ಅಮೆರಿಕದ ನಿಲುವಿನಲ್ಲಿ ಬದಲಾವಣೆ

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ವ್ಯಾಪಾರ ಪ್ರತಿನಿಧಿ ಕಾರ್ಯಾಲಯವು ಪ್ರಸಾರ ಮಾಡಿರುವ ನಕಾಶೆಯಲ್ಲಿ ಸಂಪೂರ್ಣ ಜಮ್ಮು-ಕಾಶ್ಮೀರದ ಭಾಗ, ಅಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಹಕ್ಕು ಸಾಧಿಸುತ್ತಿರುವ ಅಕ್ಸಾಯ್ ಚಿನ್ ಪ್ರದೇಶವನ್ನೂ ಭಾರತದ ಭಾಗವೆಂದು ತೋರಿಸಲಾಗಿದೆ. ಭಾರತದ ಈ ನಕಾಶೆಯನ್ನು ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಅಧಿಕೃತ ಸಂವಾದದ ಭಾಗವಾಗಿ ಪ್ರಸಾರ ಮಾಡಲಾಗಿದೆ. ಈ ಹಿಂದೆ ಅಮೆರಿಕ ಅಥವಾ ಅಲ್ಲಿನ ‘ಸ್ಟೇಟ್ ಡಿಪಾರ್ಟ್‌ಮೆಂಟ್’ ಪ್ರಸಾರ ಮಾಡುತ್ತಿದ್ದ ನಕಾಶೆಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸಲಾಗುತ್ತಿತ್ತು. ಇದೇ ಕಾರಣಕ್ಕೆ ಈ ಹೊಸ ನಕಾಶೆಯು ಜಗತ್ತಿನ ಗಮನ ಸೆಳೆದಿದೆ.
Significant shift in diplomacy! 🌍🇺🇸🇮🇳
The US includes PoK and Aksai Chin in India's map! 📍🇺🇸🇮🇳
✅ Sign of strengthening bilateral ties.
✅ Major shift in international recognition.
The focus now remains on India’s strategy to regain full control over these regions. 🇮🇳✨… pic.twitter.com/1o6SOHgKNK
— Sanatan Prabhat (@SanatanPrabhat) February 7, 2026
ಭಾರತವು ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದರೂ ನಿರ್ಲಕ್ಷಿಸಿ, ಚೀನಾ ಯಾವಾಗಲೂ ವಿವಾದಿತ ‘ಅಕ್ಸಾಯ್ ಚಿನ್’ ಪ್ರದೇಶದ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುತ್ತಾ ಬಂದಿದೆ. ಭಾರತದ ವಿದೇಶಾಂಗ ಸಚಿವಾಲಯವು ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ಮತ್ತು ಇತರ ಜಾಗತಿಕ ಸಂಸ್ಥೆಗಳ ನಕಾಶೆಗಳಲ್ಲಿ ಭಾರತದ ಗಡಿಗಳನ್ನು, ವಿಶೇಷವಾಗಿ ಜಮ್ಮು-ಕಾಶ್ಮೀರ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಗಡಿಗಳನ್ನು ತಪ್ಪಾಗಿ ತೋರಿಸುತ್ತಿರುವ ಬಗ್ಗೆ ಸತತವಾಗಿ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿತ್ತು. ಆ ಹಿನ್ನೆಲೆಯಲ್ಲಿ ಅಮೆರಿಕ ಪ್ರಸಾರ ಮಾಡಿದ ಈ ನಕಾಶೆಯು ಪಾಕಿಸ್ತಾನ ಮತ್ತು ಚೀನಾವನ್ನು ಬದಿಗೊತ್ತಿ ಭಾರತಕ್ಕೆ ಮಹತ್ವ ನೀಡುತ್ತಿರುವುದರ ದರ್ಶಕವಾಗಿದೆ.
ಸಂಪಾದಕೀಯ ನಿಲುವುಭಾರತ-ಅಮೆರಿಕ ನಡುವಿನ ಸಂಬಂಧವು ಪುನಃ ಹಳಿಗೆ ಬರುತ್ತಿರುವುದರ ಸಂಕೇತವಿದು ಎಂದು ಹೇಳಬಹುದು. ಮೂಲತಃ ಭಾರತ ಸರಕಾರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚಿನ್ ಇವುಗಳನ್ನು ಪುನಃ ವಶಪಡಿಸಿಕೊಳ್ಳಲು ವ್ಯೂಹರಚನೆ ಮಾಡಿ ಅವುಗಳ ಮೇಲೆ ನಿಯಂತ್ರಣ ಸಾಧಿಸುವುದು ಅವಶ್ಯಕವಾಗಿದೆ ! |
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers