|
(ಲಿವ್-ಇನ್ ರಿಲೇಶನ್‌ಶಿಪ್ ಎಂದರೆ ಮದುವೆಯಾಗದೆ ಪುರುಷ ಮತ್ತು ಸ್ತ್ರೀ ಜೊತೆಯಾಗಿ ವಾಸಿಸುವುದು)

ಪ್ರಯಾಗ್‌ರಾಜ್ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ‘ಲಿವ್-ಇನ್ ರಿಲೇಶನ್‌ಶಿಪ್’ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ, ಅಪಹರಣ, ಅತ್ಯಾಚಾರ, ‘ಪೋಕ್ಸೊ’ (POCSO) ಕಾಯ್ದೆ ಮತ್ತು ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ದೋಷಿ ಎನ್ನಲಾಗಿದ್ದ ಯುವಕನ ವಿರುದ್ಧದ ಎಲ್ಲಾ ಶಿಕ್ಷೆಗಳನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಇಬ್ಬರು ವಯಸ್ಕ ವ್ಯಕ್ತಿಗಳು ಪರಸ್ಪರ ಒಪ್ಪಿಗೆಯಿಂದ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿದ್ದು, ನಂತರ ಅವರ ಸಂಬಂಧ ಮುರಿದುಬಿದ್ದರೆ, ಕೇವಲ ಆ ಕಾರಣಕ್ಕಾಗಿ ಪುರುಷನನ್ನು ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಲುಕಿಸುವುದು ಕಾನೂನಿನ ದುರುಪಯೋಗ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಕಾನೂನುಗಳನ್ನು ರೂಪಿಸಿದಾಗ ‘ಲಿವ್-ಇನ್ ರಿಲೇಶನ್‌ಶಿಪ್’ ಎಂಬ ಪರಿಕಲ್ಪನೆಯೇ ಅಸ್ತಿತ್ವದಲ್ಲಿರಲಿಲ್ಲ ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಹೇಳಿದೆ.
Allahabad HC rules: Consensual relations in a live-in relationship do not constitute rape if the couple later breaks up. ⚖️
The Court quashed a lower court's order, stating a soured relationship isn't grounds for criminal charges.#LegalNews pic.twitter.com/uonpgrCtz1
— Sanatan Prabhat (@SanatanPrabhat) January 28, 2026
1. ಆಗಸ್ಟ್ 2021ರಲ್ಲಿ ಓರ್ವ ದಲಿತ ಯುವತಿಯೊಬ್ಬಳ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅದರಲ್ಲಿ, ಫೆಬ್ರವರಿ 2021 ರಲ್ಲಿ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಯುವಕನೊಬ್ಬ ಮದುವೆಯ ಆಮಿಷ ತೋರಿಸಿ ತನ್ನ ಮಗಳನ್ನು ಮನೆಯಿಂದ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿತ್ತು. ಯುವಕನು ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿ ನಂತರ ಮನೆಯಿಂದ ಹೊರಹಾಕಿದ್ದಾನೆ ಎಂದು ಆರೋಪ ಇತ್ತು.
2. ಈ ಪ್ರಕರಣದಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 323, 363, 366, 376 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 6 ಹಾಗೂ ಎಸ್‌ಸಿ-ಎಸ್‌ಟಿ ಕಾಯ್ದೆಯ ಸೆಕ್ಷನ್ 3(2)(v) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮಹಾರಾಜ್‌ಗಂಜ್‌ನ ವಿಶೇಷ ನ್ಯಾಯಾಲಯವು ಯುವಕನನ್ನು ದೋಷಿ ಎಂದು ಘೋಷಿಸಿ, ಪೋಕ್ಸೊ ಅಡಿಯಲ್ಲಿ 20 ವರ್ಷಗಳ ಜೈಲು ಶಿಕ್ಷೆ ಮತ್ತು ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
3. ಆರೋಪಿ ಯುವಕನು ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದನು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿದ್ಧಾರ್ಥ್ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಮಿಶ್ರಾ ಅವರ ಪೀಠವು, ಘಟನೆ ನಡೆದ ಸಮಯದಲ್ಲಿ ಸಂತ್ರಸ್ತ ಯುವತಿಯು ವಯಸ್ಕಳಾಗಿದ್ದಳು ಎಂದು ಗಮನಿಸಿತು. ಮುಖ್ಯ ವೈದ್ಯಕೀಯ ಅಧಿಕಾರಿಯ ಪ್ರಮಾಣಪತ್ರದ ಆಧಾರದ ಮೇಲೆ, ಆಗಸ್ಟ್ 2021 ರಲ್ಲಿ ಆಕೆಗೆ 20 ವರ್ಷ ವಯಸ್ಸಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
4. ಯುವತಿಯು ತನ್ನ ಸ್ವ ಇಚ್ಛೆಯಿಂದ ಆರೋಪಿಯೊಂದಿಗೆ ಹೋಗಿದ್ದಳು ಮತ್ತು ಇಬ್ಬರೂ 6 ತಿಂಗಳ ಕಾಲ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿದ್ದರು. ಅವರಿಬ್ಬರೂ ಸಾರ್ವಜನಿಕವಾಗಿ ಮತ್ತು ಜನರ ನಡುವೆ ವಾಸಿಸುತ್ತಿದ್ದರಿಂದ, ಬಲವಂತದ ಅಪಹರಣ ಅಥವಾ ಮದುವೆಗಾಗಿ ಒತ್ತಡ ಹೇರಿದ ಆರೋಪ ಸಾಬೀತಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
5. ಸಂತ್ರಸ್ತೆಯು ವಯಸ್ಕಳಾಗಿದ್ದು, ಇಬ್ಬರ ನಡುವಿನ ದೈಹಿಕ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ಕೂಡಿದ್ದರೆ, ಅಲ್ಲಿ ಪೋಕ್ಸೊ ಕಾಯ್ದೆ ಅಥವಾ ಅತ್ಯಾಚಾರದ ಸೆಕ್ಷನ್ ಅನ್ವಯಿಸುವುದಿಲ್ಲ, ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಶಿಕ್ಷೆಯಾಗಲು ಮೂಲ ಅಪರಾಧ ಸಾಬೀತಾಗುವುದು ಅಗತ್ಯ, ಆದರೆ ಈ ಪ್ರಕರಣದಲ್ಲಿ ಅಂತಹ ಯಾವುದೇ ಅಪರಾಧ ಕಂಡುಬಂದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
6. ಉಚ್ಚ ನ್ಯಾಯಾಲಯವು ಕೆಳ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ಆರೋಪಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ