಜಪ: ಹೊಸ ಸಾಧಕರು ಕುಲದೇವತೆಯ ನಾಮಜಪವನ್ನು ಕಡಿಮಪಕ್ಷ ೧ ಗಂಟೆ ಮತ್ತು ದತ್ತನ ನಾಮಜಪವನ್ನು ಪೂರ್ವಜರ ತೊಂದರೆಗನುಸಾರ ೩, ೬ ಅಥವಾ ೯ ಮಾಲೆಗಳನ್ನು ಮಾಡಬೇಕು. ನಂತರ ಉಳಿದ ಸಮಯದಲ್ಲಿ ಶ್ರೀರಾಮನ ನಾಮಜಪ ಮಾಡಬೇಕು.
೧ ಆ. ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳ ನಿವಾರಣೆಗಾಗಿ ‘ಪ್ರಾಣಶಕ್ತಿವಹನ ಪದ್ಧತಿ’ಯಂತೆ ಹುಡುಕಿದ ನಾಮಜಪ ಅಥವಾ ಕಾಯಿಲೆಗಳಿಗಾಗಿ ಯಾವುದಾದರೂ ವಿಶಿಷ್ಟ ನಾಮಜಪವನ್ನು ಹೇಳಿದ್ದರೆ, ಅದನ್ನು ಪೂರ್ಣಗೊಳಿಸಿದ ನಂತರ ಉಳಿದ ಸಮಯದಲ್ಲಿ ಶ್ರೀರಾಮನ ಜಪ ಮಾಡಬೇಕು.
೨. ಸಮಷ್ಟಿ ಸಾಧನೆಯ ದೃಷ್ಟಿಕೋನದಿಂದ ನಾಮಜಪ
ಯಾವ ಸಾಧಕರು ಶ್ರೀಕೃಷ್ಣ ಅಥವಾ ‘ನಿರ್ವಿಚಾರ’ ನಾಮಜಪ ಮಾಡುತ್ತಿದ್ದರೋ, ಅವರು ಅದನ್ನು ನಿಲ್ಲಿಸಿ ಈಗ ಕೇವಲ ಶ್ರೀರಾಮನ ಜಪವನ್ನು ಮಾಡಬೇಕು.
೩. ಈ ಹಿಂದೆ ಮಹರ್ಷಿಗಳು ಹೇಳಿದಂತೆ ‘ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ | ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |’ ಈ ಜಪವನ್ನು ೧೦೮ ಬಾರಿ ಮಾಡಬೇಕು.
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ