|

ನವದೆಹಲಿ – ರಾಜ್ಯದ ಕಲಬುರಗಿ ಜಿಲ್ಲೆಯ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ನಡೆಯುವ ಪೂಜೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆ ಸ್ಥಳದಲ್ಲಿ ಯಾವುದೇ ಹೊಸ ನಿರ್ಮಾಣ ಅಥವಾ ಬದಲಾವಣೆಗಳನ್ನು ಮಾಡಬಾರದು, ಇದರಿಂದ ಆ ಜಾಗದ ಪ್ರಸ್ತುತ ಧಾರ್ಮಿಕ ಸ್ವರೂಪವು ಬದಲಾಗಬಹುದು ಎಂದು ದರ್ಗಾ ವ್ಯವಸ್ಥಾಪನಾ ಸಮಿತಿಯು ಅರ್ಜಿಯಲ್ಲಿ ಒತ್ತಾಯಿಸಿದೆ. ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಭರವಸೆ ನೀಡಿದೆ.
ಏನಿದು ವಿವಾದ?
ಯಾವ ದರ್ಗಾದ ಬಗ್ಗೆ ಈ ವಿವಾದವಿದೆಯೋ, ಅದು 14ನೇ ಶತಮಾನದ ಸೂಫಿ ಸಂತ ಹಜರತ್ ಶೇಖ್ ಅಲಾವುದ್ದೀನ್ ಅನ್ಸಾರಿ ಅವರ ಹೆಸರಿನಲ್ಲಿದೆ. ದರ್ಗಾ ಆವರಣದಲ್ಲಿ 15ನೇ ಶತಮಾನದ ಹಿಂದೂ ಸಂತ ರಾಘವ ಚೈತನ್ಯ ಅವರ ಸಮಾಧಿ ಇದೆ ಎಂದು ನಂಬಲಾಗಿದೆ. ಆವರಣದಲ್ಲಿ ‘ರಾಘವ ಚೈತನ್ಯ ಶಿವಲಿಂಗ’ ಎಂಬ ರಚನೆಯೂ ಇದೆ. ಈ ಸ್ಥಳದಲ್ಲಿ ಈ ಹಿಂದೆ ಹಿಂದೂ ಮತ್ತು ಮುಸ್ಲಿಂ ಇಬ್ಬರೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದರು; ಆದರೆ 2022ರಲ್ಲಿ ಪೂಜೆ ಮಾಡುವ ಅಧಿಕಾರದ ವಿಚಾರವಾಗಿ ಉದ್ವಿಗ್ನತೆ ಹೆಚ್ಚಾಯಿತು. ಆ ಸಮಯದಲ್ಲಿ ಶಿವಲಿಂಗದ ಮೇಲೆ ಅಶುದ್ಧ ವಸ್ತುಗಳನ್ನು ಎಸೆಯಲಾಗಿತ್ತು. 2025ರಲ್ಲಿ ಕರ್ನಾಟಕ ಹೈಕೋರ್ಟ್ 15 ಮಂದಿ ಹಿಂದೂಗಳಿಗೆ ಮಹಾಶಿವರಾತ್ರಿಯ ದಿನದಂದು ಶಿವಲಿಂಗದ ಪೂಜೆ ಮಾಡಲು ಅನುಮತಿ ನೀಡಿತ್ತು.
ಈಗ ಸಿದ್ಧರಾಮಯ್ಯ ಹಿರೇಮಠ ಎಂಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದು, ತಮಗೆ ಮತ್ತು ಇತರ ಭಕ್ತರಿಗೆ ಫೆಬ್ರವರಿ 15ರಂದು ಪೂಜೆ ಮಾಡಲು ಅನುಮತಿ ನೀಡಬೇಕೆಂದು ಕೋರಿದ್ದಾರೆ. 2025ರಲ್ಲೂ ಇದೇ ವ್ಯಕ್ತಿಯ ಅರ್ಜಿಯ ಮೇರೆಗೆ 15 ಜನರಿಗೆ ಪೂಜೆಗೆ ಅನುಮತಿ ನೀಡಲಾಗಿತ್ತು.
ಸಂಪಾದಕೀಯ ನಿಲುವುಭಾರತದ ಬಹುತೇಕ ಮಸೀದಿ ಮತ್ತು ದರ್ಗಾಗಳು ಈ ಹಿಂದೆ ಹಿಂದೂಗಳ ಧಾರ್ಮಿಕ ಸ್ಥಳಗಳಾಗಿದ್ದವು. ಆದ್ದರಿಂದ ಕೇಂದ್ರ ಸರಕಾರವು ಈ ಎಲ್ಲಾ ಸ್ಥಳಗಳಲ್ಲಿ ಸಮೀಕ್ಷೆ ನಡೆಸಿ, ಅತಿಕ್ರಮಣಕ್ಕೊಳಗಾದ ಹಿಂದೂ ಧಾರ್ಮಿಕ ಸ್ಥಳಗಳನ್ನು ಮುಕ್ತಗೊಳಿಸಿ ಹಿಂದೂಗಳಿಗೆ ಹಸ್ತಾಂತರಿಸುವುದು ಅವಶ್ಯಕ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”