ಮಾಲೇಗಾಂವ್ ಮಹಾನಗರ ಪಾಲಿಕೆ: ಉಪಮಹಾಪೌರರ ಕಚೇರಿಯಲ್ಲಿದ್ದ ಟಿಪ್ಪು ಸುಲ್ತಾನ್ ಭಾವಚಿತ್ರ ಕೊನೆಗೂ ತೆರವು

ನಾಶಿಕ – ಮಾಲೇಗಾಂವ ಮಹಾನಗರ ಪಾಲಿಕೆಯ ಉಪಮಹಾಪೌರರ ಕೊಠಡಿಯಲ್ಲಿ ಹಾಕಲಾಗಿದ್ದ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಚಿತ್ರವನ್ನು ಕೊನೆಗೂ ತೆರವುಗೊಳಿಸಲಾಗಿದೆ. ಶಿವಸೇನೆ ಸೇರಿದಂತೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಆಕ್ರಮಣಕಾರಿ ಪ್ರತಿಭಟನೆ ನಡೆಸಿದ ಕಾರಣ, ಚಿತ್ರವನ್ನು ತೆಗೆಯುವ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಯಿತು. ವಾಸ್ತವವಾಗಿ, ಸರಕಾರಿ ಕಚೇರಿಗಳಲ್ಲಿ ಯಾರ ಚಿತ್ರಗಳನ್ನು ಹಾಕಬೇಕು ಎಂಬ ಬಗ್ಗೆ ನಿರ್ದಿಷ್ಟ ನಿಯಮಗಳಿವೆ. ಹೀಗಿದ್ದರೂ, ಹಿಂದೂಗಳ ಹತ್ಯೆ ಮಾಡಿದ, ಹಿಂದೂ ಸ್ತ್ರೀಯರ ಮೇಲೆ ಅತ್ಯಾಚಾರ ಎಸಗಿದ ಟಿಪ್ಪು ಸುಲ್ತಾನನ ಚಿತ್ರವನ್ನು ಉಪಮಹಾಪೌರರಾದ ಶಾನ್-ಎ-ಹಿಂದ್ ನಿಹಾಲ್ ಅಹ್ಮದ್ ಅವರು ಹಾಕಿದ್ದರು. ಅಷ್ಟೇ ಅಲ್ಲದೆ, ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದಾಗ, ನಮ್ಮ ವಿಚಾರಧಾರೆಗೆ ಯಾರು ಸರಿಹೊಂದುತ್ತಾರೋ ಅವರ ಚಿತ್ರವನ್ನೇ ನಾವು ಹಾಕುತ್ತೇವೆ ಎಂದು ಉದ್ಧಟತನದ ಉತ್ತರ ನೀಡಿದ್ದರು. (ಇದರರ್ಥ ಈ ಉಪಮಹಾಪೌರರು ಅತ್ಯಾಚಾರಿ ಮತ್ತು ಕ್ರೂರಕರ್ಮಿ ಟಿಪ್ಪುವಿನ ವಿಚಾರಗಳನ್ನು ಬೆಂಬಲಿಸುವವರಾಗಿದ್ದಾರೆ. ಇಂತಹವರು ಅಧಿಕಾರಕ್ಕೆ ಬಂದರೆ ಸಮಾಜಕ್ಕೆ ಎಷ್ಟು ಘಾತಕವಾಗಬಲ್ಲರು ಎಂಬುದನ್ನು ಹಿಂದೂಗಳು ಯೋಚಿಸಬೇಕು! – ಸಂಪಾದಕರು)
The portrait of Tipu Sultan installed in the Deputy Mayor's office at Malegaon (Nashik) Municipal Corporation has finally been removed! 🚩
Hindutva organizations took a firm stand against the move. ✊
This incident serves as a wake-up call. If we don’t stay alert to these… https://t.co/GUXy8lInXr pic.twitter.com/hyUsz6CdGv
— Sanatan Prabhat (@SanatanPrabhat) February 14, 2026
ಈ ಹಿನ್ನೆಲೆಯಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ‘ಅಫ್ಜಲ್ ಖಾನ್ ವಧೆ’ಯ ಚಿತ್ರವನ್ನು ಅವರಿಗೆ ಉಡುಗೊರೆಯಾಗಿ ನೀಡಿ, ಇದನ್ನೇ ಅಲ್ಲಿ ಹಾಕುವಂತೆ ಮಾಡುತ್ತೇವೆ ಎಂದು ಆಕ್ರಮಣಕಾರಿಯಾಗಿ ವಿರೋಧ ವ್ಯಕ್ತಪಡಿಸಿದವು. ಹಿಂದುತ್ವನಿಷ್ಠರು ಈ ಚಿತ್ರವನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು.
ಛತ್ರಪತಿ ಶಿವರಾಯರ ಕಾಲದ ನಂತರ ಅವರನ್ನೇ ಆದರ್ಶವಾಗಿಟ್ಟುಕೊಂಡು ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ್ದನು. ಅವನು ಯಾವುದೇ ದ್ವೇಷದ ವಿಚಾರಗಳನ್ನು ಹೊಂದಿರಲಿಲ್ಲ. ಅವನು ಛತ್ರಪತಿ ಶಿವರಾಯರಿಗೆ ಸಮಾನನಾಗಿದ್ದಾನೆ ಎಂದು ಕಾಂಗ್ರೆಸ್ ಪ್ರದೇಶಾಧ್ಯಕ್ಷ ಸಪಕಾಳ ಹೇಳಿಕೆ ನೀಡಿದ್ದಾರೆ. |
ಸಪಕಾಳ ಅವರು ತಕ್ಷಣ ಕ್ಷಮೆ ಯಾಚಿಸಲಿ! – ಕೇಶವ ಉಪಾಧ್ಯೆ, ವಕ್ತಾರರು, ಭಾಜಪ
ಟಿಪ್ಪು ಸುಲ್ತಾನ್ ಸಮಾಜದ ಮೇಲೆ ಅಪಾರ ದೌರ್ಜನ್ಯ ಎಸಗಿದ್ದಾನೆ. ಆದರೆ ಛತ್ರಪತಿ ಶಿವರಾಯರು ಸ್ವರಾಜ್ಯವನ್ನು ಸ್ಥಾಪಿಸಿದರು. ಕೇವಲ ಅಲ್ಪಸಂಖ್ಯಾತರ ಮತಗಳಿಗಾಗಿ ಲಜ್ಜೆಯಿಲ್ಲದೆ ಟಿಪ್ಪುವನ್ನು ಶಿವರಾಯರಿಗೆ ಹೋಲಿಸಿ ವೈಭವೀಕರಿಸುವುದು ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾಡಿದ ಘೋರ ಅಪಮಾನವಾಗಿದೆ.
ಸಂಪಾದಕೀಯ ನಿಲುವುಹಿಂದೂಗಳೇ, ಒಂದು ಮಹಾನಗರ ಪಾಲಿಕೆಯಲ್ಲಿ ಮುಸಲ್ಮಾನ ಜನಪ್ರತಿನಿಧಿಗಳು ಬಹುಸಂಖ್ಯಾತರಾದಾಗ ಅವರು ಅಲ್ಲಿ ಎಂತಹ ವಾತಾವರಣ ನಿರ್ಮಿಸುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹಿಂದೂಗಳು ಇಂತಹ ಅಪಾಯಗಳನ್ನು ಸಮಯೋಚಿತವಾಗಿ ಗುರುತಿಸಿ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಪೀಳಿಗೆಯ ಆದರ್ಶಗಳೇ ಬದಲಾಗಿ ಹೋಗುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ