Bangladesh Hindu Murder : ಬಾಂಗ್ಲಾದೇಶದಲ್ಲಿ ಚಹಾದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವಕನ ಹತ್ಯೆ

AI ನಿರ್ಮತ ಚಿತ್ರ

ಢಾಕಾ (ಬಾಂಗ್ಲಾದೇಶ) – ಇಲ್ಲಿನ ಮೌಲ್ವಿ ಬಜಾರ ಜಿಲ್ಲೆಯಲ್ಲಿ ಫೆಬ್ರವರಿ ೧೧ ರಂದು ರತನ ಶುವೊ ಕರ್ ಎಂಬ ೨೮ ವರ್ಷದ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿದೆ. ಅವರ ಶವ ಪತ್ತೆಯಾದ ನಂತರ ಪರಿಸರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರತನ ಕರ್ ಅವರು ಇಸ್ಲಾಂಪುರ ಒಕ್ಕೂಟದ ಚಂಪಾರಾ ಚಹಾದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರಿಗೆ ಅವರ ಶವವು ಕೈಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯ ವರದಿಗಳ ಪ್ರಕಾರ, ರತನ ಕರ್ ಅವರ ದೇಹದ ಮೇಲೆ ಅನೇಕ ಗಾಯದ ಗುರುತುಗಳಿದ್ದವು ಮತ್ತು ಶವವು ರಕ್ತಸಿಕ್ತವಾಗಿತ್ತು.

೧. ಬಾಂಗ್ಲಾದೇಶದ ‘ದ ಡೈಲಿ ಸ್ಟಾರ್’ ಪತ್ರಿಕೆಯ ವರದಿಯ ಪ್ರಕಾರ, ಫೆಬ್ರವರಿ ೧೧ ರಂದು ಬೆಳಿಗ್ಗೆ ೧೦ ಗಂಟೆಗೆ ಚಹಾದ ತೋಟದಲ್ಲಿ ಕೆಲಸ ಮಾಡುವ ಜನರಿಗೆ ರತನ ಶುಬೊ ಕರ್ ಅವರ ಶವವು ಕಂಡುಬಂದಿದೆ. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

೨. ರತನ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಜನರು, ಅವರನ್ನು ಬೇರೆಡೆ ಹತ್ಯೆ ಮಾಡಿ ಶವವನ್ನು ತೋಟದಲ್ಲಿ ಎಸೆಯಲಾಗಿದೆ ಎಂದು ಆರೋಪಿಸಿದ್ದಾರೆ; ಆದರೆ ಇದಕ್ಕೆ ಅಧಿಕೃತ ಪುಷ್ಟಿ ದೊರೆತಿಲ್ಲ.

೩. ರತನ್ ಅವರ ಹಿರಿಯ ಸಹೋದರ ಲಕ್ಷ್ಮಣ ಕರ್ ಅವರು ಮಾತನಾಡಿ, ಫೆಬ್ರವರಿ ೧೦ ರ ರಾತ್ರಿಯಿಂದ ರತನ ಮನೆಗೆ ಬಂದಿರಲಿಲ್ಲ. ಕುಟುಂಬದವರು ಇಡೀ ರಾತ್ರಿ ಹುಡುಕಾಟ ನಡೆಸಿದ್ದರು. ಬೆಳಿಗ್ಗೆ ತೋಟದಲ್ಲಿ ಶವ ಸಿಕ್ಕಿರುವ ಮಾಹಿತಿ ತಿಳಿಯಿತು. ಹತ್ಯೆಗೆ ಕಾರಣವೇನು ಎಂಬುದು ತಿಳಿಯುತ್ತಿಲ್ಲ ಎಂದು ಕುಟುಂಬದವರು ಹೇಳಿದರು.

೪. ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಇಂತಹ ಘಟನೆಗಳ ಬಗ್ಗೆ ಮಾನವ ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ‘ಹ್ಯೂಮನ್ ರೈಟ್ಸ್ ಸಪೋರ್ಟ್ ಸೊಸೈಟಿ’ಯ ಮಾಹಿತಿಯ ಪ್ರಕಾರ, ಕಳೆದ ೧೭ ತಿಂಗಳಲ್ಲಿ ರಾಜಕೀಯ ಹಿಂಸಾಚಾರದಲ್ಲಿ ಕನಿಷ್ಠ ೧೯೫ ಜನರು ಸಾವನ್ನಪ್ಪಿದ್ದಾರೆ ಮತ್ತು ೧೧ ಸಾವಿರದ ೨೨೯ ಜನರು ಗಾಯಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂಗಳ ವಂಶಹತ್ಯೆ ನಡೆಯುತ್ತಿರುವಾಗ ಅದನ್ನು ತಡೆಯಲು ಭಾರತ ಸರಕಾರವು ಯಾವ  ಪ್ರಯತ್ನಗಳನ್ನು ಮಾಡಲಿದೆ ?